Chandan Niveditha Gowda : ನಗು ನಗುತ್ತಾ.. ಕೈ ಕೈ ಹಿಡಿದುಕೊಂಡು ಬಂದು ʼಡಿವೋರ್ಸ್‌ʼ ಪಡೆದ ಚಂದನ್‌-ನಿವೇದಿತಾ..! ವಿಡಿಯೋ ವೈರಲ್‌

Chandan Niveditha Gowda : ಸ್ಯಾಂಡಲ್‌ವುಡ್‌ ಕ್ಯೂಟ್​ ಜೋಡಿಗಳಲ್ಲಿ ಒಂದಾದ ನಟಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರು ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಕೈ ಕೈ ಹಿಡಿದುಕೊಂಡೇ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್​ಗೆ ಬಂದ ಜೋಡಿಯ ವಿಡಿಯೋ ವೈರಲ್‌ ಆಗಿದೆ..

Written by - Krishna N K | Last Updated : Jun 7, 2024, 06:39 PM IST
    • ನಟಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ
    • ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ
    • ಇಬ್ಬರು ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 2020ರಲ್ಲಿ ವಿವಾಹವಾಗಿದ್ದರು
Chandan Niveditha Gowda : ನಗು ನಗುತ್ತಾ.. ಕೈ ಕೈ ಹಿಡಿದುಕೊಂಡು ಬಂದು ʼಡಿವೋರ್ಸ್‌ʼ ಪಡೆದ ಚಂದನ್‌-ನಿವೇದಿತಾ..! ವಿಡಿಯೋ ವೈರಲ್‌ title=

Chandan Shetty Nivedita Gowda Divorce : ಬಿಗ್‌ಬಾಸ್‌ ಶೋನಿಂದ ಹತ್ತಿರವಾಗಿದ್ದ ಈ ಜೋಡಿ, ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು. ಇದೀಗ ಇಬ್ಬರು ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಡಿವೋರ್ಸ್​ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ, ಇದುವರೆಗೂ ಇಬ್ಬರೂ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ..

ನಿನ್ನೆ ಅಂದ್ರೆ ಜೂನ್‌ 6ರಂದು ಜೋಡಿ ಫ್ಯಾಮಿಲಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ. 2017ರಲ್ಲಿ ಪ್ರಸಾರವಾದ ಬಿಗ್​ ಬಾಸ್​ ಕನ್ನಡ ಸೀಸನ್​ 5 ಶೋನಲ್ಲಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ಭಾಗವಹಿಸಿದ್ದರು. ತದನಂತರ ಇಬ್ಬರು ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 2020ರಲ್ಲಿ ವಿವಾಹವಾಗಿದ್ದರು. 

ಇದನ್ನೂ ಓದಿ: ನನಗೆ ಭಯವಾಗುತ್ತಿದೆ.. ಬೆದರಿಕೆ ಕರೆಗಳು ಬರುತ್ತಿವೆ.. ಖ್ಯಾತ ಆ್ಯಂಕರ್ ಸೆನ್ಸೇಷನಲ್ ಕಾಮೆಂಟ್!

ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್​ ಶೆಟ್ಟಿ ಅವರು ಪ್ರಪೋಸ್​ ಮಾಡಿ ಸುದ್ದಿಯಾಗಿದ್ದರು, ಅಲ್ಲದೆ ವಿರೋಧಕ್ಕೂ ಕಾರಣವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ರೀಲ್ಸ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಫೇಮಸ್‌ ಆಗಿದ್ದರು. ಆದರೆ, ಕೇವಲ 4 ವರ್ಷದಲ್ಲೇ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ನಿರ್ಧರಿಸಿರುವುದು ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದೆ..

 

ಮದುವೆ ನಂತರ ನಿವೇದಿತಾ ಗೌಡ ಕೆಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದರು. ಚಂದನ್‌ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ, ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೆಯಾದ ಹೆಸರು ಮಾಡಿದ್ದಾರೆ. ಆದ್ರೆ ಏಕಾಏಕಿ ಡಿವೋರ್ಸ್‌ ಪಡೆದಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!

ಸಧ್ಯ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್​ನಲ್ಲಿ ಚಂದನ್​ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈವರೆಗೂ ಚಂದನ್ ಮತ್ತು ನಿವೇದಿತಾ ಅವರು ಈ ವಿಚಾರವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಒಟ್ಟಾರೆಯಾಗಿ ಈ ಜೋಡಿ ಡಿವೋರ್ಸ್‌ ಸುದ್ದಿಯಂತೂ ಅವರ ಅಭಿಮಾನಿಗಳಿಗೆ ಶಾಕ್‌ ತಂದಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News