"ಕಿಸ್​ ಮಾಡಿ, ಪ್ಯಾಂಟ್ ಬಿಚ್ಚು ಅಂದ್ರು ಆ ಡೈರೆಕ್ಟರ್‌" : ಖ್ಯಾತ ನಟನಿಗೂ ಕಾಸ್ಟಿಂಗ್‌ ಕೌಚ್!

Zeeshan Khan: ಬಿಗ್ ಬಾಸ್ OTT ಮತ್ತು ಲಾಕ್ ಅಪ್ ಖ್ಯಾತಿಯ ಜೀಶನ್ ಖಾನ್ ಮನರಂಜನಾ ಉದ್ಯಮದಲ್ಲಿ ಕಾಸ್ಟಿಂಗ್ ಕೌಚ್ ಅನುಭವಿಸಿದ ಕರಾಳ ಅನುಭವವನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಇಂಡಸ್ಟ್ರಿಯಲ್ಲಿ ತಾನು ಎದುರಿಸಬೇಕಾಗಿದ್ದ ಹಲವಾರು ಅಹಿತಕರ ಸನ್ನಿವೇಶಗಳ ಬಗ್ಗೆ ಹಂಚಿಕೊಂಡಿದ್ದಾರೆ.  

Written by - Chetana Devarmani | Last Updated : Jun 16, 2023, 10:45 PM IST
  • ಬಿಗ್ ಬಾಸ್ OTT, ಲಾಕ್ ಅಪ್ ಖ್ಯಾತಿಯ ಜೀಶನ್ ಖಾನ್‌
  • ಕಾಸ್ಟಿಂಗ್ ಕೌಚ್ ಅನುಭವಿಸಿದ ಕರಾಳ ಅನುಭವ
  • "ಕಿಸ್​ ಮಾಡಿ, ಪ್ಯಾಂಟ್ ಬಿಚ್ಚು ಅಂದ್ರು ಆ ಡೈರೆಕ್ಟರ್‌"
"ಕಿಸ್​ ಮಾಡಿ, ಪ್ಯಾಂಟ್ ಬಿಚ್ಚು ಅಂದ್ರು ಆ ಡೈರೆಕ್ಟರ್‌" : ಖ್ಯಾತ ನಟನಿಗೂ ಕಾಸ್ಟಿಂಗ್‌ ಕೌಚ್!  title=

Zeeshan Khan: ಇತ್ತೀಚೆಗೆ ಜನಪ್ರಿಯ ನಟ ಬಿಗ್ ಬಾಸ್ OTT ಮತ್ತು ಲಾಕ್ ಅಪ್ ಖ್ಯಾತಿಯ ಜೀಶನ್ ಖಾನ್ ತಮ್ಮ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದ ನಟ ಜೀಶಾನ್ ಖಾನ್ ತಮಗಾದ ಕೆಲವು ಕಹಿ ಅನುಭವಗಳ ಕುರಿತು ಮಾತನಾಡಿದ್ದಾರೆ. ಇಂಡಸ್ಟ್ರಿಯಲ್ಲಿನ ಖ್ಯಾತ ಕಾಸ್ಟಿಂಗ್ ಡೈರೆಕ್ಟರ್‌ನಿಂದ ಅವರು ಕಾಸ್ಟಿಂಗ್‌ ಕೌಚ್‌ ಅನುಭವಿಸಿದ್ದರೆಂದು ಹೇಳಿಕೊಂಡಿದ್ದಾರೆ. 

ನಟನು ತನ್ನ ಮೊದಲ ಕೆಲಸದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅಲ್ಲಿ ಅವರು ದಿನಕ್ಕೆ 3000 ರೂಪಾಯಿಗಳನ್ನು ಸ್ಟೈಫಂಡ್ ಆಗಿ ಪಡೆಯುತ್ತಿದ್ದರಂತೆ. ಆದರೆ ಆ ಹಣವನ್ನು ಪಡೆಯಲು, ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಮುಖ್ಯಸ್ಥರನ್ನು ಕೇಳಬೇಕಾಗಿತ್ತು ಅಂತೆ. ಅವರು ಸ್ಟೈಫಂಡ್ ನೀಡಲು ನಿರಾಕರಿಸಿದರಂತೆ. 

