Adipurush : ಪ್ರಮುಖ OTT ಕಂಪನಿಗೆ ಆದಿಪುರುಷ ಡಿಜಿಟಲ್ ರೈಟ್ಸ್‌.. ಯಾವಾಗ ಸ್ಟ್ರೀಮಿಂಗ್?

Adipurush OTT Release : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಇತ್ತೀಚಿನ ಬಹು ನಿರೀಕ್ಷಿತ ಬ್ಲಾಕ್‌ಬಸ್ಟರ್ ಚಿತ್ರ ಆದಿಪುರುಷ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇದನ್ನು ದೊಡ್ಡ ಪರದೆ ಮೇಲೆ ನೋಡಲು ಜನರು ಉತ್ಸುಕರಾಗಿದ್ದಾರೆ.   

Written by - Chetana Devarmani | Last Updated : Jun 14, 2023, 01:47 PM IST
  • ಆದಿಪುರುಷ ಬಿಡುಗಡೆಗೆ ಕ್ಷಣಗಣನೆ ಶುರು
  • ಪ್ರಮುಖ OTT ಕಂಪನಿಗೆ ಆದಿಪುರುಷ ಡಿಜಿಟಲ್ ರೈಟ್ಸ್‌
  • ಎಲ್ಲಿ? ಯಾವಾಗ? ಸ್ಟ್ರೀಮಿಂಗ್‌ ಆಗಲಿದೆ ಆದಿಪುರುಷ
Adipurush : ಪ್ರಮುಖ OTT ಕಂಪನಿಗೆ ಆದಿಪುರುಷ ಡಿಜಿಟಲ್ ರೈಟ್ಸ್‌.. ಯಾವಾಗ ಸ್ಟ್ರೀಮಿಂಗ್? title=
Adipurush

Adipurush On OTT : ಯಾವುದೇ ಸಿನಿಮಾ ತೆರೆಗೆ ಬಂದಾಕ್ಷಣ ಜನರು ಅದು ಒಟಿಟಿಯಲ್ಲಿ ಯಾವಾಗ ಬರುತ್ತೋ ಎಂದು ಕಾಯಲು ಆರಂಭಿಸುತ್ತಾರೆ. ಅದಕ್ಕೆ ಕಾರಣ ಎಲ್ಲರೂ ಥಿಯೇಟರ್‌ಗೆ ಹೋಗಲು ಆಗುವುದಿಲ್ಲ, ಅದಕ್ಕಾಗಿ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ. ಇಡೀ ಕುಟುಂಬ ಚಿತ್ರಮಂದಿರಕ್ಕೆ ಹೋಗಬೇಕಾದರೆ ಟಿಕೆಟ್ ದರ ಕೂಡ ಒಂದು ಸಮಸ್ಯೆಯಾಗುತ್ತದೆ. ಈ ಸಮಸ್ಯೆಗೆ ಪರಿಹಾರವೇ OTT. 

ಇಡೀ ಕುಟುಂಬ ಮನೆಯಲ್ಲಿಯೇ ಕುಳಿತು ಒಟ್ಟಿಗೆ ಸಿನಿಮಾಸ ವೀಕ್ಷಿಸುವ ಅವಕಾಶವನ್ನು ಪಡೆಯುತ್ತದೆ. ಅನೇಕ ಚಿತ್ರಗಳು ಬಿಡುಗಡೆಯಾದ ಹದಿನೈದು ದಿನಗಳಲ್ಲಿ, ಒಂದು ತಿಂಗಳೊಳಗೆ ಮತ್ತು ಕೆಲವು ವಾರದೊಳಗೆ OTT ಗಳಲ್ಲಿ ಬರುತ್ತವೆ. ಇದೀಗ ಬಹುನೀರಿಕ್ಷಿತಯ ಸಿನಿಮಾ ಆದಿಪುರುಷ ಜೂನ್‌ 16 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 

ಇದನ್ನೂ ಓದಿ: ಮಹೇಶ್‌ ಬಾಬು ʼಗುಂಟೂರು ಖಾರʼ ಸಿನಿಮಾದಲ್ಲಿ ಶ್ರೀಲೀಲಾ..! ಫಸ್ಟ್‌ ಲುಕ್‌ ಸೂಪರ್‌

ಆದಿಪುರುಷ ಸಿನಿಮಾದ ಒಟಿಟಿಗೆ ಸಂಬಂಧಿಸಿದಂತೆ ತಂಡ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಈ ಸಿನಿಮಾ ಸದ್ಯದಲ್ಲೇ ಒಟಿಟಿಗೆ ಬರುತ್ತೆ ಅಂದುಕೊಂಡರೆ, ನಿಮ್ಮ ಊಹೆ ತಪ್ಪಾಗಬಹುದು. ಇತ್ತೀಚೆಗಷ್ಟೇ ಆದಿಪುರುಷ ಎಂಟು ವಾರಗಳ ನಂತರ ಅಂದರೆ ಆಗಸ್ಟ್ ಎರಡನೇ ವಾರದಲ್ಲಿ ಒಟಿಟಿಗೆ ಬರಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಈ ಸಿನಿಮಾ ಬಿಡುಗಡೆಗೆ ಇನ್ನೂ ಎರಡೇ ದಿನ ಬಾಕಿ ಇದೆ. ಮಾಹಿತಿಯ ಪ್ರಕಾರ, ಈ ಚಿತ್ರದ ಥಿಯೇಟ್ರಿಕಲ್ ನಂತರದ OTT ಹಕ್ಕುಗಳನ್ನು ದೈತ್ಯ ಸ್ಟ್ರೀಮಿಂಗ್ ಕಂಪನಿ Amazon Prime ಸ್ವಾಧೀನಪಡಿಸಿಕೊಂಡಿದೆ. ಎಲ್ಲ ಭಾಷೆಗಳಲ್ಲೂ 150 ಕೋಟಿಗೂ ಹೆಚ್ಚು ಮೊತ್ತಕ್ಕೆ ಈ ಡೀಲ್ ನಡೆದಿದೆ ಎಂದು ಹೇಳಲಾಗಿದೆ. ಆದಿಪುರುಷ ಬಿಡುಗಡೆಯಾದ 50 ದಿನಗಳ ನಂತರ OTT ನಲ್ಲಿ ಸ್ಟ್ರೀಮಿಂಗ್ ಆಗಲಿದೆ.  

ಇದನ್ನೂ ಓದಿ: ಚೀಸ್ ಅಥವಾ ಸೆಕ್ಸ್.. ಯಾವುದನ್ನು‌ ಬಿಟ್ಟು ಪ್ರಿಯಾಂಕಾ ಇರ್ತಾರೆ! ಅವರೇ ಹೇಳಿದ್ದಾರೆ ನೋಡಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News