ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್!

Bollywood Star Actress: ಕೆಲವರು ಸಿನಿಮಾ ಹಿನ್ನೆಲೆಯಿದ್ದರೂ ಅದನ್ನು ಬದಿಗಿಟ್ಟು ತಮ್ಮ ಪ್ರತಿಭೆಯನ್ನೇ ನಂಬಿ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಲು ಪ್ರಯತ್ನಿಸಿದ್ದಾರೆ..   

Written by - Savita M B | Last Updated : May 26, 2024, 12:21 PM IST
  • ಬಣ್ಣದ ಲೋಕದಲ್ಲಿ ನೆಲೆಯೂರುವುದು ಅಷ್ಟು ಸುಲಭವಲ್ಲ..
  • ಸ್ಟಾರ್‌ ಮಕ್ಕಳಾದರೂ ಸಹ ಕೆಲವರು ತಮ್ಮ ಪ್ರತಿಭೆಯಿಂದಲೇ ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಪರದಾಡಿದ್ದಾರೆ..
 ಒಂದು ಕಾಲದಲ್ಲಿ ಕಾಫಿ ಶಾಪ್ ನಲ್ಲಿ ಕೆಲಸ ಮಾಡಿದ್ದ ಈ ಖ್ಯಾತ ನಟಿ.. ಈಗ ಶಾರುಖ್, ಆಲಿಯಾ, ದೀಪಿಕಾಗಿಂತ ಹೆಚ್ಚು ಪಾಪ್ಯುಲರ್! title=

Shraddha Kapoor Life Story: ಬಣ್ಣದ ಲೋಕದಲ್ಲಿ ನೆಲೆಯೂರುವುದು ಅಷ್ಟು ಸುಲಭವಲ್ಲ.. ಸಾಕಷ್ಟು ಅಡೆತಡೆಗಳನ್ನು ಎದುರಿಸಿ ತಮಗೊಂದು ಸ್ಥಾನ ಕಲ್ಪಿಸಿಕೊಳ್ಳಬೇಕು.. ಸ್ಟಾರ್‌ ಮಕ್ಕಳಾದರೂ ಸಹ ಕೆಲವರು ತಮ್ಮ ಪ್ರತಿಭೆಯಿಂದಲೇ ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಪರದಾಡಿದ್ದಾರೆ.. ಅಂತಹವರಲ್ಲಿ ಈ ನಟಿಯೂ ಒಬ್ಬರು.. 

ಆರಂಭದಲ್ಲಿ ಕಾಫಿಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ನಟಿಗೆ 16ನೇ ವಯಸ್ಸಿನಲ್ಲಿ ಬಾಲಿವುಡ್‌ನ ಟಾಪ್ ಹೀರೋ ಸಲ್ಮಾನ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು.. ಆದರೆ ಅದನ್ನು ತಿರಸ್ಕರಿಸಿದ ಈಕೆ ಇಂದು  ದೀಪಿಕಾ, ಆಲಿಯಾ, ಶಾರುಖ್ ಖಾನ್ ಗಿಂತಲೂ ಹೆಚ್ಚು ಜನಪ್ರಿಯತೆ ಗಳಿಸಿದ್ದಾಳೆ. ಆ ನಟಿ ಬೇರೆ ಯಾರೂ ಅಲ್ಲ.. ಪಾಪ್ಯುಲರ್‌ ಸ್ಟಾರ್‌ ಕಿಡ್‌ ಶ್ರದ್ಧಾ ಕಪೂರ್‌.. ಆಶಿಕಿ 2 ಸಿನಿಮಾದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಈ ಚೆಲುವೆ ಇಂದು ಬಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿ.. 

ಇದನ್ನೂ ಓದಿ-Gangs Of Godavari : ಗ್ಯಾಂಗ್ಸ್ ಆಫ್ ಗೋದಾವರಿ ಟ್ರೇಲರ್ ರಿಲೀಸ್ ಹೇಗಿದೆ ಗೊತ್ತಾ!

ನಟಿ ಶ್ರದ್ಧಾ ಆರಂಭದಲ್ಲಿ ಪ್ಲಾಫ್‌ ಚಿತ್ರಗಳನ್ನು ನೀಡಿದ್ದರು.. ಇವರಿಗೆ ಸೂಪರ್‌ ಸ್ಟಾರ್‌ ಸ್ಥಾನ ಮಾನ ತಂದುಕೊಟ್ಟಿದ್ದು ಆಶಿಕಿ ಸಿನಿಮಾ.. ಅಂದಿನಿಂದ ಈ ಮುದ್ದಾದ ಸುಂದರಿ ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಟಿ ಇಲ್ಲಿಯವರೆಗೂ ಒಂದೇ ಒಂದು ಬ್ಲಾಕ್ ಬಸ್ಟರ್ ಸಿನಿಮಾ ನೀಡಿಲ್ಲ.. 

