Gandhada Gudi : ಅಪ್ಪು ನನಗೆ ಕಾಲ್‌ ಮಾಡೋಕೆ ದೊಡ್ಡ ಬೆಟ್ಟ ಹತ್ತಿದ್ದರು..!

ಗಂಧದಗುಡಿ ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಡಾ. ಪುನೀತ್‌ ರಾಜಕುಮಾರ್‌ ಅವರ ಕನಸಿನ ಕೂಸನ್ನು ಕನ್ನಡಾಭಿಮಾನಿಗಳ ಮುಂದೆ ತರಲು ಅಪ್ಪು ಅವರ ಹಿಂದೆ ನಿಂತು ಶ್ರಮಿಸಿದ್ದು, ಅವರ ಧರ್ಮಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಕಾಳಿ ನದಿ ಹತ್ತಿರ ಗಂಧದಗುಡಿ ಶೂಟಿಂಗ್‌ಗೆ ತೆಳಿದ್ದ ಪುನೀತ್‌ ಅವರು ಅಶ್ವಿನಿಯವರಿಗೆ ಕರೆ ಮಾಡಲು ಒಂದು ಬೆಟ್ಟಹತ್ತಿದ್ದ ವಿಚಾರವನ್ನು ಅಶ್ವಿನಿಯವರು ತಿಳಿಸಿದ್ದಾರೆ.

Written by - Krishna N K | Last Updated : Oct 29, 2022, 01:06 PM IST
  • ಗಂಧದಗುಡಿ ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ
  • ಕಾಳಿ ನದಿ ಹತ್ತಿರ ಗಂಧದಗುಡಿ ಶೂಟಿಂಗ್‌ಗೆ ತೆಳಿದ್ದ ಪುನೀತ್‌
  • ಅಶ್ವಿನಿಯವರಿಗೆ ಕರೆ ಮಾಡಲು ಒಂದು ಬೆಟ್ಟಹತ್ತಿದ್ದರು
Gandhada Gudi : ಅಪ್ಪು ನನಗೆ ಕಾಲ್‌ ಮಾಡೋಕೆ ದೊಡ್ಡ ಬೆಟ್ಟ ಹತ್ತಿದ್ದರು..! title=

ಬೆಂಗಳೂರು : ಗಂಧದಗುಡಿ ರಾಜ್ಯಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಡಾ. ಪುನೀತ್‌ ರಾಜಕುಮಾರ್‌ ಅವರ ಕನಸಿನ ಕೂಸನ್ನು ಕನ್ನಡಾಭಿಮಾನಿಗಳ ಮುಂದೆ ತರಲು ಅಪ್ಪು ಅವರ ಹಿಂದೆ ನಿಂತು ಶ್ರಮಿಸಿದ್ದು, ಅವರ ಧರ್ಮಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಕಾಳಿ ನದಿ ಹತ್ತಿರ ಗಂಧದಗುಡಿ ಶೂಟಿಂಗ್‌ಗೆ ತೆಳಿದ್ದ ಪುನೀತ್‌ ಅವರು ಅಶ್ವಿನಿಯವರಿಗೆ ಕರೆ ಮಾಡಲು ಒಂದು ಬೆಟ್ಟಹತ್ತಿದ್ದ ವಿಚಾರವನ್ನು ಅಶ್ವಿನಿಯವರು ತಿಳಿಸಿದ್ದಾರೆ.

