ಸೂಪರ್ ಸ್ಟಾರ್ ಮಮ್ಮುಟ್ಟಿ ಸಿನಿಮಾಗಾಗಿ ಮದುವೆ ದಿನಾಂಕವನ್ನೇ ಬದಲಿಸಿದ ಅಭಿಮಾನಿ...!

ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಅಪ್ಪಟ ಅಭಿಮಾನಿಗಳಾದ ಮೇಮನ್ ಸುರೇಶ್, ಅವರ ಮುಂಬರುವ ಚಿತ್ರ ಮಾಮಂಗಮ್  ಚಿತ್ರವನ್ನು ನೋಡುವುದಕ್ಕೆ ಮದುವೆಯ ದಿನಾಂಕವನ್ನೇ ಬದಲಿಸಿಕೊಂಡಿದ್ದಾರೆ.

Updated: Nov 7, 2019 , 07:24 PM IST
ಸೂಪರ್ ಸ್ಟಾರ್ ಮಮ್ಮುಟ್ಟಿ ಸಿನಿಮಾಗಾಗಿ ಮದುವೆ ದಿನಾಂಕವನ್ನೇ ಬದಲಿಸಿದ ಅಭಿಮಾನಿ...!

ನವದೆಹಲಿ: ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಅಪ್ಪಟ ಅಭಿಮಾನಿಗಳಾದ ಮೇಮನ್ ಸುರೇಶ್, ಅವರ ಮುಂಬರುವ ಚಿತ್ರ ಮಾಮಂಗಮ್  ಚಿತ್ರವನ್ನು ನೋಡುವುದಕ್ಕೆ ಮದುವೆಯ ದಿನಾಂಕವನ್ನೇ ಬದಲಿಸಿಕೊಂಡಿದ್ದಾರೆ.

ನಿಗದಿತ ದಿನಾಂಕದ ಪ್ರಕಾರ ಮೇಮನ್ ನವೆಂಬರ್ 21 ರಂದು ಕೇರಳದ ಉತ್ತರ ಪರಾವೂರಿನಲ್ಲಿ ವಿವಾಹವಾಗಬೇಕಿತ್ತು. ತನ್ನ ನೆಚ್ಚಿನ ನಟನ ಚಲನಚಿತ್ರವು ಅದೇ ದಿನ ಬಿಡುಗಡೆಯಾಗುವ ಸುದ್ದಿಯನ್ನು ತಿಳಿದು, ಮೇಮನ್ ತನ್ನ ಮದುವೆ ಕಾರ್ಯವನ್ನು ಚಿತ್ರದ ಬಿಡುಗಡೆಗೂ ಮೊದಲೇ ಮುಗಿಸಿದ್ದಾನೆ.

ಮೇಮನ್ ಅಕ್ಟೋಬರ್ 30 ರಂದು ವಿವಾಹವಾಗಿದ್ದು, ಆದ್ದರಿಂದ ಅವರು ಈಗ ನೂತನವಾಗಿ ಮದುವೆಯಾದ ಹೆಂಡತಿ ಜೊತೆ ಮೊದಲ ದಿನವೇ ತಮ್ಮ ನೆಚ್ಚಿನ ನಟನ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ ಎನ್ನಲಾಗಿದೆ.

ಈಗ ಈ ಚಿತ್ರ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಾವ್ಯಾ ಫಿಲ್ಮ್ ಕಂಪನಿಯ "ಮಾಮಂಗಂ" ಅನ್ನು ಎಂ ಪದ್ಮಕುಮಾರ್ ನಿರ್ದೇಶಿಸಿದ್ದಾರೆ ಮತ್ತು ವೇಣು ಕುನ್ನಪ್ಪಿಲ್ಲಿ ನಿರ್ಮಿಸಿದ್ದಾರೆ.