Chello Show Controversy: ವಿವಾದದಲ್ಲಿ ಸಿಲುಕಿದ 'ಛೆಲ್ಲೋ ಶೋ', ವಿದೇಶಿ ಚಿತ್ರ-ಆಯ್ಕೆ ತಪ್ಪು ಎಂದ FWICE

Chello Show Controversy: ಗುಜರಾತಿ ಚಿತ್ರವಾಗಿರುವ 'ಛೆಲ್ಲೋ ಷೋ' ಆಸ್ಕರ್ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿದೆ. ಇದೊಂದು ವಿದೇಶಿ ಚಿತ್ರವಾಗಿದ್ದು, ಅದರ ಆಯ್ಕೆ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು FWICE ಹೇಳಿದೆ.  

Written by - Nitin Tabib | Last Updated : Sep 23, 2022, 05:14 PM IST
  • ನಿರ್ಮಾಪಕ ಅಶೋಕ್ ಪಂಡಿತ್, ಇದೊಂದು ಕಾಪಿ ಚಿತ್ರವಾಗಿದೆ ಎಂದಿದ್ದರು.
  • ಅಷ್ಟೇ ಅಲ್ಲ ಅಶೋಕ್ ಪಂಡಿತ್ 'ಛೆಲ್ಲೋ ಷೋ' ಹಾಗೂ 'ಸಿನೆಮಾ ಪ್ಯಾರಾಡೈಸೋ' ಪೋಸ್ಟರ್ ಗಳನ್ನು ಕೂಡ ಹಂಚಿಕೊಂಡಿದ್ದರು.
  • FFI ಚಿತ್ರ ಆಯ್ಕೆಯಲ್ಲಿ ಮತ್ತೊಮ್ಮೆ ತಪ್ಪು ಎಸಗಿದೆ ಎಂದು ಅವರು ಹೇಳಿದ್ದರು.
Chello Show Controversy: ವಿವಾದದಲ್ಲಿ ಸಿಲುಕಿದ 'ಛೆಲ್ಲೋ ಶೋ', ವಿದೇಶಿ ಚಿತ್ರ-ಆಯ್ಕೆ ತಪ್ಪು ಎಂದ FWICE title=
Chello Show (Courtesy: Twitter)

Chello Show Controversy:  ಪಾನ್ ನಳಿನ್ ಅವರ ಗುಜರಾತಿ ಚಿತ್ರ 'ಛೆಲ್ಲೋ ಶೋ' ಚಿತ್ರ ವಿವಾದಕ್ಕೆ ಸಿಲುಕಿದೆ. 2023 ರ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಎಂದು ಈ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ. ಈಗ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಇದನ್ನು ವಿರೋಧಿಸಿದೆ. ಈ ಚಿತ್ರ ಭಾರತೀಯ ಚಿತ್ರವಲ್ಲ. ಅಲ್ಲದೇ ಚಿತ್ರದ ಆಯ್ಕೆ ವಿಧಾನ ಸರಿಯಿಲ್ಲ, ತೀರ್ಪುಗಾರರನ್ನು ವಿಸರ್ಜಿಸಬೇಕು ಎಂದು FWICE ಹೇಳಿದೆ. 'ಛೆಲ್ಲೋ ಶೋ' ಆಯ್ಕೆಯ ಘೋಷಣೆಯನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಮಾಡಿದೆ. ಇದರ ಇಂಗ್ಲಿಷ್ ಶೀರ್ಷಿಕೆ Last Film Show ಆಗಿದೆ. ಈ ಚಿತ್ರವನ್ನು ಭಾರತದಲ್ಲಿ ಅಕ್ಟೋಬರ್ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 

ಚಿತ್ರ ಖರೀದಿಸಿದ ಸಿದ್ಧಾರ್ಥ್ ರಾಯ್ ಕಪೂರ್
ಚಿತ್ರದ ಕುರಿತು ಮಾತನಾಡಿರುವ FWICE ಅಧ್ಯಕ್ಷ ಬಿಎನ್ ತಿವಾರಿ, ಇದೊಂದು ಭಾರತೀಯ ಚಿತ್ರವಾಗಿಲ್ಲ ಹಾಗೂ ಅದರ ಆಯ್ಕೆಯ ಪ್ರಕ್ರಿಯೆಯೂ ಕೂಡ ಸರಿಯಾಗಿಲ್ಲ. ಆಸ್ಕರ್ ಪ್ರವೇಶದ ರೇಸ್ ನಲ್ಲಿ ಆರ್.ಆರ್.ಆರ್ ಹಾಗೂ ದಿ ಕಾಶ್ಮೀರ್ ಫೈಲ್ಸ್ ಗಳಂತಹ ಚಿತ್ರಗಳಿದ್ದವು. ಆದರೆ, ಜ್ಯೂರಿ ಸದಸ್ಯರು ಒಂದು ವಿದೇಶಿ ಚಿತ್ರವನ್ನು ಆಯ್ಕೆ ಮಾಡಿದ್ದಾರೆ ಮತ್ತು ಅದನ್ನು ಸಿದ್ಧಾರ್ಥ್ ರಾಯ್ ಕಪೂರ್ ಖರೀದಿಸಿದ್ದಾರೆ ಎಂದಿದ್ದಾರೆ. 

