Katrina Kaif: ವಿಕ್ಕಿ ಜೊತೆ ವಿವಾಹದ ಬಳಿಕ ಮನೆಕೆಲಸ ಮಾಡಲು ಪ್ರಾರಂಭಿಸಿದ್ದಾರೆಯೇ ಕತ್ರಿನಾ ಕೈಫ್? ವಿಡಿಯೋ ವೈರಲ್

Katrina Kaif: ಕತ್ರಿನಾ ಕೈಫ್ ಮದುವೆಯಾಗಿ ಕೇವಲ ಒಂದೇ ತಿಂಗಳಾಗಿದ್ದು, ಇದೀಗ ನಟಿಯ ಅಂತಹ ವೀಡಿಯೊಗಳು ವೈರಲ್ ಆಗಿದ್ದು, ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ವೈರಲ್ ವಿಡಿಯೋಗಳಲ್ಲಿ ಕತ್ರಿನಾ ಮನೆಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದೆ.

Written by - Yashaswini V | Last Updated : Jan 10, 2022, 12:57 PM IST
  • ಕತ್ರಿನಾ ಕೈಫ್ ಅವರ ವಿಡಿಯೋಗಳು ವೈರಲ್ ಆಗಿವೆ
  • ಈ ವಿಡಿಯೋಗಳಲ್ಲಿ ಕತ್ರಿನಾ ಮನೆಕೆಲಸಗಳನ್ನು ಮಾಡುತ್ತಿರುವುದು ಕಂಡುಬಂದಿದೆ
  • ವಿಡಿಯೋ ಕಂಡ ಅಭಿಮಾನಿಗಳು ಈ ಕುರಿತಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ
Katrina Kaif: ವಿಕ್ಕಿ ಜೊತೆ ವಿವಾಹದ ಬಳಿಕ ಮನೆಕೆಲಸ ಮಾಡಲು ಪ್ರಾರಂಭಿಸಿದ್ದಾರೆಯೇ ಕತ್ರಿನಾ ಕೈಫ್? ವಿಡಿಯೋ ವೈರಲ್ title=
Katrina Kaif Viral Video

Katrina Kaif: ಖ್ಯಾತ ಬಾಲಿವುಡ್ ನಟಿ ಕತ್ರಿನಾ ಕೈಫ್ 2021 ರ ಡಿಸೆಂಬರ್ ತಿಂಗಳಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಸಪ್ತಪದಿ ತುಳಿದರು. ಈ ತಾರೆಯರ ಮದುವೆ ಫೋಟೋಗಳು ಮತ್ತು ವಿಡಿಯೋಗಳ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಇದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕೈಫ್ ಅವರ ವಿಡಿಯೋ ವೈರಲ್ ಆಗುತ್ತಿದ್ದು, ಹಲವರು ವಿಕ್ಕಿ ಜೊತೆ ವಿವಾಹದ ಬಳಿಕ ಕತ್ರಿನಾ ಕೈಫ್ ಮನೆಕೆಲಸ ಮಾಡಲು ಪ್ರಾರಂಭಿಸಿದ್ದಾರೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಫೋಟೋ ಶೇರ್ ಮಾಡುವ ವಿಕ್ಕಿ ಮತ್ತು ಕತ್ರಿನಾ:
ವಿಕ್ಕಿ ಕೌಶಲ್ (Vicky Kaushal) ಮತ್ತು ಕತ್ರಿನಾ ಕೈಫ್  (Katrina Kaif) ಕಳೆದ ವರ್ಷ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೂ ಮುನ್ನ ತಮ್ಮ ಸಂಬಂಧದ ಬಗ್ಗೆ ತುಂಬಾ ರಹಸ್ಯ ಕಾಪಾಡಿಕೊಂಡಿದ್ದ ಈ ಜೋಡಿ ವಿವಾಹದ ನಂತರ ಬಹಿರಂಗವಾಗಿಯೇ ಇಶ್ಕ್ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಮದುವೆಯಾಗಿ ಒಂದು ತಿಂಗಳಾಗಿದ್ದು, ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಪ್ರೀತಿ ತುಂಬಿದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ-  Shubha Poonja: ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜಾ

