Chetan Ahimsa : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಜೊತೆಗೆ ಇದೇ ವೇಳೆ ಮೊದಲ ಬಾರಿಗೆ ಎಂಎಲ್‌ಎಗಳು ಆಗಿದ್ದಾರೆ. ಅವರಲ್ಲಿ ಚಿಕ್ಕಮಂಗಳೂರು ಮೀಸಲು ಕ್ಷೇತ್ರದ ಮೂಡೊಗೆರೆಯ ನಯನಾ ಮೋಟಮ್ಮ ಸಹ ಒಬ್ಬರು.
ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ನಟ ಚೇತನ್ ಅಹಿಂಸಾ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಬುದ್ದ ಬಸವ ಅಂಬೇಡ್ಕರ್ ಅವರ ಹೆಸರಿನಲ್ಲಿ ಪದಗ್ರಹಣ ಮಾಡಿದ ಸತೀಶ್ ಜಾರಕಿಹೊಳಿಯವರನ್ನು ಪ್ರಶ್ನಿಸಿದ್ದಾರೆ.
The Kerala Story ಬಾಲಿವುಡ್‌ನಲ್ಲಿ ಬಿಡುಗಡೆಗೆ ರೆಡಿಯಾಗಿರುವ ʼದಿ ಕೇರಳ ಸ್ಟೋರಿʼ ಸಿನಿಮಾಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ಈ ಸಿನಿಮಾದಲ್ಲಿ ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರ ಮಾಡಿಸುವ ಚಿತ್ರಣವಿದ್ದು, ಈ ಹಿನ್ನೆಲೆಯಲ್ಲಿ ಕೇರಳದ ಆಡಳಿತಾರೂಢ ಸಿಪಿಐ ಹಾಗೂ ವಿರೋಧ ಪಕ್ಷ ʼದಿ ಕೇರಳ ಸ್ಟೋರಿʼ ಚಿತ್ರದ ವಿರುದ್ಧ ಬಿರುಗಾಳಿ ಎಬ್ಬಿಸಿವೆ.
ರಾಮ, ರಾವಣನನ್ನು ಸಾಯಿಸಿ ಅಯೋಧ್ಯೆಗೆ ಬಂದ, ಅಲ್ಲಿ ದೇಶ ಶುರುವಾಯಿತು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅದು ಸುಳ್ಳು. 1992 ದೊಡ್ಡ ಘಟನೆ ನಡೆದು ರಾಮಜನ್ಮಭೂಮಿ ಆಗುತ್ತದೆ. ಬಾಬ್ರಿ ಮಸೀದಿ ಒಡೆದು ಹಾಕುತ್ತಾರೆ. ರಾಮಜನ್ಮಭೂಮಿ ಎನ್ನುವುದು ಕೇವಲ ಒಂದು ಕಾನ್ಸೆಪ್ಟ್, ಅದು ಅವೈಜ್ಞಾನಿಕ ಎಂದು ನಟ ಚೇತನ್ ಹೇಳಿಕೆ ನೀಡಿದ್ದಾರೆ.
Chetan Ahimsa : ಹಿಂದೂ ಧರ್ಮ ಸಾಹಿತ್ಯದ ಕುರಿತಾಗಿ ನಟ ಅಹಿಂಸಾ ಚೇತನ್ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಸಾಕಷ್ಟು ಜನರ ಕೆಂಗಣ್ಣಿಗೆ ಕಾರಣವಾಗುವುದಲ್ಲದೇ ಅನೇಕ ಸಮಸ್ಯೆಗನ್ನು ಎದುರಿಸುತ್ತಿದ್ದಾರೆ. ಇದೀಗ ನಟ ಚೇತನ್ ನೀಡಿರುವ ಮತ್ತೋಂದು ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
Chetan Ahimsa tweet after Sudeep support for BJP: ಇಂದು ಸಿಎಂ ಬಸವರಾಜ ಬೊಮ್ಮಾಯಿ ಜತೆ ಸುದ್ದಿಗೋಷ್ಠಿ ನಡೆಸಿದ ನಟ ಸುದೀಪ್ ತಮ್ಮ ರಾಜಕೀಯ ನಿಲುವನ್ನು ತಿಳಿಸಿದರು. ಆ ಬಳಿಕ ನಟ ಚೇತನ್ ಅಹಿಂಸಾ ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು: ಹಿಂದೂ ವಿರೋಧಿ ಟ್ವೀಟ್ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂದು ಬೆಳಗ್ಗೆ ನಟ ಚೇತನ್ ಅವರನ್ನು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದರು. ಸದ್ಯ ಪೊಲೀಸರ ಎಫ್‍ಐಆರ್ ಆಧರಿಸಿ ಬೆಂಗಳೂರಿನ 32ನೇ ಎಸಿಂಎಂ ನ್ಯಾಯಾಲಯವು ಚೇತನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಕೋರ್ಟ್ ಮುಂದೆ ಚೇತನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
