ಸಿಲ್ಕ್ ಸ್ಮಿತಾಗೆ ಮಗ ಇದ್ದಾನಾ? ಡೆತ್‌ ನೋಟ್‌ನಲ್ಲಿದೆಯಂತೆ ಆತನ ಹೆಸರು..

silk smitha: ಬೋಲ್ಡ್ ಸ್ಟಾರ್ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಪತ್ರದಲ್ಲಿ ಬರೆದಿರುವ ವಿಷಯಗಳು ಸಂಚಲನ ಮೂಡಿಸುತ್ತಿವೆ. ಅದರಂತೆ ಇದೀಗ ಆಕೆಗೆ ಮಗನಿದ್ದಾನೆ ಎನ್ನುವ ಸುದಿಯೊಂದು ಬಾರೀ ಸದ್ದು ಮಾಡುತ್ತಿದೆ.. 

Written by - Savita M B | Last Updated : Dec 2, 2024, 09:16 PM IST
  • ಸಿಲ್ಕ್ ಸ್ಮಿತಾ ಈ ಪೀಳಿಗೆಗೆ ತಿಳಿದಿಲ್ಲದಿರಬಹುದು, ಆದರೆ ಈಗ 40 ವರ್ಷ ವಯಸ್ಸಿನ ಎಲ್ಲರಿಗೂ ಸಿಲ್ಕ್ ಸ್ಮಿತಾ ಏನೆಂದು ತಿಳಿದಿದೆ.
  • ಆಕೆ ಕೊಡುವ ಕಿಕ್ ಸಿನಿಮಾವನ್ನು ಇಷ್ಟಪಡುವವರು ಅಪಾರ ಸಂಖ್ಯೆಯಲ್ಲಿದ್ದರು..
ಸಿಲ್ಕ್ ಸ್ಮಿತಾಗೆ ಮಗ ಇದ್ದಾನಾ? ಡೆತ್‌ ನೋಟ್‌ನಲ್ಲಿದೆಯಂತೆ ಆತನ ಹೆಸರು..  title=

silk smitha birth anniversary: ಸಿಲ್ಕ್ ಸ್ಮಿತಾ ಈ ಪೀಳಿಗೆಗೆ ತಿಳಿದಿಲ್ಲದಿರಬಹುದು, ಆದರೆ ಈಗ 40 ವರ್ಷ ವಯಸ್ಸಿನ ಎಲ್ಲರಿಗೂ ಸಿಲ್ಕ್ ಸ್ಮಿತಾ ಏನೆಂದು ತಿಳಿದಿದೆ. ಆಕೆ ಕೊಡುವ ಕಿಕ್ ಸಿನಿಮಾವನ್ನು ಇಷ್ಟಪಡುವವರು ಅಪಾರ ಸಂಖ್ಯೆಯಲ್ಲಿದ್ದರು... ಸಿಲ್ಕ್ ಸ್ಮಿತಾ ಬೋಲ್ಡ್ ಪಾತ್ರಗಳು ಮತ್ತು ವೇಶ್ಯೆಯಂತಹ ಪಾತ್ರಗಳ ಮೂಲಕ ದಕ್ಷಿಣ ಚಿತ್ರರಂಗವನ್ನು ಬೆಚ್ಚಿಬೀಳಿಸಿದರು. ಸ್ಟಾರ್ ಹೀರೋಗಳಿಗೂ ಮೀರಿದ ಕ್ರೇಜ್‌ನಿಂದ ಮಿಂಚಿದ್ದ ಈಕೆ ಚಿಕ್ಕ ವಯಸ್ಸಿನಲ್ಲೇ ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದರು.. ಆದರೆ ಆಕೆಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. 

