ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಯಲ್ಲಿ ಶ್ಲೋಕದ ಸಾರಾ...ಹೇಗಿದೆ ನೋಡಿ...

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬ ಹಾಗೂ ಬಾಲ್ಯದ ನೆನಪುಗಳ ಮೆಲುಕು ಹಾಕಿರುವ ಡಿಸಿಎಂ ಡಿಕೆ ಶಿವಕುಮಾರ್, ಇದರ ಜೊತಗೆ ನಿಜವಾದ ನಾಯಕ ಯಾರು ಎಂಬ ಬಗ್ಗೆ ಸಂಸ್ಕೃತದ ಶ್ಲೋಕ ಹೇಳಿ ಜನಮನ ಸೆಳೆದಿದ್ದಾರೆ. 

Written by - Yashaswini V | Last Updated : Jun 9, 2023, 11:34 AM IST
  • ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಮಾಡಿರುವ ಸಾಧನೆ ಅಪಾರ.
  • ವಿಕೆಂಡ್‌ ವಿತ್ ರಮೇಶ್‌ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಜೀವನದ ಬಗ್ಗೆ ಮೆಲುಕು ಹಾಕಲಾಗಿದೆ.
  • ರಾಜಕೀಯ , ಚುನಾವಣೆ ಹೀಗೆ ತಮ್ಮ ಬ್ಯುಸಿ ಷೆಡ್ಯುಲ್‌ಗಳ ಮಧ್ಯೆ ರಿಲ್ಯಾಕ್ಸ್‌ ಮೂಡ್‌ನಲ್ಲಿ , ಲೈಫ್‌ನ ರಿಕಾಲ್‌ ಮಾಡಲು 5 ನೇ ಸೀಸನ್‌ನ 100 ನೇ ಸಾಧಕರಾಗಿ ಹಾಟ್ ಸೀಟ್ ನಲ್ಲಿ ಡಿ.ಕೆ. ಶಿವಕುಮಾರ್ ಮಿಂಚಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಯಲ್ಲಿ ಶ್ಲೋಕದ ಸಾರಾ...ಹೇಗಿದೆ ನೋಡಿ... title=
DKS In Weekend With Ramesh

DCM DK Shivakumar In Weekend With Ramesh: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ವಾರಾಂತ್ಯದ ಕಾರ್ಯಕ್ರಮವಾದ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದ ಈ ಸೀಸನ್ ನ ಕೊನೆಯ ಸಂಚಿಕೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಕಾಣಿಸಿಕೊಳ್ಳಲಿದ್ದಾರೆ. 

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬ ಹಾಗೂ ಬಾಲ್ಯದ ನೆನಪುಗಳ ಮೆಲುಕು ಹಾಕಿರುವ ಡಿಸಿಎಂ ಡಿಕೆ ಶಿವಕುಮಾರ್, ಇದರ ಜೊತಗೆ ನಿಜವಾದ ನಾಯಕ ಯಾರು ಎಂಬ ಬಗ್ಗೆ ಸಂಸ್ಕೃತದ ಶ್ಲೋಕ ಹೇಳಿ ಜನಮನ ಸೆಳೆದಿದ್ದಾರೆ. 

ಈ ಕುರಿತಂತೆ ಜೀ ಕನ್ನಡ ವಾಹಿನಿಯು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ತುಣುಕನ್ನು ಹಾಕಿದ್ದು ಈ ವಿಡಿಯೋ ಪ್ರೋಮೊ ಸಾವಿರಾರು ವೀಕ್ಷಣೆ ಕಂಡಿದೆ. ಮಾತ್ರವಲ್ಲದೆ, ಇದಕ್ಕೆ ನೂರಾರು ಕಾಮೆಂಟ್ ಗಳು ಬಂದಿದ್ದು ಇದುವರೆಗೂ 270ಕ್ಕೂ ಹೆಚ್ಚು ಜನರು ಇದನ್ನು ಶೇರ್ ಕೂಡ ಮಾಡಿದ್ದಾರೆ. 

