ಮಲೈಕಾ ಅರೋರಾ ಜೊತೆಗಿನ ಬ್ರೇಕಪ್ ಸುದ್ದಿ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್!

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 4 ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ಬ್ರೇಕಪ್ ಸುದ್ದಿ ಬರಲಾರಂಭಿಸಿದ್ದು, ಇದೀಗ ಈ ಬಗ್ಗೆ ಅರ್ಜುನ್ ಕಪೂರ್ ಮೌನ ಮುರಿದಿದ್ದಾರೆ.

Written by - Puttaraj K Alur | Last Updated : Jan 12, 2022, 09:22 PM IST
  • ಮಲೈಕಾ ಜೊತೆಗಿನ ಬ್ರೇಕಪ್ ಸುದ್ದಿ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್
  • ಪರಸ್ಪರ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಮೈಲೈಕಾ & ಅರ್ಜುನ್
  • ಕೆಲವೊಮ್ಮೆ ಇವರಿಬ್ಬರು ರೆಸ್ಟೋರೆಂಟ್‌ಗಳು & ಪಾರ್ಟಿಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ
ಮಲೈಕಾ ಅರೋರಾ ಜೊತೆಗಿನ ಬ್ರೇಕಪ್ ಸುದ್ದಿ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್!  title=
ಬ್ರೇಕಪ್ ಸುದ್ದಿ ಬಗ್ಗೆ ಮೌನ ಮುರಿದ ಅರ್ಜುನ್ ಕಪೂರ್

ನವದೆಹಲಿ: ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್(Arjun Kapoor) ಅವರ ಬ್ರೇಕಪ್ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೇಗ ಪಡೆದುಕೊಂಡಿದೆ. ಆದರೆ ಇದೀಗ ಈ ವರದಿಗಳ ಬಗ್ಗೆ ಅರ್ಜುನ್ ಕಪೂರ್ ಮೌನ ಮುರಿದಿದ್ದಾರೆ. ನನ್ನ ಮತ್ತು ಮಲೈಕಾ ನಡುವೆ ಎಲ್ಲವೂ ಚೆನ್ನಾಗಿದೆ, ಇವೆಲ್ಲ ಕೇವಲ ವದಂತಿಗಳು. ಸುಳ್ಳುಸುದ್ದಿಗಳನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ.

ಫೋಟೋ ಹಂಚಿಕೊಂಡು ಬ್ರೇಕಪ್ ಸುದ್ದಿಗೆ ಬ್ರೇಕ್!

ಬ್ರೇಕಪ್ ಸುದ್ದಿಯ ನಡುವೆ ಅರ್ಜುನ್ ಕಪೂರ್(Arjun Kapoor Breakup Rumours) ತಮ್ಮ ಮತ್ತು ಮಲೈಕಾ ಅರೋರಾ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹಂಚಿಕೊಂಡಿರುವ ಅವರು ‘ಇಲ್ಲಿ ವದಂತಿಗಳಿಗೆ ಸ್ಥಳವಿಲ್ಲ… ಸುರಕ್ಷಿತವಾಗಿರಿ. ಎಲ್ಲರೂ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಲವ್ ಯೂ ಆಲ್’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ದೌರ್ಜನ್ಯದ 5 ವರ್ಷಗಳ ನಂತರ ತಾವು ಎದುರಿಸಿದ ಅವಮಾನದ ಬಗ್ಗೆ ಬಿಚ್ಚಿಟ್ಟ ನಟಿ ಭಾವನಾ ಮೆನನ್

ಈ ಕಾರಣದಿಂದ ಬ್ರೇಕಪ್ ಸುದ್ದಿ ಹರಡಿತ್ತು

 
 
 
 

 
 
 
 
 
 
 
 
 
 
 

A post shared by Arjun Kapoor (@arjunkapoor)

ಮಲೈಕಾ ಅರೋರಾ(Malaika Arora) ಕಳೆದ 6 ದಿನಗಳಿಂದ ತನ್ನ ಮನೆಯಿಂದ ಹೊರಬಂದಿಲ್ಲ. ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆದ ನಂತರ ಅವರು ತುಂಬಾ ದುಃಖದಲ್ಲಿದ್ದಾರೆ. ಬ್ರೇಕಪ್ ನಂತರ ಮಲೈಕಾ ಅರೋರಾ ಒಂಟಿಯಾಗಿರಲು ಬಯಸಿದ್ದಾರೆ. ಅದಕ್ಕೇ ಅವರು ಮನೆಯಲ್ಲೇ ಬಂಧಿಯಾಗಿದ್ದಾರೆ ಅಂತಾ ಗಾಳಿಸುದ್ದಿಗಳು ಹರಡಿದ್ದವು.  

