ದೀಪಿಕಾ ಪಡುಕೋಣೆ ಅವರ ನೆಚ್ಚಿನ ಆಟಗಾರ ಈ ಕ್ರಿಕೆಟರ್

ನಾನು ಹಲವರನ್ನು ನನ್ನ ಐಡಲ್ ಎಂದು ಹೇಳುತ್ತೇನೆ. ಆದರೆ, ಅವರು ಕೇವಲ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂಬ ಮಾತ್ರಕ್ಕೆ ನಾನು ಅವರನ್ನು ಐಡಲ್ ಎಂದು ಹೇಳುವುದಿಲ್ಲ.

Updated: Dec 12, 2019 , 06:53 PM IST
ದೀಪಿಕಾ ಪಡುಕೋಣೆ ಅವರ ನೆಚ್ಚಿನ ಆಟಗಾರ ಈ ಕ್ರಿಕೆಟರ್

ನವದೆಹಲಿ: ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರದಲ್ಲಿಯೇ ಖ್ಯಾತ ಕ್ರಿಕೆಟರ್ ಕಪಿಲ್ ದೇವ್ ಅವರ ಪತ್ನಿಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪತಿ ಹಾಗೂ ಖ್ಯಾತ ನಟ ರಣವೀರ್ ಸಿಂಗ್ '83' ಚಿತ್ರದಲ್ಲಿ ಕಪಿಲ್ ದೇವ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಸದ್ಯ ದೀಪಿಕಾ ತಮ್ಮ ಫೆವರೇಟ್ ಕ್ರಿಕೆಟರ್ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ನಟಿ ದೀಪಿಕಾ ಪಡುಕೋಣೆ, ತಾವು ಮಾಜಿ ಭಾರತೀಯ-ಅಂತಾರಾಷ್ಟ್ರೀಯ ಆಟಗಾರ ರಾಹುಲ್ ದ್ರಾವಿಡ್ ಅವರ ದೊಡ್ಡ ಫ್ಯಾನ್ ಎಂದು ಹೇಳಿದ್ದಾರೆ. "ರಾಹುಲ್ ದ್ರಾವಿಡ್ ಎಂದಿಗೂ ನನ್ನ ನೆಚ್ಚಿನ ಆಟಗಾರ. ನಾನು ಹಲವರನ್ನು ನನ್ನ ಐಡಲ್ ಎಂದು ಹೇಳುತ್ತೇನೆ. ಆದರೆ, ಅವರು ಕೇವಲ ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂಬ ಮಾತ್ರಕ್ಕೆ ನಾನು ಅವರನ್ನು ಐಡಲ್ ಎಂದು ಹೇಳುವುದಿಲ್ಲ. ಮೈದಾನದ ಹೊರಗೆ ಅವರು ತಮ್ಮನ್ನು ತಾವು ಹೇಗೆ ನಿರೂಪಿಸಿದ್ದಾರೆ ಎಂಬ ಕಾರಣಕ್ಕೆ ಅವರು ನನ್ನ ಐಡಲ್ ಆಗಿದ್ದಾರೆ" ಎಂದು ದೀಪಿಕಾ ಹೇಳಿದ್ದಾರೆ. "ನನ್ನ ಪಾಲಿಗೆ ರಾಹುಲ್ ಓರ್ವ ವ್ಯಕ್ತಿಯಾಗಿ ನನಗೆ ತುಂಬಾ ಇಷ್ಟ, ನಾನು ಅವರನ್ನು ಅನುಕರಿಸಿದ್ದೇನೆ ಹಾಗೂ ಅವರು ಬೆಂಗಳೂರು ಮೂಲದವರೂ ಕೂಡ ಹೌದು" ಎಂದು ಗುಳಿಕೆನ್ನೆಯ ನಟಿ ಹೇಳಿಕೊಂಡಿದ್ದಾರೆ.

ಇದನ್ನು ಹೊರತುಪಡಿಸಿ ಜೀವನದಲ್ಲಿ ಆಟಗಳ ಮಹತ್ವದ ಕುರಿತೂ ಕೂಡ ದೀಪಿಕಾ ಮಾತನಾಡಿದ್ದಾರೆ.

ಇತ್ತೀಚೆಗಷ್ಟೇ ಕ್ರಿಕೆಟ್ ಲೈವ್ ವೇಳೆ ಮಾತನಾಡಿದ್ದ ದೀಪಿಕಾ "ನಾವು ನಮ್ಮ ಶಾರೀರಿಕ ಕ್ಷಮತೆ, ಮಾನಸಿಕ ಸಹನ ಶಕ್ತಿಯನ್ನು ಸದೃಢಗೊಳಿಸಲು ಏನು ಮಾಡುತ್ತೇವೆ ಎಂಬುದು ತುಂಬಾ ಮಹತ್ವದ್ದಾಗಿದೆ. ಹಲವು ಬಾರಿ ನಮ್ಮ ಶರೀರ ನಮ್ಮ ಮೆದುಳಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎನಿಸುತ್ತದೆ. ಹಲವು ಬಾರಿ ನಮ್ಮ ಮೆದುಳು ನಮ್ಮ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎನಿಸುತ್ತದೆ ಹಾಗೂ ಅದರ ಕಾಳಜಿ ವಹಿಸುವುದು ತುಂಬಾ ಅಗತ್ಯವಿದೆ ಎನಿಸುತ್ತದೆ. ಓರ್ವ ಯುವ ಅಥ್ಲೀಟ್ ಈ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ, ಅವರು ಧೈರ್ಯ, ಸಾಹಸ, ದೃಢ ನಿಶ್ಚಯ ಹಾಗೂ ಜೋಶ್ ಮೇಲೂ ಕೂಡ ಗಮನ ಹರಿಸುವುದು ಕೂಡ ಮುಖ್ಯವಾಗಿದೆ" ಎಂದು ದೀಪಿಕಾ ಹೇಳಿದ್ದರು.

'83' ಚಿತ್ರಕ್ಕೂ ಮೊದಲು ದೀಪಿಕಾ 'ಛಪಾಕ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಮಾಲತಿ ಹೆಸರಿನ ಮಹಿಳೆಯ ಭೂಮಿಕೆ ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿಯೂ ಕೂಡ ಹೆಜ್ಜೆ ಇಡುತ್ತಿದ್ದಾರೆ. 'ಛಪಾಕ್' ದೀಪಿಕಾ ಅವರ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಾಗಿದೆ. ಚಿತ್ರದಲ್ಲಿ ವಿಕ್ರಾಂತ್ ಮೈಸಿ ದೀಪಿಕಾ ಎದುರು ನಟಿಸುತ್ತಿದ್ದಾರೆ. ಈ ಚಿತ್ರ ಜನವರಿ 10, 2020ಕ್ಕೆ ಬಿಡುಗಡೆಯಾಗುವ ನಿರೀಕ್ಷೆ ಇದೆ.