Actor Chetan Ahimsa arrested: ನಟ ಚೇತನ್, ಉರಿಗೌಡ- ನಂಜೆಗೌಡ ವಿಚಾರವಾಗಿ ಅವರು ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದರು. ಚೇತನ್ ಹಿಂದೂ ವಿರೋಧಿ ಬರಹ ಹಿನ್ನೆಲೆ ಶೇಷಾದ್ರಿಪುರಂ ಪೊಲೀಸರು ನಟನ್ನು ಬಂಧಿಸಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರದ ಬೇಷರಂ ರಂಗ್ ಸಾಂಗ್ ವಿವಾದಕ್ಕೆ ಕಾರಣವಾಗಿದ್ದು ಎಲ್ಲರಿಗೂ ತಿಳಿದ ವಿಚಾರ. ಇದೀಗ ದಿಪೀಕಾ ಕೇಸರಿ ಬಿಕಿನಿ ವಿಚಾರವಾಗಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಪ್ರತಿಕ್ರಿಯೇ ನೀಡುವ ಮೂಲಕ ಪಠಾಣ್ ಪರ ಬ್ಯಾಟ್ ಬೀಸಿದ್ದಾರೆ. ಅಲ್ಲದೆ, ಕೇಸರಿ ಹಿಂದುತ್ವದ ಬಣ್ಣ ಅಲ್ಲದೆ ಎಂದಿದ್ದಾರೆ.
ಇಷ್ಟು ದಿನ ಶಾರುಖ್ ಖಾನ ಮಗ ಆರ್ಯನ್ ಖಾನ್, ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದ ಎಂದು ಸುದ್ದಿಯಾಗಿತ್ತು. ಇದೀಗ ಇಂಟರ್‌ನೆಟ್‌ನಲ್ಲಿ ಹೊಸ ಮ್ಯಾಟರ್ ಒಂದು ಹರಿದಾಡುತ್ತಿದ್ದು, ಪಾಕಿಸ್ತಾನ್ ನಟಿ ಸಾದಿಯಾ ಖಾನ್ ಹಾಗೂ ಆರ್ಯನ್ ನಡುವೆ ಸಮ್ಥಿಂಗ್ ಸಮ್ಥಿಂಗ್ ನಡಿತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ನಟ, ಹೋರಾಟಗಾರ ಚೇತನ್ ಸದಾ ಒಂದಲ್ಲ ಒಂದು ವಿವಾದಗಳಿಗೆ ಗುರಿಯಾಗುತ್ತಲೇ ಇದ್ದಾರೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಗಾಂಧಿ ಮತ್ತು ನೆಹರೂ ಅವರನ್ನು ವಿರೋಧಿಸಬೇಕು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
'ಪಾಕಿಸ್ತಾನ್ ಜಿಂದಾಬಾದ್' ಎಂದು ವಿನೋದಕ್ಕಾಗಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ಥಳಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಇದು ಅಸಂಬದ್ಧ ಮತ್ತು ಅಪಾಯಕಾರಿ ಎಂದು ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ನಡೆಯನ್ನು ಹೋರಾಟಗಾರ, ನಟ ಚೇತನ ಸಮರ್ಥನೆ ಮಾಡಿಕೊಂಡಿದ್ದಾರೆ.
Chetan Ahimsa about Kantara : ಸಿನಿಪ್ರಿಯರ ಮನಗೆದ್ದಿರುವ ಕಾಂತಾರ ಬಾಕ್ಸ್‌ಆಫೀಸ್‌ನಲ್ಲಿಯೂ ಭರ್ಜರಿ ಕೊಳ್ಳೆ ಹೊಡೆಯುತ್ತಿದೆ. ಈ ಮಧ್ಯೆ ತುಳುನಾಡ ಸಂಸ್ಕೃತಿ ಭೂತಕೋಲದ ಬಗ್ಗೆ ನಟ ಚೇತನ್ ಅಹಿಂಸಾ ಹೇಳಿದ ಮಾತು ಎಲ್ಲೆಡೆ ಪರ ವಿರೋಧಕ್ಕೆ ಕಾರಣವಾಗಿದೆ.