Adipurush Twitter Review: ಆದಿಪುರುಷ ಟ್ವಿಟ್ಟರ್ ವಿಮರ್ಶೆ.. ಹೀಗಿದೆ ಪ್ರೇಕ್ಷಕರ ಪ್ರತಿಕ್ರಿಯೆ!

Adipurush Twitter Review: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದ ಆದಿಪುರುಷ ಸಿನಿಮಾ ಇಂದು ತೆರೆ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಾರಂಭಿಸಿದೆ. ಟ್ವಿಟ್ಟರ್ ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ವಿಮರ್ಶೆಗಳನ್ನು ನೀಡುತ್ತಿದ್ದಾರೆ.    

Written by - Chetana Devarmani | Last Updated : Jun 16, 2023, 03:36 PM IST
  • ಭಾರೀ ನಿರೀಕ್ಷೆ ಹುಟ್ಟು ಹಾಕಿದ ಆದಿಪುರುಷ ಸಿನಿಮಾ
  • ಇಂದು ರಿಲೀಸ್‌ ಆಗ ಪ್ರಭಾಸ್‌ ನಟನೆಯ ಆದಿಪುರುಷ
  • ಟ್ವಿಟ್ಟರ್ ನಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ವಿಮರ್ಶೆ
Adipurush Twitter Review: ಆದಿಪುರುಷ ಟ್ವಿಟ್ಟರ್ ವಿಮರ್ಶೆ.. ಹೀಗಿದೆ ಪ್ರೇಕ್ಷಕರ ಪ್ರತಿಕ್ರಿಯೆ! title=

Adipurush Twitter Review: ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಚಿತ್ರ ಆದಿಪುರುಷ. ಓಂ ರಾವುತ್ ನಿರ್ದೇಶನದ ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ಜಾನಕಿಯ ಪಾತ್ರದಲ್ಲಿ ನಟಿಸಿದ್ದಾರೆ. ನಟಪ ಪ್ರಭಾಸ್‌ ರಾಮನಾಗಿ ಅಭಿನಯಿಸಿದ್ದಾರೆ. ಭೂಷಣ್ ಕುಮಾರ್ ಅವರು ಟಿ ಸಿರೀಸ್ ಬ್ಯಾನರ್ ಅಡಿಯಲ್ಲಿ ಆದಿಪುರುಷ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾ ಇಂದು (ಜೂನ್ 16) ಪ್ರೇಕ್ಷಕರ ಮುಂದೆ ಬಂದಿದೆ. 'ಆದಿಪುರುಷ' ಚಿತ್ರವನ್ನು 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದನ್ನು ವೀಕ್ಷಿಸಿದ ಜನರು ಟ್ವಿಟ್ಟರ್ ನಲ್ಲಿ ಸಿನಿಮಾ ಬಗ್ಗೆ ವಿಮರ್ಶೆಗಳನ್ನು ನೀಡುತ್ತಿದ್ದಾರೆ.  

ಟ್ವಿಟ್ಟರ್ ನಲ್ಲಿ ಆದಿಪುರುಷನಿಗೆ ಹೊಗಳಿಕೆಯ ಸುರಿಮಳೆಯಾಗುತ್ತಿದೆ. ಈಗಿನ ಜನರೇಷನ್‌ಗಾಗಿ ಸಿನಿಮಾ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರಕಥೆ ಮತ್ತು ಸಂಗೀತ ಸೂಪರ್ ಎಂದು ಹೇಳುತ್ತಿದ್ದಾರೆ. ಕೆಲವು ದೃಶ್ಯಗಳನ್ನು ನೋಡುವಾಗ ರೋಮಾಂಚನವಾಗುತ್ತದೆ ಎಂದು ಕಾಮೆಂಟ್ ಮಾಡಲಾಗುತ್ತಿದೆ. ವಿಎಫ್‌ಎಕ್ಸ್ ಅನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಾಹಸ ದೃಶ್ಯಗಳು ಅದ್ಭುತವಾಗಿವೆ ಎಂದು ಟ್ವಿಟ್ಟರ್‌ನಲ್ಲಿ ಸಿನಿಮಾ ಬಗ್ಗೆ ಜನರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Adipurush review : ಪ್ರಭಾಸ್‌ ʼಆದಿಪುರುಷʼ ರಿಲೀಸ್‌ : ಹೇಗಿದೆ ಸೀತಾ-ರಾಮ ಪ್ರೇಮಕಥಾ ಸಿನಿಮಾ..!

