ಬಾಲಿವುಡ್ ನಲ್ಲಿ ಹೆಸರು ಮಾಡಲು ʼಅದನ್ನುʼ ಮಾಡಲೇಬೇಕು.. ಸ್ಟಾರ್ ನಟಿ ಕಾಮೆಂಟ್‌ ವೈರಲ್!

Bollywood Actress: ಸ್ಟಾರ್‌ ನಟ-ನಟಿಯರು ಯಾವುದೇ ವಿಚಾರವಿದ್ದರೂ ಬಹಿರಂಗವಾಗಿ ಮಾತನಾಡಿರುತ್ತಾರೆ.. ಅದೇ ರೀತಿ ಇದೀಗ ಬಾಲಿವುಡ್‌ನ ಖ್ಯಾತ ನಾಯಕಿಯೊಬ್ಬರು ಬೋಲ್ಡ್‌ ಕಾಮೆಂಟ್‌ವೊಂದನ್ನು ಮಾಡಿದ್ದಾರೆ..

Written by - Savita M B | Last Updated : Mar 23, 2024, 08:29 AM IST
  • ನಿಮಾ ಅಭಿಮಾನಿಗಳಿಗೆ ಅದರಲ್ಲೂ ಡಾನ್ಸ್ ಪ್ರಿಯರಿಗೆ ನೋರಾ ಫತೇಹಿ ಕುರಿತಾದ ಯಾವುದೇ ಪರಿಚಯದ ಅಗತ್ಯವಿಲ್ಲ
  • ಡ್ಯಾನ್ಸರ್, ಮಾಡೆಲ್, ಗಾಯಕಿ, ನಟಿ, ರಿಯಾಲಿಟಿ ಶೋ ಜಡ್ಜ್... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ತಮ್ಮ ಛಾಪು ಮೂಡಿಸಿರುವ ನೋರಾ
  • ನೋರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಬಾಲಿವುಡ್ ನಲ್ಲಿ ಹೆಸರು ಮಾಡಲು ʼಅದನ್ನುʼ ಮಾಡಲೇಬೇಕು.. ಸ್ಟಾರ್ ನಟಿ ಕಾಮೆಂಟ್‌ ವೈರಲ್! title=

Bollywood Actress Nora fatehi: ಸಿನಿಮಾ ಅಭಿಮಾನಿಗಳಿಗೆ ಅದರಲ್ಲೂ ಡಾನ್ಸ್ ಪ್ರಿಯರಿಗೆ ನೋರಾ ಫತೇಹಿ ಕುರಿತಾದ ಯಾವುದೇ ಪರಿಚಯದ ಅಗತ್ಯವಿಲ್ಲ. ಡ್ಯಾನ್ಸರ್, ಮಾಡೆಲ್, ಗಾಯಕಿ, ನಟಿ, ರಿಯಾಲಿಟಿ ಶೋ ಜಡ್ಜ್... ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಈಗಾಗಲೇ ತಮ್ಮ ಛಾಪು ಮೂಡಿಸಿರುವ ನೋರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.  

ನಿನ್ನೆ ಬಿಡುಗಡೆಯಾದ 'ಮಡ್ಗಾಂವ್ ಎಕ್ಸ್ ಪ್ರೆಸ್' ಚಿತ್ರದಲ್ಲಿ ನೋರಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ ನೋರಾ ಅವರು ಸಿನಿ ಉದ್ಯಮದಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಿಲ್ಲಲು ವಿಶೇಷ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ-IPL 2024 Anchor ಶೆಫಾಲಿ ಬಗ್ಗಾ ಯಾರು ಗೊತ್ತೇ! ಆಂಕರಿಂಗ್‌ಗಾಗಿ ಟೀಕೆಗೊಳಗಾದ ಈಕೆಯ ಸಂಭಾವನೆ ಕೇಳಿದ್ರೆ ಶಾಕ್‌ ಆಗುತ್ತೆ!

ಇತ್ತೀಚಿನ ಸಂದರ್ಶನವೊಂದರಲ್ಲಿ, ನೋರಾ ಫತೇಹಿ " ಜನರು ಯಾವಾಗ ಯಾರ ರೀತಿ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.. ಅಂದರೇ ವೀಕ್ಷಿಸುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ..ಆದರೆ ತಾನು ಯಾರನ್ನೂ ದೂಷಿಸುವುದಿಲ್ಲ,. ನನ್ನ ಮೇಲೆ ಒತ್ತಡ ಬಾರದಂತೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ.. ಏಕಕಾಲಕ್ಕೆ ಹಲವು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೇನೆ.. ಅವಕಾಶಗಳು ಸಿಗದಿದ್ದಾಗ ಅಥವಾ ಮಾಡಿದ ಸಿನಿಮಾಗಳು ನೆಲಕಚ್ಚಿದಾಗ ಅನೇಕ ಸಹ ನಟರು ಖಿನ್ನತೆಗೆ ಒಳಗಾಗುವುದನ್ನು ನೋಡಿದ್ದೇನೆ ಹಾಗೆಂದು ಇರಬಾರದು ಏಕೆಂದರೆ ಜೀವನ ತುಂಬಾ ಚಿಕ್ಕದಾಗಿದೆ ಎಂಜಾಯ್‌ ಮಾಡಬೇಕು" ಎಂದು ನೋರಾ ಹೇಳಿದ್ದಾರೆ.

ಡ್ಯಾನ್ಸರ್ ಆಗಿರುವ ನಿಮ್ಮನ್ನು ಇಂಡಸ್ಟ್ರಿಯಲ್ಲಿ ಗಂಭೀರವಾಗಿ ಪರಿಗಣಿಸುವುದಿಲ್ಲವೇ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ ಈ ಬಗ್ಗೆ ನನ್ನ ಬಳಿ ಸರಿಯಾದ ಉತ್ತರವಿಲ್ಲ. ಆದರೆ ನನಗೆ ಸಿನಿಮಾ ಮಾಡಲು ಇಷ್ಟ ಅದಕ್ಕೆ ಇಲ್ಲಿಗೆ ಬಂದಿದ್ದೇನೆ.. ಸಿನಿಮಾಗಳೇ ನನಗೆ ಉದ್ಯಮದಲ್ಲಿ ಸಕಾರಾತ್ಮಕ ವ್ಯಕ್ತಿಯಾಗಲು ಅವಕಾಶ ಮಾಡಿಕೊಟ್ಟಿತು. ಅವಕಾಶಗಳಿಗಾಗಿ ಕಾಯಲೇಬೇಕು, ಸ್ಟ್ರಾಂಗ್ ಆಗಿರಲೇಬೇಕು ಎಂದಿದ್ದಾರೆ ನೋರಾ.. 

 ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ನೋರಾ ಆಗಾಗ್ಗೆ ತನ್ನ ಗ್ಲಾಮರ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.. 

ಇದನ್ನೂ ಓದಿ-Mehreen Pirzada : ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಮೆಹ್ರೀನ್..! ಫೋಟೋಸ್‌ ವೈರಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News