Bhool Bhulaiyaa 2: ಒಟಿಟಿಗೆ ಬರ್ತಿದೆ ಕಾರ್ತಿಕ್​ ಆರ್ಯನ್ ನಟನೆಯ ಭೂಲ್​ ಭುಲಯ್ಯ 2

Bhool Bhulaiyaa 2: ಭೂಲ್​ ಭುಲಯ್ಯ 2 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಮಿಸ್‌ ಮಾಡಿಕೊಂಡವರಿಗೆ ಇಲ್ಲಿ ಒಂದು ಗುಡ್‌ ನ್ಯೂಸ್‌ ಇದೆ. ಹಾರರ್​-ಕಾಮಿಡಿ ಕಥಾಹಂದರ ಹೊಂದಿರುವ ಭೂಲ್​ ಭುಲಯ್ಯ 2 ಸಿನಿಮಾ ಸೂಪರ್ ಹಿಟ್​ ಆಗಿದೆ. 

Written by - Chetana Devarmani | Last Updated : Jun 15, 2022, 04:35 PM IST
  • ಹಾರರ್​-ಕಾಮಿಡಿ ಕಥಾಹಂದರ ಹೊಂದಿರುವ ಭೂಲ್​ ಭುಲಯ್ಯ 2
  • ಒಟಿಟಿಗೆ ಬರ್ತಿದೆ ಕಾರ್ತಿಕ್​ ಆರ್ಯನ್ ನಟನೆಯ ಭೂಲ್​ ಭುಲಯ್ಯ 2
  • ಇದು ಕಾರ್ತಿಕ್​ ಆರ್ಯನ್​ ವೃತ್ತಿಜೀವನದಲ್ಲಿ ಮೊದಲ ಬ್ಲಾಕ್​ ಬಸ್ಟರ್​ ಹಿಟ್ ಮೂವಿ
Bhool Bhulaiyaa 2: ಒಟಿಟಿಗೆ ಬರ್ತಿದೆ ಕಾರ್ತಿಕ್​ ಆರ್ಯನ್ ನಟನೆಯ ಭೂಲ್​ ಭುಲಯ್ಯ 2  title=
ಭೂಲ್​ ಭುಲಯ್ಯ 2 

Bhool Bhulaiyaa 2: ಭೂಲ್​ ಭುಲಯ್ಯ 2 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಲು ಮಿಸ್‌ ಮಾಡಿಕೊಂಡವರಿಗೆ ಇಲ್ಲಿ ಒಂದು ಗುಡ್‌ ನ್ಯೂಸ್‌ ಇದೆ. ಹಾರರ್​-ಕಾಮಿಡಿ ಕಥಾಹಂದರ ಹೊಂದಿರುವ ಭೂಲ್​ ಭುಲಯ್ಯ 2 ಸಿನಿಮಾ ಸೂಪರ್ ಹಿಟ್​ ಆಗಿದೆ. 

ಇದನ್ನೂ ಓದಿ: ಪುನೀತ್‌ಗೆ ‘ಭಾರತ ರತ್ನ’ ನೀಡಬೇಕೆಂದು 2100 ಕಿ.ಮೀ ಕಿ.ಮೀ ನಡೆದ ಅಭಿಮಾನಿ

ಇದು ಕಾರ್ತಿಕ್​ ಆರ್ಯನ್​ ವೃತ್ತಿಜೀವನದಲ್ಲಿ ಮೊದಲ ಬ್ಲಾಕ್​ ಬಸ್ಟರ್​ ಹಿಟ್ ಮೂವಿ ಆಗಿದೆ​. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 173 ಕೋಟಿ ರೂಪಾಯಿ ಕಬಳಿಸಿರುವ ಭೂಲ್‌ ಭುಲಯ್ಯ 2 ಸಿನಿಮಾ ಈಗ ಓಟಿಟಿ ಗೆ ಬರುತ್ತಿದೆ. ನೆಟ್​ಫ್ಲಿಕ್ಸ್​ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. 

ಇಂದಿಗೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ಈ ಚಿತ್ರ ಪ್ರಸಾರ ಆಗುವುದು ಖಚಿತವಾಗಿದೆ. ಆದರೆ ಒಟಿಟಿ ರಿಲೀಸ್​ ದಿನಾಂಕದ ಬಗ್ಗೆ ಚಿತ್ರತಂಡ ಇನ್ನೂ ತಿಳಿಸಿಲ್ಲ. 2007ರಲ್ಲಿ ತೆರೆಕಂಡ ಭೂಲ್​ ಭುಲಯ್ಯ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ವಿದ್ಯಾ ಬಾಲನ್​ ಮುಂತಾದವರು ನಟಿಸಿದ್ದರು, ಈ ಸಿನಿಮಾ ಕೂಡ ಉತ್ತ, ಹಿಟ್‌ ಕಂಡಿತ್ತು. ಇದೀಗ ಈ ಸಿನಿಮಾದ ಸೀಕ್ವೆಲ್​ ಆಗಿ ಭೂಲ್​ ಭುಲಯ್ಯ 2 ತೆರೆ ಕಂಡಿದೆ. ಈ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.  

ಟಬು, ರಾಜ್​ಪಾಲ್​ ಯಾದವ್ ಸೇರಿದಂತೆ ಅನೇಕ ತಾರೆಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗಲಿದ್ದು, ಚಿತ್ರತಂಡ ದಿನಾಂಕವನ್ನು ಪೋಷಿಸಲಿದೆ. 

ಇದನ್ನೂ ಓದಿ: 777 ಚಾರ್ಲಿ’ ನೋಡಿ ಗಳಗಳನೆ ಅತ್ತ ಸಿಎಂ ಬೊಮ್ಮಾಯಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News