Tyler Christopher: ಖ್ಯಾತ ಹಾಲಿವುಡ್‌ ನಟ ಟೈಲರ್ ಕ್ರಿಸ್ಟೋಫರ್ ನಿಧನ

Tyler Christopher: ಹಾಲಿವುಡ್ ನಟ ಟೈಲರ್ ಕ್ರಿಸ್ಟೋಫರ್ ಹೃದಯಾಘಾತದಿಂದ ಸಾವಿನ್ನಪ್ಪಿದ್ದಾರೆ. ಈ ಸುದ್ದಿಯನ್ನು ಅವರ ಸಹ ನಟ ಖಚಿತಪಡಿಸಿದ್ದಾರೆ. 

Written by - Chetana Devarmani | Last Updated : Nov 1, 2023, 01:40 PM IST
  • ಹಾಲಿವುಡ್ ನಟ ಟೈಲರ್ ಕ್ರಿಸ್ಟೋಫರ್
  • ನಟ ಟೈಲರ್ ಕ್ರಿಸ್ಟೋಫರ್ ನಿಧನ
  • 'ಜನರಲ್ ಹಾಸ್ಪಿಟಲ್' ಮೂಲಕ ಖ್ಯಾತಿ ಪಡೆದ ನಟ
Tyler Christopher: ಖ್ಯಾತ ಹಾಲಿವುಡ್‌ ನಟ ಟೈಲರ್ ಕ್ರಿಸ್ಟೋಫರ್ ನಿಧನ  title=

Tyler Christopher Passed Away : ಹಾಲಿವುಡ್ ನಟ ಟೈಲರ್ ಕ್ರಿಸ್ಟೋಫರ್ ನಿಧನರಾಗಿದ್ದಾರೆ. 'ಜನರಲ್ ಹಾಸ್ಪಿಟಲ್' ಮತ್ತು 'ಡೇಸ್ ಆಫ್ ಅವರ್ ಲೈವ್ಸ್'ನಲ್ಲಿ ಅವರ ಪಾತ್ರಗಳು ಪ್ರಸಿದ್ಧವಾಗಿವೆ. 'ಜಗ್ರಾಲ್ ಹಾಸ್ಪಿಟಲ್'ನಲ್ಲಿ ಅವರ ಸಹನಟ ಮೌರಿಸ್ ಬೆನಾರ್ಡ್ ಅವರ ಸಾವಿನ ಸುದ್ದಿಯನ್ನು  ಖಚಿತ ಪಡಿಸಿದ್ದಾರೆ. 50 ವರ್ಷದ ಟೈಲರ್ ಕ್ರಿಸ್ಟೋಫರ್ ಹೃದಯಾಘಾತದಿಂದ ನಿಧನರಾದರು.

ಟೈಲರ್ ಸಾವಿನ ಸುದ್ದಿಯನ್ನು ಮಾರಿಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, "ಟೈಲರ್ ಕ್ರಿಸ್ಟೋಫರ್ ಅವರ ನಿಧನದ ಸುದ್ದಿಯನ್ನು ಹಂಚಿಕೊಳ್ಳಲು ನಮಗೆ ತುಂಬಾ ದುಃಖವಾಗಿದೆ. ಟೈಲರ್ ಹೃದಯಾಘಾತದಿಂದ ಅವರ ಮನೆಯಲ್ಲಿ ನಿಧನರಾದರು." ಎಂದು ಪೋಸ್ಟ್‌ ಮಾಡಿದ್ದಾರೆ. 

ಇದನ್ನೂ ಓದಿ : ಒಲವೇ ಒಲವೇ.. ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌-Bʼ ಮೆಲೋಡಿ ಸಾಂಗ್‌ ಔಟ್..! 

ಟೈಲರ್ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮಾರಿಸ್ ಅವರ ಪೋಸ್ಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದಾರೆ.  

1969 ರಿಂದ 2016 ರವರೆಗೆ, ಟೈಲರ್ ಕ್ರಿಸ್ಟೋಫರ್ ಅವರು 'ಜನರಲ್ ಹಾಸ್ಪಿಟಲ್' ನಲ್ಲಿ ನಿಕೋಲಸ್ ಕ್ಯಾಸ್ಡಿನ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅಲ್ಲದೆ, 'ಡೇಸ್ ಆಫ್ ಅವರ್ ಲೈವ್ಸ್ ಫ್ರಮ್' ನಲ್ಲಿ ಅವರು ನಿರ್ವಹಿಸಿದ ಡಿಮೆರಾ ಪಾತ್ರವೂ ಪ್ರಸಿದ್ಧವಾಗಿತ್ತು. ಈ ಪಾತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಟೈಲರ್ ಕ್ರಿಸ್ಟೋಫರ್ ಹಾಲಿವುಡ್ ನ ಜನಪ್ರಿಯ ನಟ.  

ಇದನ್ನೂ ಓದಿ : ಬೇಕಂತಲೇ ನಾಯಿ ಕಚ್ಚಿಸಿದ್ರು, ಗಾಯವಾದ್ರು ನೋಡುತ್ತ ನಿಂತ್ರು : ದರ್ಶನ್​ ವಿರುದ್ಧ ಮಹಿಳೆ ಆರೋಪ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News