Aishwarya Rai : ಭುವನ ಸುಂದರಿ ಐಶ್ವರ್ಯಾ ರೈ ಲಿಪ್‌ ಲಾಕ್‌ ಫೋಟೋ ವೈರಲ್‌...!

ಬಾಲಿವುಡ್ ಸ್ಟಾರ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಸುದೀರ್ಘ ವಿರಾಮದ ನಂತರ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ನಂತರ ನಟನೆಯನ್ನು ನಿಲ್ಲಿಸಿದರು. ಕೆಲ ವರ್ಷಗಳ ಗ್ಯಾಪ್ ಬಳಿಕ ಮತ್ತೆ ನಟಿಸಲು ಆರಂಭಿಸಿದ್ದಾರೆ. ಐಶ್ವರ್ಯಾ ರೈ ಕೊನೆಯದಾಗಿ ತಮಿಳಿನ ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ನಂದಿನಿಯಾಗಿ ನಟಿಸಿದ್ದಾರೆ. ಸದ್ಯ ಐಶ್ವರ್ಯಾಗೆ ಸಂಬಂಧಿಸಿದ ಫೋಟೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

Written by - Krishna N K | Last Updated : Nov 17, 2022, 11:49 AM IST
  • ಭುವನ ಸುಂದರಿ ಐಶ್ವರ್ಯಾ ರೈ ಲಿಪ್‌ ಲಾಕ್‌ ಫೋಟೋ ವೈರಲ್‌
  • ಮುದ್ದಿನ ಮಗಳ ತುಟಿಗೆ ಐಶ್ವರ್ಯಾ ಚುಂಬಿಸುತ್ತಿರುವ ಫೋಟೋಗೆ ನೆಟ್ಟಿಗರು ಕಿಡಿ
  • ಇದು ಅಂಸ್ಕೃತಿ ಇಂತಹ ಫೋಟೋಗಳನ್ನು ಹಂಚಿಕೊಳ್ಳಬಾರದು ಎಂದ ನೆಟ್ಟಿಜನ್ಸ್‌
Aishwarya Rai : ಭುವನ ಸುಂದರಿ ಐಶ್ವರ್ಯಾ ರೈ ಲಿಪ್‌ ಲಾಕ್‌ ಫೋಟೋ ವೈರಲ್‌...! title=

Aishwarya Rai : ಬಾಲಿವುಡ್ ಸ್ಟಾರ್‌ ನಟಿ ಐಶ್ವರ್ಯಾ ರೈ ಬಚ್ಚನ್‌ ಸುದೀರ್ಘ ವಿರಾಮದ ನಂತರ ಮತ್ತೆ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳು ಹುಟ್ಟಿದ ನಂತರ ನಟನೆಯನ್ನು ನಿಲ್ಲಿಸಿದರು. ಕೆಲ ವರ್ಷಗಳ ಗ್ಯಾಪ್ ಬಳಿಕ ಮತ್ತೆ ನಟಿಸಲು ಆರಂಭಿಸಿದ್ದಾರೆ. ಐಶ್ವರ್ಯಾ ರೈ ಕೊನೆಯದಾಗಿ ತಮಿಳಿನ ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ನಂದಿನಿಯಾಗಿ ನಟಿಸಿದ್ದಾರೆ. ಸದ್ಯ ಐಶ್ವರ್ಯಾಗೆ ಸಂಬಂಧಿಸಿದ ಫೋಟೋ ಒಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಈ ಚಿತ್ರದ ಯಶಸ್ಸಿನಿಂದ ಖುಷಿಯಾಗಿರುವ ಐಶ್ವರ್ಯಾ ರೈ ಕೆಲವು ದಿನಗಳ ಹಿಂದೆ ತಮ್ಮ ಮಗಳು ಆರಾಧ್ಯ ಅವರ 11ನೇ ಹುಟ್ಟುಹಬ್ಬವನ್ನು ಆಚರಿಸಿದರು. ಮುದ್ದಿನ ಮಗಳ ತುಟಿಗೆ ಚುಂಬಿಸುತ್ತಿರುವ ಫೋಟೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಯಾರಾದರೂ ಮಗಳ ತುಟಿಗಳಿಗೆ ಮುತ್ತು ಕೊಡುತ್ತಾರೆಯೇ..? ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಅಲ್ಲದೆ, ಇದು ಅಸಂಸ್ಕೃತಿ ಎಂದು ಐಶ್ವರ್ಯಾ ರೈ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಟ ಅನೀಶ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅಭಿಷೇಕ್ ಶೆಟ್ಟಿ

ಫೋಟೋ ಹಂಚಿಕೊಂಡಿರುವ ಐಶ್ವರ್ಯಾ, 'ನನ್ನ ಪ್ರೀತಿ... ನನ್ನ ಜೀವನ' ಎಂದು ಶೀರ್ಷಿಕೆ ನೀಡಿದ್ದಾರೆ. ನಿಮ್ಮ ಮಗಳ ಮೇಲೆ ನಿಮಗೆ ಅಪಾರ ಪ್ರೀತಿ ಇರುವುದು ಎಲ್ಲರಿಗೂ ಗೊತ್ತು. ಆದ್ರೆ ಕಿಸ್‌ ಮಾಡುವ ವಿಧಾನ ಸರಿಯಾಗಿಲ್ಲ ಎಂದು ನೆಟ್ಟಿಜನ್ಸ್‌ ಟೀಕಿಸುತ್ತಿದ್ದಾರೆ. ಅಲ್ಲದೆ, ಈ ರೀತಿಯ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಐಶ್ವರ್ಯಾ ರೈ ಅವರಿಗೆ ಬೆಂಬಲಿಸಿ, ತಾಯಿ ಮಗಳ ಸಂಬಂಧ ಅತೀ ಶ್ರೇಷ್ಠ ಬಂಧ. ಅಮ್ಮನಾಗಿ ಮಗಳಿಗೆ ಚುಂಬಿಸಿದ್ದರ ಹಿಂದೆ ಪವಿತ್ರ ಪ್ರೀತಿ ಇದೆ. ಅದರಲ್ಲಿಯೂ ತಪ್ಪು ಕಂಡುಹಿಡಿಯಬೇಡಿ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News