ಇದನ್ನೂ ಓದಿ- ಅರ್ಜುನ್​ ಸರ್ಜಾ ವಿರುದ್ಧ ಮೀ ಟೂ ಕೇಸ್‌ಗೆ ಸಾಕ್ಷಿಗಳ ಕೊರತೆ: ಶ್ರುತಿ ಹರಿಹರನ್‌ಗೆ ನೋಟಿಸ್​ ಜಾರಿ ಮಾಡಿದ ಖಾಕಿ

ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜಕೀಯದಲ್ಲಿ ಮಾಡಿರುವ ಸಾಧನೆ ಅಪಾರ. ವಿಕೆಂಡ್‌ ವಿತ್ ರಮೇಶ್‌ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಜೀವನದ ಬಗ್ಗೆ ಮೆಲುಕು ಹಾಕಲಾಗಿದೆ. ರಾಜಕೀಯ , ಚುನಾವಣೆ ಹೀಗೆ ತಮ್ಮ ಬ್ಯುಸಿ ಷೆಡ್ಯುಲ್‌ಗಳ ಮಧ್ಯೆ ರಿಲ್ಯಾಕ್ಸ್‌ ಮೂಡ್‌ನಲ್ಲಿ , ಲೈಫ್‌ನ ರಿಕಾಲ್‌ ಮಾಡಲು 5 ನೇ ಸೀಸನ್‌ನ 100 ನೇ ಸಾಧಕರಾಗಿ ಹಾಟ್ ಸೀಟ್ ನಲ್ಲಿ ಡಿ.ಕೆ. ಶಿವಕುಮಾರ್ ಮಿಂಚಿದ್ದಾರೆ. 

ರಾಜಕೀಯ ವ್ಯಕ್ತಿಗಳೆಂದರೆ ಹಲವಾರು ಜನರು ವಿಭಿನ್ನ ಅಭಿಪ್ರಾಯಗಳನ್ನ ಹೊಂದಿರುತ್ತಾರೆ. ಅದರಲ್ಲಿ ಒಳ್ಳೆದ್ದಕ್ಕಿಂತ ಕೆಟ್ಟದ್ದೇ ಜಾಸ್ತಿ.. ಆದರೆ ಈ ತರಹದ ಅಭಿಪ್ರಾಯಗಳಿಗೆ ಶ್ಲೋಕ ಹೇಳುವುದರ ಮೂಲಕ ಜಲಕ್‌ ನೀಡಿದ್ದಾರೆ ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್. 

ಇದನ್ನೂ ಓದಿ- Abhi Aviva Reception: ಅಭಿ - ಅವಿವಾ ಆರತಕ್ಷತೆಯಲ್ಲಿ ಪಾನಿಪೂರಿ ಸವಿದ ಹಾಲಿ ಸಿಎಂ - ಮಾಜಿ ಸಿಎಂ

ಯಾವುದಪ್ಪಾ ಆ ಶ್ಲೋಕ ಅಂತೀರಾ.. ‘ನಾಭಿಷೇಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೆ ವನೇ. ವಿಕ್ರಮಾರ್ಜಿತರಾಜ್ಯಸ್ಯ ಸ್ವಯಮೇವ ಮೃಗೇಂದ್ರತಾ’ ಎಂದು ಅವರು ಶ್ಲೋಕ ಹೇಳಿದ್ದಾರೆ. ಕೇವಲ ಶ್ಲೋಕ ಹೇಳಿ ಮುಗಿಸದ ಇವರು ಅದರ ಅರ್ಥವನ್ನೂ ವಿವರಿಸಿದ್ದರೆ ನೋಡಿ..

'ಕಾಡಿನಲ್ಲಿ ಬೇಕಾದಷ್ಟು ಪ್ರಾಣಿಗಳಿವೆ. ಸಿಂಹಕ್ಕೆ ಯಾರೂ ಮೃಗರಾಜ ಎಂದು ಹೆಸರಿಟ್ಟಿಲ್ಲ. ಅದಕ್ಕೆ ಯಾರೂ ಪಟ್ಟಾಭಿಷೇಕ ಮಾಡಿಲ್ಲ. ತನ್ನ ಶಕ್ತಿ ಹಾಗೂ ಸಾಮರ್ಥ್ಯದಿಂದ ಅದು ಮೃಗರಾಜ ಎನಿಸಿಕೊಂಡಿದೆ' ಎಂದು ಸಂಸ್ಕೃತದ ಸಾಲಿನ ಅರ್ಥವನ್ನು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News