ಇಡೀ ಚಿತ್ರಮಂದಿರಗಳು ಜೈಶ್ರೀರಾಮ್ ಅಬ್ಬರದಿಂದ ಗಿಜಿಗುಡುತ್ತಿವೆ. ಸಿನಿಮಾ ನೋಡಿ ಸಂತಸದಿಂದ ಹೊರ ಬರುತ್ತಿದ್ದಾರೆ. ಆರು ವರ್ಷಗಳ ನಂತರ ಪ್ರಭಾಸ್ ಅಭಿಮಾನಿಗಳಿಗೆ ರಸದೌತಣ ನೀಡಿದಂತಾಗಿದೆ. 

ಮೊದಲಾರ್ಧ ಚೆನ್ನಾಗಿದೆ, ಆದರೆ ದ್ವಿತೀಯಾರ್ಧದ ಮಧ್ಯ ಸ್ವಲ್ಪ ಸಪ್ಪೆಯಾಗಿದೆ ಎಂದು ಕೆಲವು ನೆಟ್ಟಿಜನ್‌ಗಳು ರಿವ್ಯೂ ನೀಡಿದ್ದಾರೆ. ಮೊದಲಾರ್ಧದ ಸಂಪೂರ್ಣ ಚೆನ್ನಾಗಿದೆ.. ಆದರೆ ದ್ವಿತೀಯಾರ್ಧದಲ್ಲಿ ವಿಎಫ್‌ಎಕ್ಸ್ ಮತ್ತು ಲಾಂಗ್ ಕ್ಲೈಮ್ಯಾಕ್ಸ್ ಫೈಟ್ ಬಿಟ್ಟರೆ ಬೇರೇನೂ ಇಲ್ಲ ಎಂದು ಸಹ ಜನ ಹೇಳುತ್ತಿದ್ದಾರೆ. ಆದರೆ ಸಂಗೀತ ಸೂಪರ್.. ಸಿನಿಮಾಗೆ ಹಾಡುಗಳೇ ಬೆನ್ನೆಲುಬು ಎಂದು ಕೆಲವರು ಹೇಳುತ್ತಿದ್ದಾರೆ.  

ಸಿನಿಮಾಟೋಗ್ರಫಿ ಅದ್ಭುತವಾಗಿದೆ. ಬಿಜಿಎಂ, ದೃಶ್ಯಗಳು, ಗ್ರಾಫಿಕ್ಸ್ ಮತ್ತು ಫೈಟ್ ಸೀಕ್ವೆನ್ಸ್ ಪರ್ಫೆಕ್ಟ್ ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಆದಿಪುರುಷ ಬಹಳ ಮುಖ್ಯ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಪ್ರಭಾಸ್ ನಟನೆ ಸೂಪರ್. ಹಿನ್ನೆಲೆ ಸಂಗೀತ ನೆಕ್ಸ್ಟ್‌ ಲೆವಲ್‌ನಲ್ಲಿದೆ ಎಂದು ಕೆಲವರು ಹೇಳಿದ್ದಾರೆ. ಕೆಲವರು 3ಡಿ ದೃಶ್ಯಗಳನ್ನೂ ಹೊಗಳಿದ್ದಾರೆ.

ಇದನ್ನೂ ಓದಿ: ʼಅಲ್ಲು ಅರ್ಜುನ್‌ʼ ಒಡೆತನದ ಹೊಸ ಥಿಯೇಟರ್‌ನಲ್ಲಿ ʼಪ್ರಭಾಸ್‌ ಆದಿಪುರುಷʼ ಫಸ್ಟ್‌ ಶೋ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News