ಸ್ಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆದರೆ ಸಾಯುವ ಮುನ್ನ ನಟಿ ಆತ್ಮಹತ್ಯೆ ಪತ್ರ ಬರೆದಿದ್ದಾಳೆ. ಅದರಲ್ಲಿ ತಮ್ಮ ನೋವು, ಸಂಕಟ ಮತ್ತು ತಾನು ಮೋಸ ಹೋಗಿರುವುದನ್ನು ಬಹಿರಂಗಪಡಿಸಿದ್ದಾಳೆ. ಎಲ್ಲರೂ ತನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ನಟಿ ಹೇಳಿದ್ದಾಳೆ. ಆದರೆ ಬಾಬು ಮಾತ್ರ ಯಾವುದೇ ಸ್ವಾರ್ಥ ಇಲ್ಲದ ವ್ಯಕ್ತಿ ಎಂದು ಸಿಲ್ಮ್ ಸ್ಮಿತಾ ಬರೆದಿದ್ದಾರೆ... ಹಾಗಾದ್ರೆ ಆ ಬಾಬು ಯಾರು? ಸಿಲ್ಕ್ ಸ್ಮಿತಾ ಸೂಸೈಡ್ ನೋಟ್ ನಲ್ಲಿ ನಿಜವಾಗಿ ಯಾರಬಗ್ಗೆ ಬರೆದಿದ್ದಾರೆ.? 

ಇದನ್ನೂ ಓದಿ-ನಟಿ ಶೋಭಿತಾ ಶಿವಣ್ಣ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌.. ಪೋಲಿಸರಿಗೆ ಸಿಕ್ಕ ಡೆತ್‌ ನೋಟ್‌ನಲ್ಲಿ ಏನಿತ್ತು ಗೊತ್ತಾ..?

"ದೇವರೇ, ನನ್ನ 7ನೇ ವರ್ಷದಿಂದ ನಾನು ತುಂಬಾ ಕಷ್ಟಪಟ್ಟೆ. ನನಗೆ ನನ್ನವರು ಯಾರೂ ಇಲ್ಲ. ನಾನು ನಂಬಿದವರು ನನಗೆ ದ್ರೋಹ ಮಾಡಿದರು. ಬಾಬು ಬಿಟ್ಟರೆ ಯಾರೂ ನನ್ನನ್ನು ಪ್ರೀತಿಸುವುದಿಲ್ಲ. ಬಾಬು ಬಿಟ್ಟರೆ ಎಲ್ಲರೂ ನನಗೆ ಕಷ್ಟವನ್ನೇ ನೀಡಿದರು.. ನನ್ನ ಹಣ ತಿಂದವರೇ ನನಗೆ ನೆಮ್ಮದಿಯನ್ನೂ ಕಿತ್ತುಕೊಂಡರು.. ನಾನು ಎಲ್ಲರಿಗೂ ಒಳ್ಳೆಯದನ್ನು ಮಾಡಿದ್ದೇನೆ. ಆದರೆ ನನಗೆ ಕೆಟ್ಟದು ಆಗಿದೆ... ನನ್ನ ಆಸ್ತಿಯಲ್ಲಿರುವ ಎಲ್ಲವನ್ನೂ ಬಾಬು ಕುಟುಂಬಕ್ಕೆ ಮತ್ತು ನನ್ನ ಕುಟುಂಬಕ್ಕೆ ಹಂಚಬೇಕು. ನಾನು ಒಬ್ಬ ವ್ಯಕ್ತಿಯ ಮೇಲೆ ನನ್ನ ಎಲ್ಲಾ ಭರವಸೆಗಳನ್ನು ಇಟ್ಟಿದ್ದೇ.. ಆದರೆ ಅವನು ನನಗೆ ಮೋಸ ಮಾಡಿದನು. ದೇವರಿದ್ದರೆ ಆತನೇ ನೋಡಿಕೊಳ್ಳುತ್ತಾನೆ. ದಿನನಿತ್ಯದ ಹಿಂಸೆಯನ್ನು ಸಹಿಸಲಾಗುತ್ತಿಲ್ಲ. ರಾಮು.. ರಾಧಾಕೃಷ್ಣನ್ ನನ್ನನ್ನು ತುಂಬಾ ಕೆರಳಿಸಿದರು. ನಾನು ಅವರಿಗೆ ಬಹಳಷ್ಟು ಒಳ್ಳೆಯದನ್ನು ಮಾಡಿದ್ದೇನೆ. ಆದರೆ ಅವರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ... 5 ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ನನಗೆ ಜೀವನ ಕೊಡುವುದಾಗಿ ಹೇಳಿದ್ದ. ಈಗ ಇಲ್ಲ ಎನ್ನುತ್ತಿದ್ದಾನೆ.. ಬಾಬು ಬಿಟ್ಟರೆ ನನಗೆ ಕಷ್ಟ ಕೊಡದವರಿಲ್ಲ.. ಇದನ್ನು ಬರೆಯಲು ನಾನು ಎಷ್ಟು ನರಕಯಾತನೆ ಅನುಭವಿಸಿದೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಅನೇಕ ಚಿತ್ರಹಿಂಸೆಗಳಿಗೆ, ಸಾವು ಶಾಶ್ವತವಾದ ಸುಖವೆನಿಸುತ್ತದೆ" ಎಂದು ಡೆತ್‌ ನೋಟ್‌ನಲ್ಲಿ ಬರೆಯಲಾಗಿದೆ.. ಆದರೆ ಇಂಡಸ್ಟ್ರಿಯಲ್ಲಿ ಸ್ಟಾರ್ ಡಮ್ ಗಳಿಸಿದ್ದ ಸಿಲ್ಕ್ ಸ್ಮಿತಾ ತೀರಿಕೊಂಡಾಗ ಇಂಡಸ್ಟ್ರಿ ಯಿಂದ ಯಾರು ಆಕೆಯ ಅಂತ್ಯಕ್ರಿಯೆಗೆ ಯಾರೂ ಹೋಗಿರಲಿಲ್ಲ.. ನಟ ಅರ್ಜುನ್ ಸರ್ಜಾ ಮಾತ್ರ ಹೋಗಿದ್ದರಂತೆ... ಹೀಗಾಗಿ ಆಕೆಯನ್ನು ಅನಾಥ ಶವದಂತೆ ಸುಡಲಾಯಿತು ಎಂದು ಹೇಳಲಾಗಿದೆ.. 