ಶ್ರದ್ಧಾ ಕಪೂರ್ ಸ್ಟಾರ್ ಕಿಡ್ ಆದರೂ ತನ್ನ ಪ್ರತಿಭೆಯನ್ನು ನಂಬುತ್ತಾಳೆ. ತಮ್ಮ ಉತ್ತಮ ನಟನೆ ಮತ್ತು ಡಾನ್ಸ್‌ ಟ್ಯಾಲೆಂಟ್ನಿನಿಂದ ಹಲವರ ನೆಚ್ಚಿನ ನಟಿಯಾಗಿದ್ದಾರೆ. ಈ ಚೆಲುವೆಯ ತಂದೆ ಶಕ್ತಿ ಕಪೂರ್ ಬಾಲಿವುಡ್ ನಲ್ಲಿ ಹಲವು ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಆಕೆಯ ತಾಯಿ ಶಿವಾಂಗಿ ಕಪೂರ್ ಕೂಡ ನಟಿ.. 

ಶ್ರದ್ಧಾ ಕಪೂರ್‌ಗೆ ಬಾಲ್ಯದಿಂದಲೂ ನಟಿಯಾಗುವ ಕನಸಿತ್ತು. ಅದಕ್ಕಾಗಿಯೇ ಅವರು 17 ನೇ ವಯಸ್ಸಿನಲ್ಲಿ ಕಾಲೇಜು ತೊರೆದು ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆದರೆ ಸಂದರ್ಶನವೊಂದರಲ್ಲಿ ಶಕ್ತಿ ಕಪೂರ್ ಹೇಳಿರುವ ಪ್ರಕಾರ, ಶ್ರದ್ಧಾ ಅವರಿಗೆ 16 ನೇ ವಯಸ್ಸಿನಲ್ಲಿ ಸಲ್ಮಾನ್ ಖಾನ್ ಅವರ 'ನೋ ಟೈಮ್ ಫಾರ್ ಲವ್' ಚಿತ್ರದಲ್ಲಿ ಅವಕಾಶ ಸಿಕ್ಕಿತು. ಆದರೆ ಆ ಸಮಯದಲ್ಲಿ ಅವರು Psychologyಯಲ್ಲಿ ಪದವಿ ಪಡೆಯಲು ಬಯಸಿ ಅದನ್ನು ನಿರಾಕರಿಸಿದ್ದರು ಎಂದಿದ್ದರು..  

ಇದನ್ನೂ ಓದಿ-ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಆಶಿಕಾ ರಂಗನಾಥ್...ಯಾವ ಚಿತ್ರ?

'ಆಶಿಕಿ 2' ನಂತರ, ಶ್ರದ್ಧಾ 'ಸ್ತ್ರೀ', 'ತು ಜೂಥಿ ಮೈನ್ ಮಕ್ಕರ್', 'ಬಾಘಿ' ಮತ್ತು 'ಎ ವಿಲನ್' ಚಿತ್ರಗಳೊಂದಿಗೆ ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ನೀಡಿದರು. ಸಾಹೋ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿಸಿ ತೆಲುಗಿನಲ್ಲೂ ಕ್ರೇಜ್ ಗಳಿಸಿದ್ದರು. ಆದರೆ, ಇದುವರೆಗೆ ಅವರ ಯಾವ ಚಿತ್ರವೂ ಬ್ಲಾಕ್ ಬಸ್ಟರ್ ಆಗಿಲ್ಲ. ಆದರೂ ಅವರ ಜನಪ್ರಿಯತೆ ಸ್ಟಾರ್ ಹೀರೋಯಿನ್‌ಗಳಿಗೂ ಕಡಿಮೆ ಇಲ್ಲ.. 

ಈ ಗೊಂಬೆ ಇನ್‌ಸ್ಟಾಗ್ರಾಮ್‌ನಲ್ಲಿ 8.86 ಕೋಟಿಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.. ಆ ಲೆಕ್ಕಚಾರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಸಲ್ಮಾನ್ ಖಾನ್ ಅವರಂತಹ ಸೂಪರ್‌ಸ್ಟಾರ್‌ಗಳಿಗಿಂತ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಟಾಪ್ ನಟಿಯಾಗಿರುವ ಶ್ರದ್ಧಾ ಕಪೂರ್ ಪ್ರತಿ ಚಿತ್ರಕ್ಕೆ 5-7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News