ನಿರ್ದೇಶನಕ್ಕಿಳಿದ ಕನ್ನಡ ಫಿಲ್ಮಿಂ ಕ್ಲಬ್ ಧೀರಜ್ ಎಂ.ವಿ! ಸಾಥ್ ಕೊಟ್ಟ ಯುವ ನಿರ್ದೇಶಕರ ತಂಡ

Sandalwood: ಸಿನಿಮಾಪ್ರೇಮಿಗಳಿಗಾಗಿ ಕನ್ನಡ ಫಿಲ್ಮಿಂ ಕ್ಲಬ್ 'ಮೀಟ್ಸ್ ಅಂಡ್ ಗ್ರೀಟ್ಸ್' ಎಂಬ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈಗಾಗಲೇ 33ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ.

Written by - Chetana Devarmani | Last Updated : Oct 12, 2024, 03:52 PM IST
ನಿರ್ದೇಶನಕ್ಕಿಳಿದ ಕನ್ನಡ ಫಿಲ್ಮಿಂ ಕ್ಲಬ್ ಧೀರಜ್ ಎಂ.ವಿ! ಸಾಥ್ ಕೊಟ್ಟ ಯುವ ನಿರ್ದೇಶಕರ ತಂಡ title=

ಸಿನಿಮಾಪ್ರೇಮಿಗಳಿಗಾಗಿ ಕನ್ನಡ ಫಿಲ್ಮಿಂ ಕ್ಲಬ್ 'ಮೀಟ್ಸ್ ಅಂಡ್ ಗ್ರೀಟ್ಸ್' ಎಂಬ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಈಗಾಗಲೇ 33ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಕನ್ನಡ ಫಿಲ್ಮಿಂ ಕ್ಲಬ್ ನಡೆದ 'ಮೀಟ್ಸ್ ಅಂಡ್ ಗ್ರೀಟ್ಸ್'ಗೆ ಹೇಮಂತ್ ರಾವ್, ಮಂಸೋರೆ, ಆರ್.ಜೆ. ಪ್ರದೀಪ್, ರೂಪಾ ರಾವ್, ಕಿರಣ್ ರಾಜ್  ಹಲವರು ಸಾಥ್ ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳ ಪ್ರಚಾರಕ್ಕೆ ಕೈ ಜೋಡಿಸಿರುವ ಕನ್ನಡ ಫಿಲ್ಮಿಂ ಕ್ಲಬ್ ಸಂಸ್ಥಾಪಕ ಧೀರಜ್ ಎಂ.ವಿ ಈಗ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ.   

ಪತ್ರಕರ್ತರು ಹಾಗೂ ಹಲವು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿರುವ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ನಿರ್ದೇಶನದ ಪಟುಗಳನ್ನು ಕಲಿತಿರುವ ಧೀರಜ್ ಎಂ.ವಿ ಈಗ ಸ್ವಾತಂತ್ರ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಅವರ ಮೊದಲ ಪ್ರಯತ್ನದ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ವಿದ್ಯಾಪೀಠದಲ್ಲಿರುವ ರಾಯರ ಮಠದಲ್ಲಿ ನೆರವೇರಿದೆ.

ಇದನ್ನೂ ಓದಿ: ಬಿಗ್‌ಬಾಸ್ ನಿಂದ ಹೊರ ಬರುತ್ತಲೇ ಗ್ಲಾಮರ್ ಡೋಸ್ ನೀಡಿದ ಸ್ಪರ್ಧಿ..! ಇದೇಲ್ಲಾ ಬೇಕಿತ್ತಾ ಎಂದ ಫ್ಯಾನ್ಸ್‌...

ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕರಾದ ಮಹಿರಾ ಸಿನಿಮಾ ಖ್ಯಾತಿಯ ಮಹೇಶ್ ಗೌಡ, ಮೇಡ್ ಇನ್ ಬೆಂಗಳೂರು ಸಾರಥಿ ಪ್ರದೀಪ್ ಶಾಸ್ತ್ರಿ¸ ನಿಮಿತ್ತ ಮಾತ್ರಾ ನಿರ್ದೇಶಕ ರೋಷನ್, ರಾವಣರಾಜ್ಯದಲ್ಲಿ ನವದಂಪತಿಗಳು ಚಿತ್ರದ ನಿರ್ದೇಶಕ ರಂಗ, ಡೇರ್‌ಡೆವಿಲ್ ಮುಸ್ತಫಾ ಖ್ಯಾತಿಯ ಶಶಾಂಕ್ ಸೋಘಲ್ ಸೇರಿದಂತೆ ಹಲವಾರು ಯುವ ತಂಡಕ್ಕೆ ಬೆಂಬಲ ಕೊಟ್ಟು ಶುಭ ಹಾರೈಸಿದ್ದಾರೆ. 

ಐಟಿ ಉದ್ಯಮಿಯಾಗಿರುವ ಅರ್ಜುನ್ ಗೌಡ ವಿಎಸ್ ಕೆ ಸಿನಿಮಾಸ್ ಬ್ಯಾನರ್ ನಡಿ ಇನ್ನೂ ಹೆಸರಿಡದ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ವೀರೇಶ್ ಎನ್ ಟಿಎ ಕ್ಯಾಮೆರಾ ಹ್ಯಾಂಡಲ್ ಮಾಡುತ್ತಿದ್ದಾರೆ. ಸದ್ಯ ಮುಹೂರ್ತ ಮುಗಿಸಿ ಚಿತ್ರತಂಡ ಉತ್ತರ ಕರ್ನಾಟದ ಭಾಗದಲ್ಲಿ ಚಿತ್ರೀಕರಣ ಶುರು ಮಾಡಿದೆ. ಶೀಘ್ರದಲ್ಲೇ ಉಳಿದ ತಾರಾಬಳಗ ಹಾಗೂ ತಾಂತ್ರಿಗ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

ಇದನ್ನೂ ಓದಿ: ದಸರಾ ಹಬ್ಬದ ಪ್ರಯುಕ್ತ ಚಿರು 'ವಿಶ್ವಂಭರ' ಟೀಸರ್ ರಿಲೀಸ್‌..! ದುರ್ಗೆಯ ಆರಾಧನೆಯಂದು.. ಹನುಮ ದರ್ಶನ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News