ಎಂಎಸ್ ಧೋನಿಗೆ ಎದುರಾಯ್ತು ಸಂಕಷ್ಟ! ನಿಯಮ ಉಲ್ಲಂಘನೆ ಆರೋಪ... ರೆಡ್ ಅಲರ್ಟ್ ನೀಡಿ ಮನೆ ತನಿಖೆಗಿಳಿದ ಹೌಸಿಂಗ್ ಬೋರ್ಡ್

MS Dhoni: ಇಂಡಿಯಾ ಟುಡೇ ಪ್ರಕಾರ, ಮಂಡಳಿಯ ಅಧ್ಯಕ್ಷ ಸಂಜಯ್ ಲಾಲ್ ಪಾಸ್ವಾನ್ ಅವರು ಮಂಡಳಿಯಿಂದ ಮಂಜೂರು ಮಾಡಿದ ವಸತಿ ಪ್ಲಾಟ್‌ಗಳನ್ನು ವಸತಿ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಮತ್ತು ಇದರಿಂದ ಯಾವುದೇ ವ್ಯತ್ಯಾಸವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಧೋನಿ ಇನ್ನು ಮುಂದೆ ಆ ಮನೆಯಲ್ಲಿ ವಾಸಿಸುವುದಿಲ್ಲ ಎಂದು ಹೇಳಿದ್ದಾರೆ

Written by - Bhavishya Shetty | Last Updated : Dec 24, 2024, 09:15 AM IST
    • ಧೋನಿ ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಕಾನೂನು ಪಾಲಿಸುವ ವ್ಯಕ್ತಿ
    • ಇದೀಗ ಧೋನಿಗೆ ಸಂಬಂಧಿಸಿದಂತೆ ದೊಡ್ಡ ವಿಚಾರವೊಂದು ಬೆಳಕಿಗೆ ಬರುತ್ತಿದೆ
    • ನಿವಾಸವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದ್ದಕ್ಕಾಗಿ ಕ್ರಮ
ಎಂಎಸ್ ಧೋನಿಗೆ ಎದುರಾಯ್ತು ಸಂಕಷ್ಟ! ನಿಯಮ ಉಲ್ಲಂಘನೆ ಆರೋಪ... ರೆಡ್ ಅಲರ್ಟ್ ನೀಡಿ ಮನೆ ತನಿಖೆಗಿಳಿದ ಹೌಸಿಂಗ್ ಬೋರ್ಡ್  title=
MS Dhoni

MS Dhoni: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ತುಂಬಾ ಕಾನೂನು ಪಾಲಿಸುವ ವ್ಯಕ್ತಿ. ಆದರೆ ಇದೀಗ ಧೋನಿಗೆ ಸಂಬಂಧಿಸಿದಂತೆ ದೊಡ್ಡ ವಿಚಾರವೊಂದು ಬೆಳಕಿಗೆ ಬರುತ್ತಿದೆ. ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ಧೋನಿ ಅವರ ಹರ್ಮು ರಸ್ತೆಯ ನಿವಾಸವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಇವರೇ ನೋಡಿ ಭಾರತದ 10 ಸುಂದರ IAS-IPS ಮಹಿಳಾ ಅಧಿಕಾರಿಗಳು..! ಇವ್ರು ಸ್ಟಾರ್‌ ನಟಿಯರಿಗಿಂತಲೂ ಕ್ಯೂಟ್‌..

ಮಂಡಳಿಯ ಪ್ರಕಾರ, ವಸತಿ ಭೂಮಿಯನ್ನು ವಸತಿಯೇತರ ಉದ್ದೇಶಗಳಿಗೆ ಬಳಸುವುದು ಅದರ ನಿಯಮಗಳ ಉಲ್ಲಂಘನೆಯಾಗಿದೆ. ಆದರೆ ಧೋನಿಯ ಹರ್ಮು ನಿವಾಸದಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ, ಮಂಡಳಿಯು ತನಿಖೆಗೆ ಆದೇಶಿಸಿದೆ. ಇದನ್ನು ನಿಯಮಾನುಸಾರ ಮಾಡಲಾಗುತ್ತಿದೆಯೇ ಅಥವಾ ವಿರುದ್ಧವಾಗಿ ನಡೆಸಲಾಗುತ್ತಿದೆಯೇ ಎಂದು ಮಂಡಳಿಯು ತನಿಖೆ ನಡೆಸಲಿದೆ. ವಸತಿ ಭೂಮಿಯನ್ನು ವಾಣಿಜ್ಯಿಕವಾಗಿ ಬಳಸುತ್ತಿರುವುದು ತನಿಖೆಯಿಂದ ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಬಹುದು.

ಇಂಡಿಯಾ ಟುಡೇ ಪ್ರಕಾರ, ಮಂಡಳಿಯ ಅಧ್ಯಕ್ಷ ಸಂಜಯ್ ಲಾಲ್ ಪಾಸ್ವಾನ್ ಅವರು ಮಂಡಳಿಯಿಂದ ಮಂಜೂರು ಮಾಡಿದ ವಸತಿ ಪ್ಲಾಟ್‌ಗಳನ್ನು ವಸತಿ ಉದ್ದೇಶಗಳಿಗಾಗಿ ಮಾತ್ರ ಬಳಸಬಹುದು ಮತ್ತು ಇದರಿಂದ ಯಾವುದೇ ವ್ಯತ್ಯಾಸವನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಧೋನಿ ಇನ್ನು ಮುಂದೆ ಆ ಮನೆಯಲ್ಲಿ ವಾಸಿಸುವುದಿಲ್ಲ ಎಂದು ಹೇಳಿದ್ದಾರೆ

ಇದನ್ನೂ ಓದಿ: ಶನಿಯ ರಾಶಿಗೆ ರಾಹು ಪ್ರವೇಶ: 18 ವರ್ಷಗಳ ಬಳಿಕ ಈ ರಾಶಿಯವರಿಗೆ ಮಹರ್ದಶ ಯೋಗ, 2025ರ ವರ್ಷವಿಡೀ ಹಣದ ಸುರಿಮಳೆ

ಧೋನಿ ಸದ್ಯ ಸಿಮ್ಲಿಯಾ ರಿಂಗ್ ರೋಡ್ ನಲ್ಲಿರುವ ತಮ್ಮ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಈ ಹಿಂದೆ ಮಹಿ ಹರ್ಮು ರಸ್ತೆಯಲ್ಲಿರುವ ನಿವಾಸದಲ್ಲಿ ವಾಸವಾಗಿದ್ದರು. ಹಳೆಯ  ಮನೆಯಲ್ಲಿ ಡಯಾಗ್ನೋಸ್ಟಿಕ್ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ ಎಂದು ವರದಿಗಳು ಸೂಚಿಸುತ್ತವೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News