ವಿದೇಶದಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ʼಅಮರ ಮಧುರ ಪ್ರೇಮʼ: ಅಮೇರಿಕಾದಲ್ಲಿ ನಾಗತಿಹಳ್ಲಿ ಚಂದ್ರಶೇಖರ್‌

Nagathihalli Chandrashekhar: ಸ್ಯಾಂಡಲ್‌ವುಡ್‌ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಮೇರಿಕಾದಲ್ಲಿ ತಮ್ಮ ನೆಕ್ಸ್ಟ್‌ ಸಿನಿಮಾ ಶೂಟಿಂಗ್‌ಗಾಗಿ ತೆರೆಳಿದ್ದು, ಅಲ್ಲಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ತಂಡ ಎದುರಿಸಿದ ಸವಾಲುಗಳನ್ನು ಮಾತನಾಡಿದ್ದಾರೆ. 

Written by - Zee Kannada News Desk | Last Updated : Nov 2, 2023, 06:07 PM IST
  • ಅಮೇರಿಕಾದಲ್ಲಿ ʼಅಮರ ಮಧುರ ಪ್ರೇಮʼ ಸಿನಿಮಾ ಚಿತ್ರೀಕರಣ ನಡೆದಿದೆ.
  • ಚಿತ್ರಕ್ಕೆ ಅಮೇರಿಕಾದ ಸಹ್ಯಾದ್ರಿ ಕನ್ನಡ ಸಂಘದವರು ಸಹಾಯ ಮಾಡಿದ್ದಾರೆ.
  • ಈ ಚಿತ್ರದಲ್ಲಿ ನಿರ್ದೇಶಕರು ಮನೋಮೂರ್ತಿ ಜೊತೆ ಮಾಡಿದ್ದಾರೆ.
ವಿದೇಶದಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ʼಅಮರ ಮಧುರ ಪ್ರೇಮʼ: ಅಮೇರಿಕಾದಲ್ಲಿ ನಾಗತಿಹಳ್ಲಿ ಚಂದ್ರಶೇಖರ್‌ title=

Nagathihalli Chandrashekar New Movie: ಅಮೇರಿಕಾ ಅಮೇರಿಕಾ ಎಂಬ ಕ್ಲಾಸಿಕ್ ಸಿನಿಮಾದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ʼಅಮರ ಮಧುರ ಪ್ರೇಮʼ ಎಂಬ ತಮ್ಮ ಮುಂದಿನ ಪ್ರಾಜೆಕ್ಟ್‌ಗಾಗಿ ತಾತ್ಕಾಲಿಕವಾಗಿ ಅಮೇರಿಕಾದಲ್ಲಿ ಕ್ಯಾಂಪ್ ಹಾಕಿದ್ದಾರೆ . ಈ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್, ಪೃಥ್ವಿ ಅಂಬಾರ್ ಮತ್ತು ನಿರೂಪ್ ಭಂಡಾರಿ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರೀಕರಣದ ಬಹುತೇಕ ಪೂರ್ಣಗೊಳಿಸಿರುವ ನಿರ್ದೇಶಕರು ಅಮೆರಿಕದ ಹೃದಯಭಾಗದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

ಸಿಯಾಟಲ್‌ನಿಂದ ಮಾತನಾಡಿದ ನಿರ್ದೇಶಕರು, ಶೀತದ ಹವಾಮಾನ ಮತ್ತು ಮಳೆಯಿಂದಾಗಿ ಶೂಟಿಂಗ್ ಪ್ರಕ್ರಿಯೆಯು ಸಾಹಸಮಯ ಹಾಗೂ ಸವಾಲಿನದ್ದಾಗಿದೆ ಎಂದು ಉಲ್ಲೇಖಿಸಿದ್ದು, ಆದರೆ ಚಿತ್ರೀಕರಣದ ವೇಳೆ ಕನ್ನಡಿಗರಿಂದ ಸಿಕ್ಕ ಬೆಂಬಲದಿಂದ ಸಿನಿತಂಡ ಥ್ರಿಲ್ ಆಗಿದ್ದಾರೆ. ಸಹ್ಯಾದ್ರಿ ಕನ್ನಡ ಸಂಘದ ಭಾಗವಾಗಿರುವ ಮನು ಗರೂರ್ ಮತ್ತು ನಾಗೇಂದ್ರ ಮತ್ತು ಅವರ ಸ್ನೇಹಿತರು ನಮ್ಮನ್ನು ನೋಡಿಕೊಂಡು ಮತ್ತು ಶೂಟಿಂಗ್ ಸುಗಮವಾಗಿ ಸಾಗುವಂತೆ ಸಹ ಕಾಳಜಿ ವಹಿಸಿ, ಬೆಂಬಲಿಸಿದ್ದಾರೆ.