"ನಾನು ಯಾವತ್ತೂ ಆ ದಾರಿಯಲ್ಲಿ ಹೋಗಲು ಬಯಸಲಿಲ್ಲ, ನಾನು ಹೋಗಬೇಕೆಂದು ಅವರು ಬಯಸಿದ್ದರು. ನಾನು ಈ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಕೆಲಸ ಪಡೆಯಲು ಈ ರೀತಿ ಮಾಡಬೇಕಾದ ಅನೇಕ ಜನರು ನನಗೆ ಗೊತ್ತು. ಅವರು ಮುಂದೆ ಹೋಗಿಲು, ಕೆಲಸಕ್ಕಾಗಿ ಮತ್ತು ಎಲ್ಲದಕ್ಕೂ ಅಂತಹ ಕೆಲಸಗಳನ್ನು ಮಾಡಿದ್ದಾರೆ. ಆದರೆ ನಾನು ರಾತ್ರಿ ಮಲಗಿದಾಗ ಮನಸ್ಸು ಶಾಂತಿಯಿಂದ ಇರಬೇಕು. ನಾನು ಏನೋ ಮಾಡಿದ್ದೇನೆ, ಅದು ಹೊರಬಂದರೆ ಎಂಬ ಆಲೋಚನೆಯೊಂದಿಗೆ ರಾತ್ರಿ ಮಲಗಲು ನಾನು ಬಯಸುವುದಿಲ್ಲ" ಎಂದು ಜೀಶನ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಗಿನ್ನಿಸ್ ದಾಖಲೆ ಮಾಡುವತ್ತ "ದೇವರ ಆಟ ಬಲ್ಲವರಾರು"

ಅಂತಹ ಒಂದು ಘಟನೆಯನ್ನು ವಿವರಿಸಿದ ಜೀಶನ್ ಖಾನ್, ತನ್ನ ಕಛೇರಿಯಲ್ಲಿ ಕಾಸ್ಟಿಂಗ್ ನಿರ್ದೇಶಕರನ್ನು ಭೇಟಿಯಾದುದನ್ನು ನೆನಪಿಸಿಕೊಂಡರು. "ನನ್ನ ದೇಹವನ್ನು ತೋರಿಸಲು ಅವರು ನನ್ನನ್ನು ಕೇಳಿದರು. ಆಗ ನಾನು ನಿಮಗೆ ಫೋಟೋಗಳನ್ನು ಕಳುಹಿಸುತ್ತೇನೆ ಎಂದೆ. ಅದಕ್ಕೆ ಅವರು ಒಪ್ಪಲಿಲ್ಲ. ಈಗಲೇ ನೋಡಬೇಕು ಎಂದರು. ಅದಕ್ಕೆ ನಾನು ಮನಸ್ಸಿಲ್ಲದಿದ್ದರೂ ಟೀ ಶರ್ಟ್ ತೆಗೆದೆ. ಆ ಬಳಿಕ ನನಗೆ ನಿಮ್ಮ ಕಾಲುಗಳನ್ನು ನೋಡಬೇಕು ಎಂದ್ರು. ಪ್ಯಾಂಟ್‌ ಬಿಚ್ಚಿ ಎಂದು ಒತ್ತಾಯಿಸಿದರು. ನಾನು ಅವರ ಮಾತನ್ನು ನಿರಾಕರಿಸಿದೆ. ಆಗ ಅವರಿಗೆ ಕೋಪ ಬಂತು. ನಿಮ್ಮಂತಹ ಅನೇಕರನ್ನು ನಾನು ನೋಡಿದ್ದೇನೆ, ಕೆಲಸ ಬೇಕು ಅಂದ್ರೆ ಇಂಥದ್ದೆಲ್ಲ ಮಾಡಬೇಕಾಗುತ್ತೆ ಅಂದ್ರು" ಎಂದು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟರು. 

ಲಾಂಚ್ ಸಮಾರಂಭವೊಂದರಲ್ಲಿ ಫ್ಯಾಷನ್ ಡಿಸೈನರ್ ಒಮ್ಮೆ ತನಗೆ ಮುತ್ತು ಕೊಡಲು ಯತ್ನಿಸಿದ್ದನ್ನು ಸಹ ನಟ ಬಹಿರಂಗಪಡಿಸಿದ್ದಾರೆ. "ಅವರನ್ನು ತಬ್ಬಿಕೊಂಡಾಗ, ನನ್ನ ತುಟಿಗೆ ಮುತ್ತಿಟ್ಟಿದ್ದರು. ನಾನು ಕೂಡಲೇ ಅವರಿಂದ ಬಿಡಿಸಿಕೊಂಡೆ. ಅಲ್ಲದೇ ಅವರು ನನ್ನ ಕೆನ್ನೆಗೆ ಸಹ ಕಿಸ್ ಮಾಡಿದರು. ಇನ್ನೊಮ್ಮೆ ನನ್ನ ಜೊತೆ ಇದನ್ನೆಲ್ಲ ಮಾಡಬೇಡಿ ಎಂದು ಅವರಿಗೆ ಹೇಳಿದೆ" ಎಂದು ಮತ್ತೊಂದು ಕರಾಳ ಘಟನೆಯನ್ನು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: Adipurush Twitter Review: ಆದಿಪುರುಷ ಟ್ವಿಟ್ಟರ್ ವಿಮರ್ಶೆ.. ಹೀಗಿದೆ ಪ್ರೇಕ್ಷಕರ ಪ್ರತಿಕ್ರಿಯೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News