ಹೌದು.. ಯುವರತ್ನ ಅಪ್ಪು ಅವರಿಗೆ ಬೆನ್ನೆಲುಬಾಗಿ ನಿಂತರವರು ಅವರ ಪತ್ನಿ ಅಶ್ವಿನಿ ಸೇರಿದಂತೆ ರಾಜ್‌ ಕುಟಂಬ. ಅವರ ಏಳು ಬಿಳುಗಳಿಗೆ ಆಧಾರ ಸ್ತಂಭದಂತಿದ್ದು, ಸ್ಪೂರ್ತಿ ತುಂಬಿ ಮುನ್ನೆಡಿಸಿದ್ದು ಅಶ್ವಿನಿಯವರು ಅಂದ್ರೆ ತಪ್ಪಾಗಲ್ಲ. ಏಕೆಂದರೆ ಪ್ರತಿಯೊಬ್ಬ ಯಶಸ್ವಿ ಪುರಷನ ಹಿಂದೆ ಮಹಿಳೆಯರ ತ್ಯಾಗವಿದೆ ಎಂಬ ಮಾತಿನಂತೆ ಯುವರತ್ನ ಸಾಧನೆಗೆ ಅಶ್ವಿನಿಯವರೂ ಕಾರಣ. 

ಇದನ್ನೂ ಓದಿ: ಅಪ್ಪುವಿನ ‘ಗಂಧದ ಗುಡಿ’ ಬಗ್ಗೆ ನಟ ದರ್ಶನ್, ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು..?

ಸದ್ಯ ಗಂಧದಗುಡಿ ಸಿನಿಮಾ ಕುರಿತು ಪಿಆರ್‌ಕೆ ಅಡಿಯೋ ಮಾಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು ಕಾಳಿ ನದಿ ಚಿತ್ರಿಕರಣ ವೇಳೆ ನಡೆದ ಇಂಟ್ರೆಸ್ಟಿಂಗ್‌ ವಿಚಾರದ ಕುರಿತು ಹೇಳಿದ್ದಾರೆ. ನಿರ್ದೇಶಕ ಸಂತೋಷ್ ಆನಂದರಾಮ್ ನಡೆಸಿದ ಸಂದರ್ಶನದಲ್ಲಿ, ಗಂಧದಗುಡಿ ಶೂಟಿಂಗ್‌ನಲ್ಲಿ ಭಾಗಿಯಾದ ಸಂದರ್ಭದ ಕುರಿತು ಮಾತನಾಡಿ.. ದಾಂಡೇಲಿಯಲ್ಲಿದ್ದಾಗ ನನಗೆ ಅವರು ಕರೆ ಮಾಡಿ.. ನೋಡು ನಿನಗೆ ಕರೆ ಮಾಡೋಕೆ ನಾನು ಬೆಟ್ಟ ಹತ್ತಬೇಕಾಯ್ತು. ನೀನು ಬಾ ಟೈಗರ್‌ ರಿಸರ್ವ್‌ ಪಾಯಿಂಗ್‌ಗೆ ಹೋಗ್ತಿದಿವಿ. ಪರ್ಮಿಷನ್‌ ಸಿಕ್ಕಿದೆ ಅಂದ್ರು.

ನಾನು ಅಲ್ಲಿಗೆ ಬಂದು ಎನ್‌ ಮಾಡ್ಲಿ ಅಂದೆ. ಅವರು ಬಾ ಅಂದ್ರು.. ನಾನು ಎರಡು ದಿನ ಬಿಟ್ಟು ಹೋಗಿದ್ದೆ. ಟ್ರಕ್ಕಿಂಗ್‌ ಮಾಡಿದೆ. ಬೆಳಿಗ್ಗೆ ನಾಲ್ಕುವರೆಯಿಂದ ಆರು ಗಂಟೆಯ ವರೆಗೆ ಟ್ರಕ್ಕಿಂಗ್‌ ಮಾಡಿದ್ವಿ. ಅದು ನನ್ನ ಜೀವನ ಮುಖ್ಯವಾದ ಸಮಯ. ಅಮೇಲೆ ಪಾತಗುಡಿ ಅಂತ ಹಳ್ಳಿ ಅಲ್ಲಿ ಹೋಗಿ ಊಟ ಮಾಡ್ಕೊಂಡು ಬಂದ್ವಿ ಅಂತ ಗಂಧದಗುಡಿಯಲ್ಲಿ ಅಪ್ಪು ಜೊತೆ ಕಳೆದಿದ್ದ ನೆನೆನಪುಗಳನ್ನು ಮೆಲುಕು ಹಾಕಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News