ಅಪ್ಪು ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡ ನಟ ಯಶ್

ಇಂದು ಪುನೀತ್​ ರಾಜ್​ಕುಮಾರ್ (Puneeth Rajkumar)​ ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಬಂದಿದೆ. 

Written by - Chetana Devarmani | Last Updated : Mar 18, 2022, 11:09 AM IST
  • ಇಂದು ಪುನೀತ್​ ರಾಜ್​ಕುಮಾರ್ ಅವರ ಹುಟ್ಟುಹಬ್ಬ
  • ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ
  • ಅಪ್ಪು ಜೊತೆಗೆ ವಿಶೇಷ ಫೋಟೋ ಹಂಚಿಕೊಂಡ ನಟ ಯಶ್
ಅಪ್ಪು ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡ ನಟ ಯಶ್   title=
ನಟ ಯಶ್

ಇಂದು ಪುನೀತ್​ ರಾಜ್​ಕುಮಾರ್ (Puneeth Rajkumar)​ ಇಲ್ಲದೇ ಮೊದಲ ಬಾರಿಗೆ ಅವರ ಹುಟ್ಟುಹಬ್ಬ ಆಚರಣೆ ಮಾಡುವ ಪರಿಸ್ಥಿತಿ ಬಂದಿದೆ. ಅಪ್ಪು ಅಭಿಮಾನಿಗಳು ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಈ ಸುದಿನದಂದೇ ಜೇಮ್ಸ್ ಚಿತ್ರ ಕೂಡ ರಿಲೀಸ್ ಆಗಿದೆ. 

ಕಳೆದ ವರ್ಷ ಅ.29ರಂದು ಹೃದಯಾಘಾತದಿಂದ ನಿಧನರಾದ ಅಪ್ಪು ಅವರನ್ನು ಎಲ್ಲರೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಮರೆಯಾದರೂ ಮರೆಯಲಾಗದ ಅಪ್ಪುವನ್ನು ಸಿನಿ ತಾರೆಯರು ಸಹ ಸ್ಮರಿಸಿದ್ದಾರೆ. 

ಇದನ್ನೂ ಓದಿ: James Movie Review : ದೇಶಭಕ್ತಿ ಸಾರಿದ 'ಜೇಮ್ಸ್‌'..! ಪವರ್‌ ಸ್ಟಾರ್ ಸಿನಿಮಾ ಹೇಗಿದೆ..?‌

ಪುನೀತ್ ಹುಟ್ಟು ಹಬ್ಬಕ್ಕೆ (Appu Birthday) ವಿಶ್ ಮಾಡಿದ ನಟ ರಾಕಿಂಗ್ ಸ್ಟಾರ್ ಯಶ್ (Yash), ವಿಶೇಷವಾದ ಫೋತೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಪುನೀತ್​ ರಾಜ್​ಕುಮಾರ್​ ಅವರ ಬಗೆಗಿನ ನೆನಪುಗಳು ಎಂದಿಗೂ ಶಾಶ್ವತವಾಗಿ ಇರುತ್ತವೆ. ಅದರಲ್ಲೂ ಕೆಲವು ಹಳೇ ವಿಡಿಯೋಗಳು ವೈರಲ್ (Viral Video)​ ಆದಾಗ ಅಪ್ಪು ನೆನಪು ಇನ್ನಷ್ಟು ಕಾಡುತ್ತದೆ.  

ಎಂದೂ ಮರೆಯಾಗದ ನಗು,
ಎಂದಿಗೂ ಹೋಲಿಸಲಾಗದ ಆ ಬಿಸಿ,
ಎಂದಿಗೂ ನಿಲ್ಲಿಸಲಾಗದ ಶಕ್ತಿ,
ಎಂದಿಗೂ ಕಸಿದುಕೊಳ್ಳಲಾಗದ ಪವರ್..
ಹುಟ್ಟು ಹಬ್ಬದ ಶುಭಾಶಯಗಳು ಅಪ್ಪು ಸರ್.
- ಎಂದು ಬರೆದುಕೊಂಡಿರುವ ಯಶ್ ಅಪ್ಪು ಜನ್ಮದಿನಕ್ಕೆ ಶುಭಕೋರಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News