ನರೇಂದ್ರ ಮೋದಿ ಕುರಿತ ಚಲನಚಿತ್ರಕ್ಕೆ ನೀತಿ ಸಂಹಿತೆ ಅಡ್ಡಿ!

ಎಪ್ರಿಲ್ 12 ರಂದು ಬಿಡುಗಡೆಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಕುರಿತ ಚಲನಚಿತ್ರಕ್ಕೆ ಈಗ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಈಗ  ಎ ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

Last Updated : Mar 19, 2019, 04:32 PM IST
ನರೇಂದ್ರ ಮೋದಿ ಕುರಿತ ಚಲನಚಿತ್ರಕ್ಕೆ ನೀತಿ ಸಂಹಿತೆ ಅಡ್ಡಿ!  title=

ನವದೆಹಲಿ: ಎಪ್ರಿಲ್ 12 ರಂದು ಬಿಡುಗಡೆಯಾಗಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಕುರಿತ ಚಲನಚಿತ್ರಕ್ಕೆ ಈಗ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಈ ಹಿನ್ನಲೆಯಲ್ಲಿ ಈಗ  ಎ ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

ತಮಿಳು,ತೆಲುಗು ,ಹಿಂದಿಯಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಚಿತ್ರ ನಿರ್ಮಾಪಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ "ಸಾರ್ವಜನಿಕರ ಒತ್ತಾಸೆಯ ಮೇರೆಗೆ ಈಗ ಈ ಚಿತ್ರವನ್ನು ಒಂದು ವಾರ ಮೊದಲು ಬಿಡುಗಡೆ ಮಾಡುತ್ತಿದ್ದೇವೆ.ಈ ಚಿತ್ರದ ಕುರಿತಾಗಿ ಜನರಲ್ಲಿ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಇದೆ ಆದ್ದರಿಂದ ನಾವು ಅವರನ್ನು ಕಾಯಿಸಲು ಇಚ್ಚಿಸುವುದಿಲ್ಲ.ಈ ಚಲನಚಿತ್ರವು 130 ಕೋಟಿ ಜನರ ಕಥೆಯಾಗಿದ್ದು, ಆದ್ದರಿಂದ ಅವರಿಗೆ ತೋರಿಸಲು ನಾವು ತಡಮಾಡುವುದಿಲ್ಲ ಎಂದು ಹೇಳಿದ್ದಾರೆ.

ಈ ಚಿತ್ರವು ಪ್ರಧಾನಿ ಮೋದಿಯವರ ಜೀವನ ಕುರಿತು ನಿರ್ಮಿಸಲಾಗಿದ್ದು  ಒಬ್ಬ ಸಾಮಾನ್ಯ ಹಿನ್ನಲೆಯಿಂದ ಬಂದು ದೇಶದ ಪ್ರಧಾನಿಯಾಗುವವರೆಗಿನ ಪ್ರಯಾಣವನ್ನು ಈ ಚಿತ್ರ ಹೇಳಲಿದೆ.  ಈ ಹಿಂದೆ ಚಿತ್ರದ ನಿರ್ಮಾಪಕರು 23 ಭಾಷೆಗಳಲ್ಲಿ ಚಿತ್ರದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದ್ದರು.

ವಿವೇಕ್ ಒಬೆರಾಯ್ ಅವರು  ಪ್ರಧಾನಿ ಮೋದಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ತಾರಾಗಣದಲ್ಲಿ ಬೊಮನ್ ಇರಾನಿ ,ರಾಜೇಂದ್ರ ಗುಪ್ತಾ ಯತಿನ್ ಕಾರ್ಯೇಕರ್ ಪ್ರಶಾಂತ್ ನಾರಾಯಣ,ಜರಿನಾ ವಾಹಬ್ ಮುಂತಾದವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Trending News