ಮುಂಬೈ: ಸಾಮಾಜಿಕ ಮಾಧ್ಯಮಗಳಲ್ಲಿ ಈಗ ನಟಿ ಊರ್ವಶಿ ರೌಟೆಲಾ ಹಾಗೂ ಕ್ರಿಕೆಟಿಗ ರಿಶಬ್ ಪಂತ್ ಸಾಕಷ್ಟು ಸುದ್ದಿಯಲ್ಲಿದ್ದಾರೆ.ಹೌದು, ರಿಶಬ್ ಪಂತ್ ಬಗ್ಗೆ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಇಬ್ಬರ ನಡುವಿನ ಜಗಳ ಬೀದಿ ರಂಪಾಟವಾಗಿದೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ಊರ್ವಶಿ ಆರ್ಪಿ ಎಂದು ಪ್ರಸ್ತಾಪಿಸುತ್ತಾ ರಿಶಬ್ ಪಂತ್ ರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ನಂತರ ಇದಕ್ಕೆ ರಿಶಬ್ ಪಂತ್ ಕೂಡ ತಮ್ಮ ಇನ್ಸ್ಟಾಗ್ರಾಂನಲ್ಲಿ ತಿರುಗೇಟು ನೀಡಿದ್ದರು.
ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ
ಈ ಇಬ್ಬರು 2018 ರಲ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ.ಆದರೆ ಇದಾದ ನಂತರ ಇಬ್ಬರ ನಡುವೆ ಮನಸ್ತಾಪ ಮೂಡಿತ್ತು. ರಿಶಬ್ ಪಂತ್ ನಟಿ ಊರ್ವಶಿಯನ್ನು ವಾಟ್ಸಪ್ ನಲ್ಲಿ ಬ್ಲಾಕ್ ಕೂಡ ಮಾಡಿದ್ದರು ಎನ್ನುವ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದವು.ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಊರ್ವಶಿ ಆರ್ಪಿ ನನಗೆ ಪದೇ ಪದೇ ಕರೆ ಮಾಡಿ ಕಾಟ ಕೊಟ್ಟಿದ್ದರು ಎಂದು ಅವರು ಆರೋಪಿಸಿದ್ದರು.
ಇದಾದ ನಂತರ ರಿಶಬ್ ಪಂತ್ ಪ್ರತಿಕ್ರಿಯಿಸುತ್ತಾ ಇದನ್ನು ಅಲ್ಲಗಳೆದಿದ್ದರು.ಕೇವಲ ಜನಪ್ರಿಯತೆಗಾಗಿ ಸುದ್ದಿಯಲ್ಲಿರಲು ಜನರು ಸಂದರ್ಶನಗಳಲ್ಲಿ ಹೇಗೆ ಸುಳ್ಳು ಹೇಳುತ್ತಾರೆ ಎಂಬುದು ತಮಾಷೆಯಾಗಿದೆ.ಕೆಲವರು ಖ್ಯಾತಿ ಮತ್ತು ಹೆಸರಿಗಾಗಿ ಇದನ್ನು ಮಾಡುತ್ತಾರೆ ಎನ್ನುವುದು ನಿಜಕ್ಕೂ ದುಃಖಕ್ಕರ ಸಂಗತಿ' ಎಂದು ಹೇಳಿದ್ದರು.
ಇದನ್ನೂ ಓದಿ: ಕೋವಿಡ್ ಲಸಿಕೆಯ ಮೂರನೇ ಡೋಸ್ ಪಡೆದವರು 17% ಮಾತ್ರ : ಸಚಿವ ಸುಧಾಕರ್
ಈಗ ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಊರ್ವಶಿ ರೌಟೆಲಾ" ಚೋಟು ಬೈಯ್ಯಾ ಬ್ಯಾಟಿಂಗ್ ಬೌಲಿಂಗ್ ಮಾಡಬೇಕು, ನಿಮ್ಮ ಹಾಗೆ ನಾನು ಚಿಕ್ಕ ಪಾಪು ಅಲ್ಲ ಎಂದು ಅವರು #RPChotuBhaiyya, #DontTakeAdvantageOfASilentGirl ಎಂಬ ಹ್ಯಾಶ್‌ಟ್ಯಾಗ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.