ಇದನ್ನು ಓದಿ: ಸದ್ದಿಲ್ಲದೆ ಚಾಲೆಂಜಿಗ್‌ ಸ್ಟಾರ್‌ ಹೊಸ ಸಿನಿಮಾ ಮುಹೂರ್ತ: ಕಿಚ್ಚನ ಜೊತೆ ನಟಿಸಲಿದ್ದಾರ ದರ್ಶನ್?

ಸಹ್ಯಾದ್ರಿ ಕನ್ನಡ ಸಂಘದವರು ನಮ್ಮ ಸಾರಿಗೆ ಮತ್ತು ಆಹಾರವನ್ನು ನೋಡಿಕೊಂಡರು. ಅವರ ಆತಿಥ್ಯಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಅತ್ಯುತ್ತಮ ದೃಶ್ಯಗಳನ್ನು ಸೆರೆಹಿಡಿದಿದ್ದಕ್ಕಾಗಿ ಛಾಯಾಗ್ರಾಹಕ ಎಸ್‌ಕೆ ರಾವ್  ಮತ್ತು ಕಲಾ ನಿರ್ದೇಶಕ ಶಿವು, ಸಹಾಯಕ ನಿರ್ದೇಶಕ ಸಮೀರ್ ಮತ್ತು ಅವರ ಪತ್ನಿ ಪುಷ್ಪಾ ಸೇರಿದಂತೆ ಟೆಂಟ್ ಸಿನಿಮಾ ತಂಡದ ಕೊಡುಗೆಗಳನ್ನು ಸಹ ಕೃತಜ್ಷತೆ ತಿಳಿಸಿದ್ದಾರೆ. 

ನಿರ್ದೇಶಕರು  ಎಂಭತ್ತರಷ್ಟು ಚಿತ್ರೀಕರಣವನ್ನು ಪೂರ್ಣಗೊಂಡಿದ್ದು, ಚಿತ್ರದ  ಉಳಿದ ಶೂಟಿಂಗನ್ನು ಭಾರತದಲ್ಲೇ ಚಿತ್ರೀಕರಿಸಲಿದ್ದಾರೆ. ಚಿತ್ರದ ಶೀರ್ಷಿಕೆಗೆ ಸಂಬಂಧಿಸಿದಂತೆ ಅಮರ ಮಧುರ ಪ್ರೇಮ , ನಾಗತಿಹಳ್ಳಿ ಇದು ವರ್ಕಿಂಗ್ ಟೈಟಲ್ ಆಗಿದ್ದು ಇನ್ನೂ ಫೈನಲ್‌ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಚಿತ್ರಕ್ಕೆ ಅಮೇರಿಕಾ ಅಮೇರಿಕಾ 2 ಎಂದು ಹೆಸರಿಸಬೇಕೆ ಎಂದು ನಾನು ಇನ್ನೂ ಯೋಚಿಸುತ್ತಿದ್ದೇನೆ , ನಂತರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು." ಚಿತ್ರದಲ್ಲಿ ನಿರ್ದೇಶಕ ನಾಗತಿಹಳ್ಳಿ ಅವರ ಅಮೇರಿಕಾ ಅಮೇರಿಕಾ ಸಂಯೋಜಕ ಮನೋಮೂರ್ತಿ ಚಿತ್ರತಂಡ ಸೇರಿದ್ದು,ಹಾಗೇ ಈ ಸಂಗೀತ ನಿರ್ದೇಶಕ ಅವರು ಸೆಟ್‌ಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News