ʼಪುಷ್ಪಾ 2ʼ ಚಿತ್ರತಂಡ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ : ಅಲ್ಲು ಅರ್ಜುನ್‌..!?

Pushpa 2 : ಆಂಧ್ರ ಪ್ರದೇಶ ಊಟಿ ಎಂದು ಖ್ಯಾತಿ ಪಡೆದಿರುವ ಮರೆಡುಮಿಲ್ಲಿಯಲ್ಲಿ ಪುಷ್ಟಾ 2 ಚಿತ್ರಂಡ ಚಿತ್ರೀಕರಣ ಮುಗಿಸಿಕೊಂಡು ಹೈದ್ರಾಬಾದ್‌ನತ್ತ ಬರುತ್ತಿತ್ತು. ಈ ವೇಳೆ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಲಾವಿದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Written by - Krishna N K | Last Updated : May 31, 2023, 02:18 PM IST
  • ಪುಷ್ಟಾ 2 ಚಿತ್ರಂಡ ಚಿತ್ರೀಕರಣ ಮುಗಿಸಿಕೊಂಡು ಹೈದ್ರಾಬಾದ್‌ನತ್ತ ಬರುತ್ತಿತ್ತು.
  • ಈ ವೇಳೆ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಕಲಾವಿದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
  • ಮೊನ್ನೆ ಮೊನ್ನೆಯವರೆಗೂ ಇಡೀ ಚಿತ್ರತಂಡ ಮರೆಡುಮಿಲ್ಲಿಯಲ್ಲಿತ್ತು.
 ʼಪುಷ್ಪಾ 2ʼ ಚಿತ್ರತಂಡ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತ : ಅಲ್ಲು ಅರ್ಜುನ್‌..!? title=

Pushpa 2 Team Met Accident : ಟಾಲಿವುಡ್‌ ಸ್ಟಾರ್‌ ನಟ ಅಲ್ಲು ಅರ್ಜುನ್ ಅಭಿನಯದ ʼಪುಷ್ಪ- ದಿ ರೂಲ್ʼ ಚಿತ್ರತಂಡ ಅಪಘಾತಕ್ಕೀಡಾಗಿದೆ. ಇಂದು ಬೆಳಗ್ಗೆ ಈ ಅವಘಡ ಸಂಭವಿಸಿದೆ. ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದಾಗ ಚಿತ್ರತಂಡವಿದ್ದ ಬಸ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ನಾರ್ಕಟ್ ಪಲ್ಲಿಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ. 

ಅಪಘಾತದಲ್ಲಿ ಗಾಯಗೊಂಡ ಜೂ. ಕಲಾವಿದರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಈ ವೇಳೆ ಅಲ್ಲು ಅರ್ಜುನ್‌ ಅವರು ತಮ್ಮ ಕ್ಯಾರಿವ್ಯಾನ್‌ ನಲ್ಲಿದ್ದರು. ಮೊನ್ನೆ ಮೊನ್ನೆಯವರೆಗೂ ಇಡೀ ಚಿತ್ರತಂಡ ಮರೆಡುಮಿಲ್ಲಿಯಲ್ಲಿತ್ತು. ಅಲ್ಲಿ ಅಲ್ಲು ಅರ್ಜುನ್ ಅವರ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಶೆಡ್ಯೂಲ್ ಮುಗಿದ ಹಿನ್ನೆಲೆ ಇಂದು ಎಲ್ಲರೂ ಹೈದರಾಬಾದ್‌ಗೆ ಬಸ್‌ನಲ್ಲಿ ಹೊರಟಿದ್ದರು. ಅಷ್ಟರಲ್ಲಿ ಈ ಅವಘಡ ಸಂಭವಿಸಿದೆ.

ಇದನ್ನು ಓದಿ:

ಇನ್ನು ಇತ್ತೀಚಿಗೆ ಐಟಿ ದಾಳಿಯಿಂದ ಪುಷ್ಪಾ ಚಿತ್ರೀಕರಣಕ್ಕೆ ಕೊಂಚ ಗ್ಯಾಪ್ ಸಿಕ್ಕಿದೆ. ಮೈತ್ರಿ ಕಚೇರಿಗಳಲ್ಲಿ ಶೋಧ, ಸುಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿರುವುದರಿಂದ ಚಿತ್ರೀಕರಣಕ್ಕೆ ಎರಡ್ಮೂರು ದಿನ ಗ್ಯಾಪ್ ಇದೆಯಂತೆ. ಇದೀಗ ಪುಷ್ಪಾ ತಂಡ ಮತ್ತೊಮ್ಮೆ ಸುದ್ದಿಯಲ್ಲಿದೆ. ಇಂದು ಬೆಳಗ್ಗೆ ನಡೆದ ಈ ಅವಘಡದಿಂದ ಪುಷ್ಪಾ 2 ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

ಪುಷ್ಪ ದಿ ರೂಲ್ ಚಿತ್ರದ ಮೂಲಕ ಅಲ್ಲು ಅರ್ಜುನ್ ಮತ್ತೊಮ್ಮೆ ಭಾರತೀಯ ಬಾಕ್ಸ್ ಆಫೀಸ್ ಮೇಲೆ ದಾಳಿ ನಡೆಸಲು ರೆಡಿಯಾಗಿದ್ದಾರೆ. ಇತ್ತೀಚಿಗೆ ಅಲ್ಲು ಅರ್ಜುನ್‌ ಗಂಗಲಮ್ಮ ಜಾತ್ರೆಯ ಲುಕ್ ರಿಲೀಸ್ ಆದಾಗ ಫುಲ್ ಟ್ರೆಂಡ್ ಆಗಿತ್ತು. ಕಾಳಿ ಮಾತೆಯ ಲುಕ್‌ನಲ್ಲಿ ಅಲ್ಲು ಅರ್ಜುನ್‌ ಕಾಣಿಸಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News