ಸರ್ವರ ಮನಸ್ಸಿಗೂ ಹತ್ತಿರವಾಗಲಿದೆ "ಸರ್ವಸ್ವ" ಹಾಡು..! ಸೆ.20 ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಕೇಳಿ

Sarvasva Song : ಈ ಹಿಂದೆ "ಲೈಫ್ 360" ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ ಚಂದ್ರ ನಟಿಸಿ, ನಿರ್ದೇಶಿಸಿರುವ ಹಾಗೂ ರಾಜಶೇಖರ್ ಎಸ್ ನಿರ್ಮಿಸಿರುವ "ಸರ್ವಸ್ವ" ಮ್ಯೂಸಿಕ್ ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು. ಹಿರಿಯ ಸಾಹಿತಿ ದೊಡ್ಡರಂಗೇಗೌಡ, ಸೋಮಶೇಖರ್, ತಾರಾ ಅನುರಾಧಾ, ಸುಚೇಂದ್ರ ಪ್ರಸಾದ್, ಲಹರಿ ವೇಲು ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಆನಂತರ ಹಾಡಿನ ಬಗ್ಗೆ ಅನೇಕರು ಮಾತನಾಡಿದರು.

Written by - Krishna N K | Last Updated : Sep 7, 2024, 08:13 PM IST
    • ಈ ಹಿಂದೆ "ಲೈಫ್ 360" ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್
    • "ಸರ್ವಸ್ವ" ಮ್ಯೂಸಿಕ್ ವಿಡಿಯೋ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು.
    • ರಾಜಶೇಖರ್ ಎಸ್ ನಿರ್ಮಿಸಿರುವ "ಸರ್ವಸ್ವ" ಮ್ಯೂಸಿಕ್ ವಿಡಿಯೋ ಸಾಂಗ್
ಸರ್ವರ ಮನಸ್ಸಿಗೂ ಹತ್ತಿರವಾಗಲಿದೆ "ಸರ್ವಸ್ವ" ಹಾಡು..! ಸೆ.20 ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಕೇಳಿ

Arjun kishore Sarvasva song : ನಮ್ಮ ತಾಯಿಯವರ ಹೆಸರಿನಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಈಗ ಸಾಯಿ ಗಗನ್ ಪ್ರೊಡಕ್ಷನ್ಸ್ ಜೊತೆ ಸೇರಿ "ಸರ್ವಸ್ವ" ಹಾಡನ್ನು ನಿರ್ಮಾಣ ಮಾಡಿದ್ದೇವೆ. ತಾಯಿ - ಮಗುವಿನ ಮಹತ್ವ ಸಾರುವ ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾಡು ಬಿಡುಗಡೆ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಎಂದರು ನಿರ್ಮಾಪಕ ರಾಜಶೇಖರ್ ಎಸ್.

Add Zee News as a Preferred Source

ನಾನು ಪುನೀತ್ ರಾಜಕುಮಾರ್ ಅಭಿಮಾನಿ ಎಂದು ಮಾತನಾಡಿದ ನಿರ್ದೇಶಕ , ನಟ ಅರ್ಜುನ್ ಕಿಶೋರ್ ಚಂದ್ರ, ಈ ಹಾಡನ್ನು ಪಿ.ಆರ್.ಕೆ ಆಡಿಯೋದವರು ಬಿಡುಗಡೆ ಮಾಡುತ್ತಿರುವುದು ಸಂತೋಷವಾಗಿದೆ. ನಾನೇ ಬರೆದಿರುವ ಈ ಹಾಡನ್ಬು ಸೆಪ್ಟೆಂಬರ್ 20ರಿಂದ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು. 

ಇದನ್ನೂ ಓದಿ: ಚಿತ್ರರಂಗಕ್ಕೆ ಬಾಲಯ್ಯ ಪುತ್ರ ಎಂಟ್ರಿ...! ಮೋಕ್ಷಜ್ಞ‌ ಮೊದಲ ಚಿತ್ರಕ್ಕೆ ಹನುಮಾನ್ ಡೈರೆಕ್ಷರ್ ಆಕ್ಷನ್ ಕಟ್

ಈ ಹಾಡಿನ ಚಿತ್ರೀಕರಣ ಯೂರೋಪ್ ನಲ್ಲಿ ನಡೆದಿದೆ. ಇದು ಬರೀ ಹಾಡಲ್ಲ. ಕಮರ್ಷಿಯಲ್ ಚೌಕ್ಕಟ್ಟಿನೊಳಗೆ ಒಂದೊಳ್ಳೆ ಸಂದೇಶವನ್ನು ಈ ಹಾಡಿನ ಮೂಲಕ ಕೊಡುವ ಪ್ರಯತ್ನ ಮಾಡಿದ್ದೇವೆ. "ಸರ್ವಸ್ವ"  ಹಾಡು ಸರ್ವರ ಮನಸ್ಸಿಗೂ ಹತ್ತಿರವಾಗಲುದೆ. ಹಾಡು ಚೆನ್ನಾಗಿ ಮೂಡಿಬರಲು ಇಲ್ಲಿನ ಹಾಗೂ ಅಲ್ಲಿನ(ಯೂರೋಪ್)ನ ತಂತ್ರಜ್ಞರ ಸಹಕಾರವೇ ಕಾರಣ. ಇಂದು ಹಾಡು ಬಿಡುಗಡೆ ಮಾಡಿಕೊಟ್ಟ ಪ್ರತಿಯೊಬ್ಬ ಗಣ್ಯರಿಗೂ ಧನ್ಯವಾದ ಎಂದರು. ಸಂಗೀತ ನೀಡಿರುವ ಚೇತನ್ ರಾವ್ ಹಾಗೂ ಡಿಐ, ವಿ ಎಫ್ ಎಕ್ಸ್ ನೊಂದಿಗೆ ಸಂಕಲನವನ್ನು ಮಾಡಿರುವ S I D ಹಾಡಿನ ಬಗ್ಗೆ ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News