Megha Shetty: ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ.. ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.!

Megha Shetty Bold Video : ಮೇಘಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟಿವ್‌ ಆಗಿರುತ್ತಾರೆ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಗ್ಲಿಂಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಮೇಘಾ ಶೆಟ್ಟಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. 

Written by - Chetana Devarmani | Last Updated : Mar 3, 2023, 09:07 AM IST
  • ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ
  • ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.!
  • ಹಾಟ್‌ ಲುಕ್‌ಗೆ ಕೆಲವರ ಅಸಮಾಧಾನ
Megha Shetty: ನಟಿ ಮೇಘಾ ಶೆಟ್ಟಿ ಫುಲ್ ಬೋಲ್ಡ್ ವಿಡಿಯೋ.. ಪಡ್ಡೆ ಹೈಕ್ಳು ನಿದ್ದೆ ಕೆಡೋದು ಪಕ್ಕಾ.! title=
Megha Shetty

Megha Shetty Hot Video : ನಟಿ ಮೇಘಾ ಶೆಟ್ಟಿ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ಟಿವಿ ಸೀರಿಯಲ್‌ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದ ನಟಿ. ತಮ್ಮ ಬ್ಯೂಟಿ ಜೊತೆ ನಟನೆಯಿಂದಲೂ ಮೇಘಾ ಶೆಟ್ಟಿ ಎಲ್ಲರ ಹೃದಯಗೆದಿದ್ದಾರೆ. ಇಂದು ಮೇಘಾ ಶೆಟ್ಟಿ ಮನೆಮಾತಾಗಿದ್ದಾರೆ. ಮೇಘಾ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಆಕ್ಟಿವ್‌ ಆಗಿರುತ್ತಾರೆ. ಅವರು ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಜೀವನದ ಗ್ಲಿಂಪ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಮೇಘಾ ಶೆಟ್ಟಿ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. 

ಇದನ್ನೂ ಓದಿ : Amitabh Bachchan: ಥಿಯೇಟರ್‌ನಲ್ಲಿ ಅಮಿತಾಭ್ ಪ್ಯಾಂಟ್​ ಒಳಗಡೆ ಇಲಿ ಹೋದಾಗ..

ಜೀ ಕನ್ನಡದಲ್ಲಿ ಬರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಎಲ್ಲರ ಮನೆ ಮನ ಗೆದ್ದ ನಟಿ ಯಾವಾಗಲೂ ಟ್ರೆಡಿಷನಲ್ ಲುಕ್ ನಲ್ಲಿಯೇ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅನು ಸಿರಿಮನೆಯಾಗಿ ಮನೆಮಾತಾಗಿದ್ದಾರೆ. ಅನೇಕ ಹುಡುಗರು ಮೇಘಾ ಶೆಟ್ಟಿಯನ್ನು ಹೆಚ್ಚಾಗಿ ಇಷ್ಟಪಡೋದು ಆ ಟ್ರೆಡಿಷನಲ್ ಲುಕ್‌ಗೆ. ಆದರೆ ಮೇಘಾ ಶೆಟ್ಟಿ ಈ ಹೊಸ ವಿಡಿಯೋದಲ್ಲಿ ಫುಲ್‌ ಡಿಫರೆಂಟ್‌ ಆಗಿ ಕಾಣಿಸಿದ್ದು, ಕೆಲವರ ಹಾರ್ಟ್‌ ಬೀಟ್‌ ಹೆಚ್ಚಾಗಿದ್ರೆ ಮತ್ತೆ ಕೆಲವರ ಅಸಮಾಧಾನಕ್ಕೂ ಇದು ಕಾರಣವಾಗಿದೆ. 

 

 

ಮೇಘಾ ಶೆಟ್ಟಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಬೋಲ್ಡ್ ಲುಕ್ ಜೊತೆಗೆ ಸಖತ್ ಹಾಟ್ ಎನ್ನುವಂತೆ ಕಂಡಿದ್ದಾರೆ. ಪಡ್ಡೆ ಹೈಕ್ಳು ಈ ವಿಡಿಯೋ ನೋಡಿದ್ರೆ ನಿದ್ದೆ ಕೆಡುವುದಂತೂ ಪಕ್ಕಾ. ನದಿಯ ಬಳಿ, ಲ್ಯಾಟಿನ್ ಹಿಡಿದು, ಬಿಳಿ ಬಣ್ಣದ ಗೌನ್ ತೊಟ್ಟು ನಡೆದು ಹೋಗುವ ಮೇಘಾ ಶೆಟ್ಟಿ ಕಂಡರೆ ಯುವಕರಿಗೆ ರತಿಯನ್ನು ನೋಡಿದ ಮನ್ಮಥನ ಫೀಲ್‌ ಆಗುತ್ತೆ. ಮೇಘಾ ಶೆಟ್ಟಿ ಮೋಹಕ ಲುಕ್‌ ಅಂತೂ ಹುಡುಗರ ದಿಲ್‌ಗೆ ಕಿಡಿಯಿಡುವಂತಿದೆ. 

ಇದನ್ನೂ ಓದಿ : Kiccha Sudeep : ಸುದೀಪ್ ಮುಂದಿನ ಚಿತ್ರದ ಬಗ್ಗೆ ಅನೂಪ್ ಭಂಡಾರಿ ಬಿಗ್‌ ಅಪ್‌ಡೇಟ್‌.!?

ಮೇಘಾ ಶೆಟ್ಟಿಯ ಈ ವಿಡಿಯೋಗೆ ಅನೇಕ ನೆಗೆಟಿವ್ ಕಮೆಂಟ್ಸ್ ಬಂದಿವೆ. ಒಂದಷ್ಟು ಜನ ವಾವ್ ಅಂದಿದ್ರೆ ಇನ್ನೂ ಹಲವರು ನೆಗೆಟಿವ್‌ ಆಗಿ ಪ್ರತಿಕ್ರಿಯಿಸಿದ್ದಾರೆ. "ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು" ಎಂದು ಒಬ್ಬರಿ ಕಮೆಂಟ್‌ ಮಾಡಿದ್ದಾರೆ. "ಈ ರೀತಿಯ ಬಟ್ಟೆಯೆಲ್ಲಾ ಇರುವಂತಹ ವಿಡಿಯೋ ಬೇಕಾ?" ಎಂದು ಇನ್ನೂ ಕೆಲವರು ಪ್ರಶ್ನಿಸಿದ್ದಾರೆ. ಅದೇನೆ ಇರಲಿ ಸೋಷಿಯಲ್‌ ಮೀಡಿಯಾದಲ್ಲಿ ಸದ್ಯ ಮೇಘಾ ಶೆಟ್ಟಿ ಹಾಟ್‌ ವಿಡಿಯೋ ಮಾತ್ರ ಸಖತ್‌ ಸುದ್ದಿಯಲ್ಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News