ಚೆನ್ನೈ: ಮಾಸ್ಟರ್ ಮತ್ತು ವರಿಸು ಸಿನಿಮಾದ ಬಳಿಕ ಮೂರನೇ ಸಲ ದಳಪತಿ ವಿಜಯ್ ಜತೆ ಕೈ ಜೋಡಿಸುತ್ತಿದೆ 7 ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್. ಸದ್ಯಕ್ಕೆ ದಳಪತಿ 67 ಎಂದು ತಾತ್ಕಾಲಿಕ ಶೀರ್ಷಿಕೆಯಡಿ ಘೋಷಣೆ ಆಗಿರುವ ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ.
ಇದನ್ನೂ ಓದಿ- ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಸ್ಟಿಕ್ ಇಡ್ಲಿ...!
ಈ ಹಿಂದೆ ವಿಜಯ್ಗೆ ಮಾಸ್ಟರ್ ಸಿನಿಮಾ ನಿರ್ದೇಶನ ಮಾಡಿದ್ದ ಲೋಕೇಶ್ಗೆ ಇದು ವಿಜಯ್ ಜತೆ ಎರಡನೇ ಪ್ರಾಜೆಕ್ಟ್. ಈ ಮೂಲಕ ಮಾಸ್ಟರ್ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಸಿದ್ಧವಾಗಿದೆ. ಈಗಾಗಲೇ ಜ 2ರಿಂದ ಶೂಟಿಂಗ್ ಶುರುವಾಗಿದೆ.ಕೈದಿ, ಮಾಸ್ಟರ್ ಮತ್ತು ಬೀಸ್ಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದ ರಾಕ್ಸ್ಟಾರ್ ಅನಿರುದ್ಧ ರವಿಚಂದ್ರನ್ ದಳಪತಿ 67ಕ್ಕೂ ಸಂಗೀತ ನೀಡಲಿದ್ದು, ನಾಲ್ಕನೇ ಬಾರಿ ವಿಜಯ್ ಜತೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ- ಕ್ಯಾನ್ಸರ್ ರೋಗಿಯನ್ನು ಸಮಾಧಾನಪಡಿಸಲು ತನ್ನ ಕೂದಲನ್ನೇ ಬೋಳಿಸಿಕೊಂಡ ಕ್ಷೌರಿಕ- ವಿಡಿಯೋ ವೈರಲ್
ಇನ್ನುಳಿದಂತೆ ಮನೋಜ್ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್ ರಾಜ್ ಸಂಕಲನ, ಸತೀಸ್ ಕುಮಾರ್ ಕಲೆ, ದಿನೇಶ್ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್ ಕನಗರಾಜ್, ರತ್ನ ಕುಮಾರ್, ಧೀರಜ್ ವೈದ್ಯ, ರಾಮಕುಮಾರ್ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.