ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ !

ನಟಿ ಟಬು ಬಾಲಿವುಡ್ ನಲ್ಲಿ ದೊಡ್ಡ ಹೆಸರು. ಬಹುತೇಕ ಎಲ್ಲ ನಾಯಕ್ ನಟರೊಂದಿಗೆ ತೆರೆ ಹಂಚಿದ್ದಾರೆ. ಆದ್ರೆ ಶಾರುಖ್ ಜೊತೆ ನಟನೆಗೆ ಮಾತ್ರ ಹಿಂದೇಟು ಹಾಕುತ್ತಾರೆ. 

Written by - Ranjitha R K | Last Updated : Jul 22, 2024, 12:34 PM IST
  • ದೀರ್ಘಕಾಲದವರೆಗೆ ಹಿಂದಿ ಚಿತ್ರರಂಗವನ್ನು ಆಳಿದ ನಟಿ ಇವರು.
  • ಕೆಲ ಚಿತಗಳಲ್ಲಿ ವಿಲನ್ ಆಗಿಯೂ ಮಿಂಚಿದ್ದಾರೆ.
  • ಈ ಖ್ಯಾತ ನಟಿ ಇಲ್ಲಿಯವರೆಗೆ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿಲ್ಲ.
ಶಾರುಖ್ ಜೊತೆ ನಟಿಸುವುದನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಈ ಸ್ಟಾರ್ ನಟಿ !ದೊಡ್ಡ ಬ್ಯಾನರ್ ಸಿನಿಮಾಗಳಿಗೂ ನೋ ಎಂದಿರುವ ಕಾರಣ ಇದೇ ! title=

ಮುಂಬಯಿ : ದೀರ್ಘಕಾಲದವರೆಗೆ ಹಿಂದಿ ಚಿತ್ರರಂಗವನ್ನು ಆಳಿದ ನಟಿ ಇವರು.ಕೆಲ ಚಿತಗಳಲ್ಲಿ ವಿಲನ್ ಆಗಿಯೂ ಮಿಂಚಿದ್ದಾರೆ.ದಶಕಗಳಿಂದ ಅನೇಕ ದೊಡ್ಡ ಸ್ಟಾರ್ ಗಳ ಜೊತೆ ತೆರೆ ಹಂಚಿ ಕೊಂಡಿದ್ದಾರೆ.ಬಾಲಿವುಡ್ ನ ಖ್ಯಾತ ನಾಮರ ಜೊತೆ ನಟಿಸ ಸೈ ಎನಿಸಿಕೊಂಡಿದ್ದಾರೆ.ಆದರೆ ಈ ಖ್ಯಾತ ನಟಿ ಇಲ್ಲಿಯವರೆಗೆ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಿಲ್ಲ.ಇವರಿಬ್ಬರು ಮುಖ್ಯ ಭೂಮಿಕೆಯಲ್ಲಿರುವ ಒಂದೇ ಒಂದು ಚಿತ್ರ ಕೂಡಾ ಇಲ್ಲ.  

ಈ ಜೋಡಿಯು ಮೊದಲ ಬಾರಿಗೆ 22 ವರ್ಷಗಳ ಹಿಂದೆ 2002 ರ 'ಸಾಥಿಯಾ' ಚಿತ್ರದಲ್ಲಿ ಕಾಣಿಸಿಕೊಂಡಿತು.ನಂತರ ಅಭಿಮಾನಿಗಳು ಈ ಜೋಡಿಯನ್ನು  ದೊಡ್ಡ ಪರದೆಯಲ್ಲಿ ನೋಡಲೇ ಇಲ್ಲ. ನಾವಿಲ್ಲಿ ಹೇಳುತ್ತಿರುವುದು ಬಾಲಿವುಡ್ ನಟಿ ಟಬು ಬಗ್ಗೆ. ಇನ್ನು ಇವರು ಶಾರುಖ್ ಜೊತೆ ಯಾಕೆ ನಟಿಸಿಲ್ಲ ಎನ್ನುವುದರ ಬಗ್ಗೆ ಖುದ್ದು ಇವರೇ ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೂ ಮುನ್ನ ಈ ನಟನ ಜೊತೆ ಲಿವಿನ್ ರಿಲೇಶನ್ ನಲ್ಲಿದ್ದರು ನತಾಶಾ!ರಿಯಾಲಿಟಿ ಶೋ ನಲ್ಲಿಯೂ ಇವರಿಬ್ಬರು ಮೂಡಿಸಿದ್ದರು ಸಂಚಲನ!

ಯಾಕೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿಲ್ಲ : 
ಶಾರುಖ್ ಯಾವ ಚಿತ್ರಗಳನ್ನು ಮಾಡಬೇಕು ಅಥವಾ ಯಾವುದನ್ನು ಮಾಡಬಾರದು ಎಂಬುದರ ಮೇಲೆ ನನ್ನ ನಿಯಂತ್ರಣವಿಲ್ಲ. ನಾನು ನಿರ್ಮಾಪಕ-ನಿರ್ದೇಶಕ, ಚಿತ್ರಕಥೆಗಾರ ಅಥವಾ ಬರಹಗಾರ ಅಲ್ಲ.  ಶಾರುಖ್ ಖಾನ್ ಯಾರೊಂದಿಗೆ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಟಬು ಹೇಳಿದ್ದಾರೆ.

ನನಗೆ ಸಿನಿಮಾ ಆಫರ್ ಮಾಡುವವರಿಗೆ ನಾನು ಎಸ್ ಅಥವಾ ನೋ ಎಂದು ಹೇಳಬಹುದು. ಶಾರುಖ್ ಜಿತೆ ಅನೇಕ ಚಿತ್ರಗಳ ಆಫರ್ ಬಂದಿದೆ. ಕೆಲವು ಚಿತ್ರಗಳನ್ನು ನಾನು ರಿಜೆಕ್ಟ್ ಮಾಡಿದ್ದೇನೆ. ಇನ್ನು ಕೆಲವು ಸಿನಿಮಾಗಳನ್ನು ಶಾರುಖ್ ರಿಜೆಕ್ಟ್ ಮಾಡಿದ್ದಾರೆ. ಇದರಲ್ಲಿ ವಿಶೇಷ ಎನಿಸುವಂಥ ಯಾವುದೇ ವಿಚಾರ ಇಲ್ಲ ಎಂದು ನಟಿ ಹೇಳಿದ್ದಾರೆ. ಇನ್ನು  ಪ್ರೇಕ್ಷಕರು ನನ್ನನ್ನು ಮತ್ತು ಶಾರುಖ್ ಅವರನ್ನು ಒಟ್ಟಿಗೆ ನೋಡಲು ಬಯಸುತ್ತಾರೆ ಎಂಬ ಅಂಶವನ್ನು ನಾನು ಗೌರವಿಸುತ್ತೇನೆ ಎಂದು ಕೂಡಾ ಹೇಳಿದ್ದಾರೆ. 

ಇದನ್ನೂ ಓದಿ : ಕರಿಷ್ಮಾ ಪ್ರೀತಿಗೆ ಮುಳುವಾಗಿದ್ದರು ತಾಯಿ..ಅಭಿಷೇಕ್‌ ಬಚ್ಚನ್‌ ಜೊತೆಗೂ ಮುರಿದಿತ್ತು ನಿಶ್ಚಿತಾರ್ಥ.. ಪ್ರೀತಿ ಒಲಿಯದೆ ನಟಿ ಒಂಟಿಯಾಗಿ ಉಳಿದ್ದಿದ್ದು ಯಾಕೆ..?

'ಓಂ ಶಾಂತಿ ಓಂ' ಗಾಗಿ  ಗಿಫ್ಟ್ : 
ಶಾರುಖ್ ಖಾನ್ ಅವರ ಸೂಪರ್‌ಹಿಟ್ ಚಿತ್ರ 'ಓಂ ಶಾಂತಿ ಓಂ' ನ 'ದೀವಾಂಗಿ ದೀವಾಂಗಿ'ಹಾಡಿನಲ್ಲಿ ಟಬು ತಮ್ಮ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ಸೆಲೆಬ್ರಿಟಿಗಳಿಗೆ ಶಾರುಖ್ ಉದಾರವಾಗಿ ದುಬಾರಿ ಉಡುಗೊರೆಗಳನ್ನು ನೀಡಿದ್ದಾರೆ ಎಂದು ನಟಿ ಹೇಳಿದ್ದಾರೆ. ಟಬು ಮತ್ತು ಅಜಯ್ ದೇವಗನ್ ಅಭಿನಯದ 'ಔರೋನ್ ಮೇ ಕಹಾನ್ ದಮ್ ಥಾ' ಚಿತ್ರವು ಶೀಘ್ರದಲ್ಲೇ ಥಿಯೇಟರ್‌ಗೆ ಲಗ್ಗೆ ಇಡಲಿದೆ. ನಟಿ ಇದೀಗ ಈ ಸಿನಿಮಾದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News