ಅರ್ಜುನ್ ಪೋಸ್ಟ್ ಗೆ ಮಲೈಕಾ ಕಾಮೆಂಟ್

ಅರ್ಜುನ್ ಕಪೂರ್ ಅವರು ಹಂಚಿಕೊಂಡಿರುವ ಪೋಸ್ಟ್‌(Arjun Kapoor Social Media Post)ಗೆ ಮಲೈಕಾ ಕೂಡ ಕಾಮೆಂಟ್ ಮಾಡಿದ್ದಾರೆ. ಅರ್ಜುನ್ ಪೋಸ್ಟ್‌ ಗೆ ಮಲೈಕಾ ಹೃದಯದ ಎಮೋಜಿ ಕಾಮೆಂಟ್ ಮಾಡಿರುವುದು ವಿಶೇಷ. ನಟಿ ತಾರಾ ಸುತಾರಿಯಾ ಕೂಡ ಹೃದಯದ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದು, ‘YES! You guys❤’ ಅಂತಾ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ದಾರ್ಥ್ ಆಕ್ಷೇಪಾರ್ಹ ಟ್ವೀಟ್‌; "ಉತ್ತಮ ಪದಗಳನ್ನು ಬಳಸಬಹುದಿತ್ತು" ಎಂದ ಬ್ಯಾಡ್ಮಿಂಟನ್ ತಾರೆ

ಮಲೈಕಾ ಭೇಟಿಗೆ ಅರ್ಜುನ್ ಹೋಗಿಲ್ಲ

ಕೆಲವು ದಿನಗಳ ಹಿಂದೆ ಅರ್ಜುನ್ ಕಪೂರ್ ಸಹೋದರಿ ರಿಯಾ ಕಪೂರ್(Riya Kapoor) ಮನೆಗೆ ಹೋಗಿದ್ದರು. ಅಲ್ಲಿ ಅವರು ಕುಟುಂಬ ಸದಸ್ಯರ ಜೊತೆಗೆ ನೈಟ್ ಡಿನ್ನರ್ ಮಾಡಿದ್ದರು. ರಿಯಾ ಮತ್ತು ಮಲೈಕಾ ಅವರ ಮನೆ ಹತ್ತಿರದಲ್ಲಿದೆ. ಇಷ್ಟೆಲ್ಲಾ ಆದರೂ ಅರ್ಜುನ್ ಕಪೂರ್ ಮಲೈಕಾ ಅರೋರಾ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿರಲಿಲ್ಲ. ಮಲೈಕಾ ಆಗಾಗ್ಗೆ ಅರ್ಜುನ್ ಕಪೂರ್ ಜೊತೆ ಫ್ಯಾಮಿಲಿ ಡಿನ್ನರ್ ಗೆ ಹೋಗುತ್ತಿದ್ದರು. ಆದರೆ ಈ ಬಾರಿ ಅದು ಆಗಲಿಲ್ಲ.

4 ವರ್ಷಗಳಿಂದ ಪರಸ್ಪರ ಡೇಟಿಂಗ್

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಸುಮಾರು 4 ವರ್ಷಗಳಿಂದ ಪರಸ್ಪರ ಡೇಟಿಂಗ್(Dating) ಮಾಡುತ್ತಿದ್ದಾರೆ. ಈ ಜೋಡಿ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಇವರಿಬ್ಬರು ರೆಸ್ಟೋರೆಂಟ್‌ಗಳು ಮತ್ತು ಪಾರ್ಟಿಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News