ಹೇಗಿದ್ರು.. ಹೀಗ್ಯಾಕಾದ್ರು ನಿಕಿತಾ..! ಏನಾಯ್ತು ನಟಿಗೆ..? ಫೋಟೋ ವೈರಲ್‌

Nikita Thukral : ಒಂದು ಕಾಲದಲ್ಲಿ ಈ ನಟಿ ನಿಕಿತಾ ತುಕ್ರಾಲ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಡಿಮ್ಯಾಂಡ್‌ ಇತ್ತು. ಆದ್ರೆ ಕೆಲವು ಕಾರಣಾಂತರದಿಂದ ಸಿನಿರಂಗದಿಂದ ದೂರ ಉಳಿದರು. ಸಧ್ಯ ನಟಿ ಮದುವೆಯಾಗಿ ಗಂಡನ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ.. ಇದರ ನಡುವೆ ನಟಿಯ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Jul 6, 2024, 07:52 PM IST
    • ನಟಿ ನಿಕಿತಾ ತುಕ್ರಲ್‌ ಇತ್ತೀಚಿನ ಫೋಟೋ ವೈರಲ್‌
    • ಫೋಟೋ ನೋಡಿ ಶಾಕ್‌ ಆದ ನೆಟ್ಟಿಗರು
    • ಹೇಗಿದ್ದ ಚೆಲುವೆ ಹೇಗಾಗಿದ್ದಾಳೆ ಅಂತ ಕಾಮೆಂಟ್‌
ಹೇಗಿದ್ರು.. ಹೀಗ್ಯಾಕಾದ್ರು ನಿಕಿತಾ..! ಏನಾಯ್ತು ನಟಿಗೆ..? ಫೋಟೋ ವೈರಲ್‌ title=
Nikita Thukral

Nikita Thukral latest photo : ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ ಕ್ರೇಜಿ ಹೀರೋಯಿನ್‌ಗಳಲ್ಲಿ ನಿಕಿತಾ ಸಹ ಒಬ್ಬರು. ತಮ್ಮ ಮೊದಲ ಚಲನಚಿತ್ರದಿಂದಲೇ ಉತ್ತಮ ಖ್ಯಾತಿಯನ್ನು ಪಡೆದವರು. ಟಾಲಿವುಡ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚೆಲುವೆ, ಮಹಾರಾಜ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪ್ರವೇಶ ಮಾಡಿದರು..

ಇದೀಗ ಈ ಸುಂದರಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಸುಮಾರು ಆರು ವರ್ಷಗಳೇ ಕಳೆದಿವೆ. ಅಲ್ಲದೆ, ಆಗ ನಟ ದರ್ಶನ್ ಜತೆ ನಿಕಿತಾ ಹೆಸರು ಸಹ ಕೇಳಿ ಬಂದಿತ್ತು. ಆದರೆ ಇದು ಎಷ್ಟು ಸತ್ಯ ಎನ್ನವುದು ಇದುವರೆಗೂ ತಿಳಿದಿಲ್ಲ. ಸಧ್ಯ ಈ ನಟಿಯ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. ಎಷ್ಟು ಬದಲಾಗಿದ್ದಾರೆ.. ನಟಿ ಅಂತ ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.. 

ಇದನ್ನೂ ಓದಿ:ಗಂಡನಿಗೆ 3 ಮದುವೆ.. ಇಂಡಸ್ಟ್ರಿಯಲ್ಲಿ ಸೂಪರ್ ಕ್ರೇಜ್.. ಅರ್ಧಗಂಟೆಗೆ ಒಂದೂವರೆ ಲಕ್ಷ ರೂ.! ಯಾರು ಆ ನಟಿ..?

ನೀ ಟಾಟಾ ನಾ ಬೀರ್ಲಾ, ವಂಶಿ, ರಾಜಕುಮಾರಿ, ದುಬೈ ಬಾಬು, ಯೋಧ, ಗನ್‌, ಪ್ರೀನ್ಸ್‌, ಸ್ನೇಹಿತರು, ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ, ಸಾಪ್ಟವೇರ್‌ ಗಂಡ, ನಮೋ ಭೂತಾತ್ಮ, ರಿಂಗ್‌ ರೋಡ್‌, ತಲೆ ಬಾಚ್ಕೋಳಿ ಪೌಡರ್‌ ಹಾಕ್ಕೋಳಿ ಸೇರಿದಂತೆ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

ಕಲ್ಯಾಣ ರಾಮಡು, ಸಂಭ್ರಮ, ಖುಷಿ ಖುಷಿ, ಅವನೋಯ್ ಶ್ರೀವರು, ಆಗಂತಕೂಡು, ಮಹಾರಾಜಶ್ರೀ, ನೀ ನವ್ವೇ ಚಾಲು, ಅನಸೂಯ, ಭದ್ರಾದ್ರಿ ಮತ್ತು ಹೌದು 2, ಟೆರರ್ ಸೇರಿದಂತ ಹಲವು ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅದರ ನಂತರ ಮಲಯಾಳಂ ಮತ್ತು ತಮಿಳು ಇಂಡಸ್ಟ್ರಿಗೆ ಪ್ರವೇಶಿಸಿದರು.

ಇದನ್ನೂ ಓದಿ:ತಂದೆಯ ವಯಸ್ಸಿನ ಆ ವ್ಯಕ್ತಿ ನನ್ನ ಜೊತೆ...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಸ್ಟಾರ್‌ ನಟಿ

ಸಧ್ಯ ಇಂಡಸ್ಟ್ರಿಯಿಂದ ದೂರ ಸರಿದಿರುವ ನಟಿ, ಮುಂಬೈನ ಉದ್ಯಮಿ ಗಗನ್‌ದೀಪ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೂ ಒಂದು ಮಗುವಾಗಿದೆ. ಸಿನಿಮಾದಿಂದ ದೂರವಿದ್ದರೂ ನಿಖಿತಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. 

ಇತ್ತೀಚಿಗೆ ನಟಿ ಕೆಲವೊಂದಿಷ್ಟು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾಳೆ. ಈ ಮೇಲಿನ ಫೋಟೋ ಕೂಡ ಅದರಲ್ಲಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.. ಅರೇ.. ಹೇಗಿದ್ದವರು ಹೇಗಾಗಿದ್ದಾರೆ.. ನಟಿ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News