ಒಂದು ಕಾಲದಲ್ಲಿ ಫ್ಲಾಪ್ ನಟಿ ಎನಿಸಿಕೊಂಡಿದ್ದ ಈ ಸೌತ್‌ ಚೆಲುವೆ.. ಒಂದೇ ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್!

 South Actress: ಮೊದಮೊದಲು ಏರಿಳಿತಗಳನ್ನು ಎದುರಿಸಿ.. ಹಂತ ಹಂತವಾಗಿ ಬೆಳೆದು ತಮಗೊಂದು ವಿಶೇಷ ಸ್ಥಾನ ಕಲ್ಪಿಸಿಕೊಂಡ ನಟಿ ಇವರು.. ಯಾರೆಂದು ಇದೀಗ ತಿಳಿಯೋಣ ಬನ್ನಿ..    

Written by - Savita M B | Last Updated : Jul 13, 2024, 01:33 PM IST
  • ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವುದು ಅಷ್ಟು ಸುಲಭವಲ್ಲ
  • ಅಗ್ರಸ್ಥಾನಕ್ಕೇರದವರು ಸೋಲಿನ ರುಚಿ ಕಂಡವರು
ಒಂದು ಕಾಲದಲ್ಲಿ ಫ್ಲಾಪ್ ನಟಿ ಎನಿಸಿಕೊಂಡಿದ್ದ ಈ ಸೌತ್‌ ಚೆಲುವೆ.. ಒಂದೇ ಸಿನಿಮಾದಿಂದ ರಾತ್ರೋರಾತ್ರಿ ಸ್ಟಾರ್! title=

Ramya Krishnan Life Story: ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವುದು ಅಷ್ಟು ಸುಲಭವಲ್ಲ.. ಯಾವತ್ತೂ ಅಗ್ರಸ್ಥಾನಕ್ಕೇರದವರು ಸೋಲಿನ ರುಚಿ ಕಂಡವರು... ಅದರಲ್ಲೂ ಚಿತ್ರರಂಗದಲ್ಲಿ ನಟರಿಗೆ ಮನ್ನಣೆ ಸಿಗುವುದು, ಒಳ್ಳೆಯ ಅವಕಾಶಗಳು ಸಿಗುವುದು ವಿರಳ.. ಆರಂಭಿಕ ಹಂತದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಸಾಬೀತುಪಡಿಸಲು ಶ್ರಮಿಸಬೇಕು.

ಮೊದಮೊದಲು ಹಿನ್ನಡೆ ಎದುರಿಸಿದರೂ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಹಂತ ಹಂತವಾಗಿ ಮೇಲೇರುತ್ತಾ ತಮಗೊಂದು ವಿಶೇಷ ಸ್ಥಾನ ಕಲ್ಪಿಸುವ ನಟರು ಕಡಿಮೆ.. ಆದರೆ ಈ ವಿಚಾರದಲ್ಲಿ 52 ವರ್ಷದ ನಟಿ ರಮ್ಯಾ ಕೃಷ್ಣನ್‌ ಎಲ್ಲರಿಗೂ ಮಾದರಿ.. 

ಇದನ್ನೂ ಓದಿ-160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಕಂಡಿತ

ಇಲ್ಲಿಯವರೆಗೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಹುಬಲಿ ಚಿತ್ರದ ಮೂಲಕ ಆಕೆಯ ಹೆಸರು ದೇಶಾದ್ಯಂತ ಪಸರಿಸಿತು.. ಆದರೆ ಒಮ್ಮೆ ಆಕೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸತತವಾಗಿ ಸೋತವು. ಅಂತಹ ಸಂದರ್ಭಗಳನ್ನು ಮೆಟ್ಟಿ ನಿಂತು ಇಂದು ಅಷ್ಟೊಂದು ಖ್ಯಾತಿ, ಹೆಸರು ಗಳಿಸಿರುವ ರಮ್ಯಾ ಕೃಷ್ಣ ಅವರ ಜೀವನದ ವೈಶಿಷ್ಟ್ಯಗಳನ್ನು ಈಗ ನೋಡೋಣ.. 

