ʼಬಜರಂಗದಳದ ಹುಡುಗರನ್ನು ಬದಲಿಸಿ ಇಲ್ಲ ಬಾರಿಸಿʼ ಮಾಜಿಡಾನ್‌ ಹೇಳಿಕೆಗೆ ಚೇತನ್‌ ಅಹಿಂಸಾ ಗರಂ

Chetan Ahimsa : ನಟ ಚೇತನ್‌ ಸಮಾಜದಲ್ಲಿ ಜರುಗುವ ವಿದ್ಯಮಾನಗಳು ಕುರಿತು ಯಾವಾಗಲೂ ಧ್ವನಿ ಎತ್ತುತ್ತಿರುತ್ತಾರೆ. ಈ ವಿಚಾರವಾಗಿ ಅವರು ವಿರೋಧ ಮತ್ತು ಪರ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುತ್ತಾರೆ. ಇದೀಗ ಚೇತನ್‌ ಅಗ್ನಿ ಶ್ರೀಧರ್‌ ಹೇಳಿಕೆಗಳನ್ನು ಖಂಡಿಸಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

Written by - Savita M B | Last Updated : Jun 11, 2023, 05:02 PM IST
  • ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ಅವರ ಹೇಳಿಕೆಗೆ ನಟ ಚೇತನ್ ತಿರುಗೇಟು
  • ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅವರು ವಿರುದ್ಧ ಟೀಕೆ ಮಾಡುತ್ತಿದ್ದರು.‌
  • ಮಾಜಿಡಾನ್‌ ವಿರುದ್ಧ ಚೇತನ್‌ ಕಿಡಿ ಕಾರಲು ಕಾರಣವೇನು
ʼಬಜರಂಗದಳದ ಹುಡುಗರನ್ನು ಬದಲಿಸಿ ಇಲ್ಲ ಬಾರಿಸಿʼ ಮಾಜಿಡಾನ್‌ ಹೇಳಿಕೆಗೆ ಚೇತನ್‌ ಅಹಿಂಸಾ ಗರಂ  title=

Chetan Ahimsa on Agni Shridhar : ಆ ದಿನಗಳು ಚಿತ್ರದ ನಟ ಚೇತನ್‌ ಅಹಿಂಸಾ ಅವರು ಸಿನಿಮಾ ರಂಗಕ್ಕಿಂತ ಹೆಚ್ಚಾಗಿ ಹೋರಾಟ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಹಿಂಸೆಯ ವಿರುದ್ಧ ಧ್ವನಿ ಎತ್ತುತ್ತಾರೆ. ಈ ಹಿಂದೆಯೂ ಹಲವರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು. ಈಗ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಅವರು ವಿರುದ್ಧ ಟೀಕೆ ಮಾಡುತ್ತಿದ್ದರು. ಅವರ ಕಾರ್ಯ ವೈಖರಿಯ ಕುರಿತು ವಿರೋಧ ವ್ಯಕ್ತಪಡಿಸುತ್ತಿದ್ದರು. ಈಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಪಕ್ಷದ ವಿರುದ್ಧವೂ ನಟ ತಮ್ಮ ಸಮರವನ್ನು ಮುಂದುವರೆಸಿದ್ದಾರೆ. ಈ ಮಧ್ಯ ತಮಗೆ ಸಿನಿಮಾದಲ್ಲಿ ಅವಕಾಶ ಮಾಡಿಕೊಟ್ಟ ಅಗ್ನಿಶ್ರೀಧರ್‌ ಅವರ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನಟ ಚೇತನ್‌ ಅವರು ಅಗ್ನಿ ಶ್ರೀಧರ್‌ ಅವರ ವಿರುದ್ಧ ಮಾತನಡಿದ್ದೇಕೆ? ಅಂಹತ ಹೇಳಿಕೆ ಏನು ನೀಡಿದ್ದಾರೆ? ಮಾಜಿಡಾನ್‌ ವಿರುದ್ಧ ಚೇತನ್‌ ಕಿಡಿ ಕಾರಲು ಕಾರಣವೇನು ಎನ್ನುವುದರ ಡಿಟೇಲ್ಸ್‌ ಇಲ್ಲಿದೇ ನೋಡಿ.

ಇದನ್ನೂ ಓದಿ-Darshana Rajendran: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ʼಹೃದಯಂ’ ಚಿತ್ರದ ಬೆಡಗಿ ದರ್ಶನಾ; ಸಿನಿಮಾ ಯಾವುದು ಗೊತ್ತಾ..?

ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಅವರು ಸೋಷಿಯಲ್ ಮಿಡಿಯಾದಲ್ಲಿ ಯಾವಾಲೂ ಸಕ್ರಿಯವಾಗಿರುತ್ತಾರೆ. ಹೆಚ್ಚಾಗಿ ಫೇಸ್‌ ಬುಕ್‌ನಲ್ಲಿ ನಟ ಹೇಳಿಕೆಗಳನ್ನು ನೀಡುತ್ತಲೆ ಇರುತ್ತಾರೆ. ಕೆಲವರ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸುತ್ತಾರೆ. ಈಗ ಅಗ್ನಿ ಶ್ರೀಧರ್‌ ಅವರ ಹೇಳಿಕೆಗಳನ್ನು ಖಂಡಿಸಿದ್ದಾರೆ. ಅದರ ಕುರಿತು ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ. 

 

ಅಗ್ನಿಶ್ರೀಧರ್‌ ಹೇಳಿಕೆ ವಿರೋಧಿಸಿ ಮಾಡಿದ ಪೋಸ್ಟ್‌ನಲ್ಲಿ "‘ಅಗ್ನಿ' ಶ್ರೀಧರ್ ಹೇಳುತ್ತಾರೆ: 'ಪ್ರತಿ ಊರಿಲ್ಲಿ ದ್ರಾವಿಡ ಪಡೆ ಆರಂಭಿಸಿ; ಬಜರಂಗದಳದ ಹುಡುಗರನ್ನು ಬದಲಿಸಿ, ಇಲ್ಲಾ ಬಾರಿಸಿ’ಶ್ರೀಧರ್ ಅವರು ನನಗೆ ನೀಡಿದ ಚಲನಚಿತ್ರ ಅವಕಾಶಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ; ಆದರೇ, ಹಿಂಸಾಚಾರಕ್ಕೆ ಅವರ ಈ ಪ್ರಚೋದನೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. (ಮಾಜಿ) ಭೂಗತ ಲೋಕದ ಡಾನ್‌ನಿಂದ ನಾವು ಎಂದಾದರೂ ಸಾಮಾಜಿಕ ಸದಾಚಾರ ಅಥವಾ ಅಹಿಂಸೆಯನ್ನು ನಿರೀಕ್ಷಿಸಬಹುದೇ?" ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ-WATCH: ಅಭಿವಾ ಪಾರ್ಟಿಯಲ್ಲಿ ಸುಮಲತಾ ಜೊತೆ ಯಶ್‌, ದಚ್ಚು ಭರ್ಜರಿ ಸ್ಟೆಪ್‌, ಮಾಲಾಶ್ರೀ ಡ್ಯಾನ್ಸ್‌ಗೆ ಫ್ಯಾನ್ಸ್‌ ಫಿದಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News