ಇದನ್ನೂ ಓದಿ-ನಾವಿಬ್ರು ಅಣ್ಣ-ತಂಗಿ ಅಂತ ಊರೆಲ್ಲಾ ಹೇಳಿಕೊಂಡು ಬಂದ ಈ ನಟಿ ಕೊನೆಗೆ ಆತನಿಂದಲೇ ಮದುವೆಗೆ ಮುನ್ನ ಗರ್ಭಿಣಿಯಾದ್ಳು... ಇದೆಂಥಾ ವಿಧಿಯಾಟ!!

ಆದರೆ ಸಿಲ್ಕ್ ಸ್ಮಿತಾ ಅವರು ತಮ್ಮ ಸೂಸೈಡ್ ನೋಟ್ ನಲ್ಲಿ ಬಾಬು ಎಂದು ಉಲ್ಲೇಖಿಸಿದ್ದಾರೆ. ಹಾಗಾದರೇ ಆ ಬಾಬು ಯಾರು ಎಂಬುದು ಕುತೂಹಲಕಾರಿಯಾದ ವಿಷಯವಾಗಿದೆ.. ಸಿಲ್ಕ್‌ ಸ್ಮಿತಾಗೆ ಮಗನಿದ್ದಾನೆಯೇ? ಅಥವಾ ಆಕೆ ಯಾರನ್ನಾದರೂ ದತ್ತು ಪಡೆದು ಬೆಳೆಸಿದ್ದಾಳೆಯೇ ಎನ್ನುವುದು ಸದ್ಯದ ಚರ್ಚೆಯಾಗಿದೆ.. 

ಸಿಲ್ಕ್ ಸ್ಮಿತ್ ಸೆಪ್ಟೆಂಬರ್ 22, 1996 ರಂದು ಈ ಆತ್ಮಹತ್ಯೆ ಪತ್ರ ಬರೆದಿದ್ದು, 23ರಂದು ಆಕೆಯ ಸಾವಿನ ಸುದ್ದಿ ಹೊರಬಿದ್ದಿತ್ತು. ಅವಳು ಜೀವನದಲ್ಲಿ ಎಷ್ಟು ಖಿನ್ನತೆಗೆ ಒಳಗಾಗಿದ್ದಳು ಎಂಬುದನ್ನು ಈ ಪತ್ರ ತೋರಿಸುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News