ಬೆಂಗಳೂರು ಬಾಯ್ಸ್" ನೀನೇ ಬೇಕು ಹಾಡಿಗೆ ಸಿಕ್ತು ಸಖತ್ ಮೆಚ್ಚುಗೆ...!

ಕಾಲೇಜಿನಲ್ಲಿ ಕೊನೆಯ ಬೆಂಚಿನ ಹುಡುಗರು ವೇಸ್ಟ್‌ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದೇ ಹುಡುಗರು ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುತ್ತಾರೆ. ಅಂತಹ ಒಂದು ಕಥೆಯಿರುವ ಸಿನಿಮಾವೇ 'ಬೆಂಗಳೂರು ಬಾಯ್ಸ್'. ಪ್ರತಿಯೊಬ್ಬರ ಕಾಲೇಜು ಲೈಫ್‌ನಲ್ಲಿ ರೊಮ್ಯಾನ್ಸ್‌, ಅದರಿಂದ ಉಂಟಾಗುವ ತೊಂದರೆಗಳು ಸೇರಿದಂತೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿರುತ್ತವೆ. ಅದನ್ನು ಕೆಲವರು ನಿರ್ವಹಿಸುವ ರೀತಿ ವಿಶೇಷವಾಗಿರುತ್ತದೆ.

Written by - YASHODHA POOJARI | Edited by - Manjunath N | Last Updated : May 26, 2023, 09:06 PM IST
  • ಇಂತಹ ತರಲೆ, ತಮಾಷೆ ಮತ್ತು ಭಾವನಾತ್ಮಕ ಅಂಶಗಳೇ 'ಬೆಂಗಳೂರು ಬಾಯ್ಸ್' ಸಿನಿಮಾದ ಕಥೆಯಾಗಿದೆ
  • ಚಿತ್ರದಲ್ಲಿ ಚಂದನ್‌ ಆಚಾರ್‌, ಸಚಿನ್‌ ಚೆಲುವರಾಯ ಸ್ವಾಮಿ, ಅಭಿಷೇಕ್‌ ದಾಸ್‌, ರೋಹಿತ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ
  • ಇವರ ಜತೆಗೆ ವೈನಿಧಿ ಜಗದೀಶ್‌, ಸೋನಿ ಎಂಬ ಇಬ್ಬರು ನಟಿಯರಿದ್ದಾರೆ
ಬೆಂಗಳೂರು ಬಾಯ್ಸ್" ನೀನೇ ಬೇಕು ಹಾಡಿಗೆ ಸಿಕ್ತು ಸಖತ್ ಮೆಚ್ಚುಗೆ...! title=

ಬೆಂಗಳೂರು: ಕಾಲೇಜಿನಲ್ಲಿ ಕೊನೆಯ ಬೆಂಚಿನ ಹುಡುಗರು ವೇಸ್ಟ್‌ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅದೇ ಹುಡುಗರು ಬದುಕಿನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿರುತ್ತಾರೆ. ಅಂತಹ ಒಂದು ಕಥೆಯಿರುವ ಸಿನಿಮಾವೇ 'ಬೆಂಗಳೂರು ಬಾಯ್ಸ್'. ಪ್ರತಿಯೊಬ್ಬರ ಕಾಲೇಜು ಲೈಫ್‌ನಲ್ಲಿ ರೊಮ್ಯಾನ್ಸ್‌, ಅದರಿಂದ ಉಂಟಾಗುವ ತೊಂದರೆಗಳು ಸೇರಿದಂತೆ ಹಲವು ಸ್ವಾರಸ್ಯಕರ ಘಟನೆಗಳು ನಡೆದಿರುತ್ತವೆ. ಅದನ್ನು ಕೆಲವರು ನಿರ್ವಹಿಸುವ ರೀತಿ ವಿಶೇಷವಾಗಿರುತ್ತದೆ.

ಇದನ್ನೂ ಓದಿ: ಶಾದಿ.ಕಾಮ್ ನಲ್ಲಿ ಪರಿಚಯ,  ಓಯೋದಲ್ಲಿ ಮಜಾ: ಕೊನೆಗೆ ಯುವತಿಗೆ ಕೈಕೊಟ್ಟು ಬೇರೆ ನಿಖಾ ಆದ ಐನಾತಿ!

ಇಂತಹ ತರಲೆ, ತಮಾಷೆ ಮತ್ತು ಭಾವನಾತ್ಮಕ ಅಂಶಗಳೇ 'ಬೆಂಗಳೂರು ಬಾಯ್ಸ್' ಸಿನಿಮಾದ ಕಥೆಯಾಗಿದೆ.ಚಿತ್ರದಲ್ಲಿ ಚಂದನ್‌ ಆಚಾರ್‌, ಸಚಿನ್‌ ಚೆಲುವರಾಯ ಸ್ವಾಮಿ, ಅಭಿಷೇಕ್‌ ದಾಸ್‌, ರೋಹಿತ್‌ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜತೆಗೆ ವೈನಿಧಿ ಜಗದೀಶ್‌, ಸೋನಿ ಎಂಬ ಇಬ್ಬರು ನಟಿಯರಿದ್ದಾರೆ.ದಿನದಿಂದ ದಿನಕ್ಕೆ ಬೆಂಗಳೂರು ಬಾಯ್ಸ್ ಸಿನಿಮಾದ ಟಾಕ್ ಜೋರಾಗಿದೆ. ಈಗ ಮ್ಯಾಟರ್ ಏನಪ್ಪಾ ಅಂದ್ರೆ ಈ ಚಿತ್ರದ ಅದ್ಭುತ ಹಾಡು ರಿಲೀಸ್ ಆಗಿದ್ದು ಜನ ಮೆಚ್ಚುಗೆ ಗಳಿಸಿದೆ."ನೀನೇ ಬೇಕು" ಸಖತ್ ಥ್ರಿಲ್ ಕೊಡೋ ರೋಮ್ಯಾಂಟಿಕ್ ಹಾಡಾಗಿದ್ದು ದಿಲ್ ಖುಷ್ ಆಗಿಸುತ್ತಿದೆ.ಪ್ರತಿ ಪ್ರೇಮಿಗಳಿಗೂ ಸನಿಹವೆನಿಸುವಂತಿದೆ ಈ ಹಾಡು.

ಇದನ್ನೂ ಓದಿ: Actor Found Dead: ಕೊಳೆತ ಸ್ಥಿತಿಯಲ್ಲಿ ಖ್ಯಾತ ನಟನ ಮೃತದೇಹ ಪತ್ತೆ..!

ಬೆಂಗಳೂರು ಬಾಯ್ಸ್ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಎಮೋಷನ್-ಸೆಂಟಿಮೆಂಟ್ ಮಿಶ್ರಣದ ಹೂರಣವಾಗಿದೆ. ಈ ಚಿತ್ರವನ್ನು ತೆಲುಗು ಮೂಲದ ವಿಕ್ರಮ್‌ ಕೆ.ವೈ. ನಿರ್ಮಾಣ ಮಾಡುತ್ತಿದ್ದಾರೆ. ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ'.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News