ಒಳ್ಳೆಯ ಮಡದಿಯಾಗಲು ಪ್ರಯತ್ನಿಸುತ್ತಿದ್ದಾರೆಯೇ ಕತ್ರಿನಾ?
ಮದುವೆಯ ನಂತರ, ಕತ್ರಿನಾ ಉತ್ತಮ ಮಡದಿಯಾಗಲು ಪ್ರಯತ್ನಿಸುತ್ತಿದ್ದಾರೆ. ಕೆಲವೊಮ್ಮೆ ಅವರು ವಿಕ್ಕಿಗಾಗಿ ಅಡುಗೆ ಮಾಡಿದರೆ, ಇನ್ನೂ ಕೆಲವು ಬಾರಿ ವಿಕ್ಕಿ ಕೌಶಲ್ (Vicky Kaushal) ಅವರನ್ನು ಡ್ರಾಪ್ ಮಾಡಲು  ಸ್ವತಃ ವಿಮಾನ ನಿಲ್ದಾಣಕ್ಕೆ ಬಂದಿರುವುದು ಕಂಡು ಬಂದಿದೆ. ಇದೆಲ್ಲದರ ನಡುವೆ ಕತ್ರಿನಾ ಕೈಫ್ ಅವರ ವಿಡಿಯೋಗಳು (Viral Video) ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಈ ವೀಡಿಯೊಗಳಲ್ಲಿ, ಒಂದರಲ್ಲಿ ನಟಿ ಪೊರಕೆ ಹಿಡಿದು ಕಸ ಗುಡಿಸುತ್ತಿರುವುದು ಕಂಡು ಬಂದಿದೆ. ಇನ್ನೊಂದರಲ್ಲಿ ನಟಿಯು ಪಾತ್ರೆಗಳನ್ನು ತೊಳೆಯುವುದು ಕಂಡುಬಂದಿದೆ. ಈ ವೀಡಿಯೋಗಳನ್ನು ನೋಡಿದ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. 

ಇದನ್ನೂ ಓದಿ-  Alia Bhatt:ಆಲಿಯಾ ಭಟ್ ಅವರನ್ನು ಆಕರ್ಷಿಸುತ್ತದಂತೆ ಹುಡುಗರಲ್ಲಿನ ಈ ವಿಶೇಷ ಗುಣ!
 
ವಾಸ್ತವವಾಗಿ, ಕತ್ರಿನಾ ಕೈಫ್  (Katrina Kaif) ಅವರ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಕತ್ರಿನಾ ಕೈಫ್ ತನ್ನ ಅಡುಗೆಮನೆಯಲ್ಲಿ ಪಾತ್ರೆ ತೊಳೆಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಅದರ ನಂತರ ಅಭಿಮಾನಿಗಳ ವಿಶೇಷ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಅತ್ತಿಗೆ ಇದು ಹಳೇ ವೀಡಿಯೋ, ಆದರೆ ನೀವು ಇನ್ನೂ ಯಾವ ಮನೆಗೆಲಸ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ಇನ್ನೊಬ್ಬ ಅಭಿಮಾನಿ ಕಳವಳ ವ್ಯಕ್ತಪಡಿಸುತ್ತಾ, ಬಾಬಿ, ನೀವು ಒಬ್ಬರೇ ಯಾಕಿದ್ದೀರಿ? ಅಣ್ಣ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ವಾಸ್ತವವಾಗಿ, ಈ ವೈರಲ್ ವಿಡಿಯೋಗಳು 2020 ರ ಲಾಕ್‌ಡೌನ್ ಸಮಯದಲ್ಲಿ ತೆಗೆದ ವಿಡಿಯೋಗಳಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News