ಚಂದನವನದಲ್ಲಿ ಇತ್ತೀಚಿಗೆ ಮದುವೆಯ ಪರ್ವ ಆರಂಭವಾಗಿದೆ ಎಂದರೆ ಹುಸಿಯಾಗಲಾರದು. ಹೌದು, ಧೃವ ಸರ್ಜಾ- ಮೇಘನಾ, ರಕ್ಷಿತ್ ಶೆಟ್ಟಿ-ರಶ್ಮಿಕ ಮಂದಣ್ಣ ಹೀಗೆ ಹಲವಾರು ತಾರೆಗಳು ಮದುವೆಯ ತಯಾರಿಯಲ್ಲಿದ್ದಾರೆ. ಅಂತಹವರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ ಗೂಗ್ಲಿ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಹಾಗೂ ಕಾಫಿತೋಟ ಚಿತ್ರದ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವರಿಸಲಿದ್ದಾರೆ.
ಹೌದು.. ಕೊನೆಗೂ ಆ ದಿನ ಬಂದೇ ಬಿಟ್ಟಿತು. ನನ್ನ ಮುಂದಿನ ಜೀವನದ ಹೆಜ್ಜೆಯ ಜೊತೆ ಹೆಜ್ಜೆ ಇಡಲು ಗುರು ಹಿರಿಯರು ನಿಶ್ಚಯಿಸಿರುವ,ಅಪೇಕ್ಷೆ ಪಟ್ಟಿರುವ ಅಪೇಕ್ಷಾಳ ಜೊತೆ ನನ್ನ ನಿಶ್ಚಿತಾರ್ಥ, ಇದೇ ಡಿಸೆಂಬರ್ ಏಳನೇ ತಾರೀಖು ನಿಮ್ಮೆಲ್ಲರ ಶುಭಾಶೀರ್ವಾದ ನಮ್ಮ ಮೇಲೆ ಇರಲಿ. ಧನ್ಯವಾದಗಳು 😊
— Pavan Wadeyar (@PavanWadeyar) November 29, 2017
ಹೌದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು,
ಡಿ. 7ರಂದು ಅವರ ನಿಶ್ಚಿತಾರ್ಥ ನಡೆಯಲಿದೆ. 2018ರ ಆಗಸ್ಟ್ ನಲ್ಲಿ ಇವರಿಬ್ಬರ ವಿವಾಹ ನೆರವೇರಲಿದೆ ಎಂದು ತಿಳುದುಬಂದಿದೆ.