ರಮ್ಯಾ ಕೃಷ್ಣ ಕೂಡ ಹಿಂದಿ ಚಿತ್ರಗಳಲ್ಲಿ ಗುರುತಿಸಿಕೊಳ್ಳದ ದಿನಗಳನ್ನು ಅನುಭವಿಸಿದ್ದಾರೆ.. ತಮಿಳಿನಲ್ಲಿ ಅವರ ಚಿತ್ರಗಳು ಕೂಡ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಅವರ ಚಿತ್ರಗಳು ಸತತವಾಗಿ ಸೋತಿದ್ದರಿಂದ ಫ್ಲಾಪ್ ನಟಿ ಎಂಬ ಹೆಸರಿನಿಂದ ಜನಪ್ರಿಯವಾಗಿದ್ದ ಸಮಯವಿತ್ತು. ಇತ್ತೀಚೆಗಷ್ಟೇ ರಜನೀಕಾಂತ್ ಜೊತೆ ಜೈಲರ್ ಚಿತ್ರದಲ್ಲಿ ರಮ್ಯಾಕೃಷ್ಣ ನಟಿಸಿದ್ದರು.. ಇದೀಗ ಆಕೆಯ ಕೈಯಲ್ಲಿ ಸಾಕಷ್ಟು ದೊಡ್ಡ ಪ್ರಾಜೆಕ್ಟ್‌ಗಳಿವೆ.. ಸದ್ಯ ಅವರು ದಕ್ಷಿಣದ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರು..

ಇದನ್ನೂ ಓದಿ-ಐ ಹ್ಯಾಮ್ ಕಮಿಂಗ್ ಎಂದ 'ಕರುನಾಡ ಕಿಂಗ್'...ಶಿವಣ್ಣನ ಜನ್ಮದಿನಕ್ಕೆ 131ನೇ ಸಿನಿಮಾದ ಮೊದಲ ಝಲಕ್ ರಿಲೀಸ್

ರಮ್ಯಾ ಕೃಷ್ಣ ಇತ್ತೀಚೆಗೆ ಸಂದರ್ಶನದಲಿ ಭಾಗವಹಿಸಿ 'ನನ್ನ ಸಿನಿಮಾಗಳ ಸೋಲು ನನ್ನ ತಾಯಿಗೂ ತೊಂದರೆ ತಂದಿದೆ. ಒಮ್ಮೆ ನನ್ನ ಸಿನಿಮಾ ನೋಡಿದ ಮೇಲೆ ನೀನು ಹೇಗೆ ಬದುಕುತ್ತೀಯ ಎಂದು ಕೇಳಿದಳು. ಆಗ ನನ್ನ ತಾಯಿಯೇ ನನಗೆ ದೊಡ್ಡ ಧೈರ್ಯ' ಎಂದಿದ್ದಾರೆ.. 

ಇನ್ನು ಖಳನಾಯಕ ಸಂಜಯ್ ದತ್ ಜೊತೆ ನಟಿಸಿದ್ದ ರಮ್ಯಾ ಕೃಷ್ಣ ಈಗ ಸೌತ್ ನಲ್ಲಿ ಹೆಸರು ಮಾಡಿದ್ದಾರೆ. ರಾಜಮೌಳಿ ಅವರ ಬಾಹುಬಲಿ ಚಿತ್ರದಲ್ಲಿ ರಾಜಮಾತೆ ಶಿವಗಾಮಿ ದೇವಿ ಪಾತ್ರದಲ್ಲಿ ಅವರ ಅಭಿನಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸದ್ಯ ರಮ್ಯಾಕೃಷ್ಣ ಕೈಯಲ್ಲಿ ಹಲವು ದೊಡ್ಡ ಚಿತ್ರಗಳಿವೆ. ತುಂಬಾ ಬ್ಯುಸಿಯಾಗಿರುವ ಈ ನಟಿ ಸಿನಿಮಾವೊಂದಕ್ಕೆ ಸುಮಾರು ರೂ.3ರಿಂದ ರೂ.4 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News