ಇದನ್ನೂ ಓದಿ-ಕನ್ನಡಿಗರ ಪ್ರೀತಿಗೆ ಪಾತ್ರರಾದ ʼಗುರುಶಿಷ್ಯರುʼ : ಸಿನಿಮಾ ನೋಡಿದವ್ರು ಅಂದ್ರು ಸೂಪರ್‌..!

ಭಾರತದ ಮೇಲೆ ಇದು ಕೆಟ್ಟ ಪ್ರಭಾವ ಬೀರಲಿದೆ
ಆಸ್ಕರ್ ಪ್ರವೇಶಕ್ಕೆ ಬಾರತದ ಚಿತ್ರವನ್ನು ನಾವು ಮರು-ಆಯ್ಕೆ ಮಾಡಬೇಕು. ಪ್ರಸ್ತುತ ಇರುವ ಜ್ಯೂರಿ ಮಂಡಳಿಯನ್ನು ವಿಸರ್ಜಿಸಬೇಕು. ಪ್ರಸ್ತುತ ಇರುವ ಜ್ಯೂರಿ ಸದಸ್ಯರಲ್ಲಿ ಅರ್ಧದಷ್ಟು ಜನರು ಬಹಳ ಕಾಲದಿಂದ ಅಲ್ಲಿದ್ದಾರೆ ಮತ್ತು ಉಳಿದ ಜ್ಯೂರಿ ಸದಸ್ಯರು ಚಲನ ಚಿತ್ರ ವೀಕ್ಷಿಸದೆ ಮತ ಚಲಾಯಿಸುತ್ತಾರೆ.  Last Film Show ಅನ್ನು ಆಸ್ಕರ್ ಗೆ ಕಳುಹಿಸಿದರೆ ಅದು ಭಾರತದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. ಭಾರತೀಯ ಚಿತ್ರೋದ್ಯಮ ದೊಡ್ಡ ಪ್ರಮಾಣದಲ್ಲಿ ಚಲನಚಿತ್ರಗಳ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೂ ಪತ್ರ ಬರೆಯುವುದಾಗಿ ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ-ಸೆಪ್ಟೆಂಬರ್ 30ಕ್ಕೆ ತೆರೆ ಮೇಲೆ ತೋತಾಪುರಿ .! ಪ್ರೇಕ್ಷಕರಿಗೆ ಫುಲ್ ನಗೆ ಹಬ್ಬ

ಅಶೋಕ್ ಪಂಡಿತ್ ಅವರು ಕೂಡ ಪೋಸ್ಟ್ ಹಂಚಿಕೊಂಡಿದ್ದರು
'ಲಾಸ್ಟ್ ಫಿಲ್ಮ್ ಷೋ' ಆಯ್ಕೆಗೊಂಡ ಬಳಿಕ ಪೋಸ್ಟ್ ಹಂಚಿಕೊಂಡಿದ್ದ ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ಇದೊಂದು ಕಾಪಿ ಚಿತ್ರವಾಗಿದೆ ಎಂದಿದ್ದರು. ಅಷ್ಟೇ ಅಲ್ಲ ಅಶೋಕ್ ಪಂಡಿತ್ 'ಛೆಲ್ಲೋ ಷೋ' ಹಾಗೂ 'ಸಿನೆಮಾ ಪ್ಯಾರಾಡೈಸೋ' ಪೋಸ್ಟರ್ ಗಳನ್ನು ಕೂಡ ಹಂಚಿಕೊಂಡಿದ್ದರು. FFI ಚಿತ್ರ ಆಯ್ಕೆಯಲ್ಲಿ ಮತ್ತೊಮ್ಮೆ ತಪ್ಪು ಎಸಗಿದೆ ಎಂದು ಅವರು ಹೇಳಿದ್ದರು. ಆಸ್ಕರ್ ನ ಬೇಸಿಕ್ ನಿಯಮ ಒರಿಜಿನ್ಯಾಲಿಟಿ ಆಗಿದೆ ಮತ್ತು ಅದನ್ನು ಕಡೆಗಾಣಿಸಲಾಗಿದೆ. ಕಾಪಿ ಚಿತ್ರವಾದ ಕಾರಣ ಅದು ತಿರಸ್ಕಾರಕ್ಕೆ ಒಳಗಾಗಬಹುದು ಎಂದು ಅಶೋಕ್ ಪಂಡಿತ್ ಹೇಳಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News