Sandalwood actress : ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ ಹಲವಾರು ಸ್ಟಾರ್ ನಟಿಯರು ಇಂದು ಕಾರಣಾಂತರದಿಂದ ಕನ್ನಡ ಸಿನಿಲೋಕದಿಂದ ಮರೆಯಾಗಿದ್ದಾರೆ. ಈ ಪೈಕಿ ಈ ಚೆಲುವೆಯೂ ಸಹ ಒಬ್ಬಳು. 2000ರ ದಶಕದಲ್ಲಿ ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿದ್ದ ಸುಂದರಿ, ಇದೀಗ ದೂರ ಉಳಿದಿದ್ದಾರೆ.. ಯಾರು ಈಕೆ..? ಬನ್ನಿ ನೋಡೋಣ..
ಬಹುಷ್ಟು ಅಡೆತಡೆಗಳನ್ನು ಎದುರಿಸಿ ಕೊನೆಗೂ ಬಿಡುಗಡೆಯ ಸನ್ನದ್ಧತೆಯಲ್ಲಿರುವ ಸಂಜು ವೆಡ್ಸ್ ಗೀತಾ-2, ಮೊದಲ ಭಾಗದ ಮೆಲುಕು ಹೊತ್ತಿರುವ ಈ ಸಿನಿಮಾ, ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಪ್ರತಿಭೆಗಳ ತಂಡವೊಂದು ಲವ್ 2 ಲಸ್ಸಿ ಎಂಬ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಹೊಸಬರ ಪ್ರಯತ್ನಕ್ಕೆ ಶಿವಣ್ಣ ಹಾಗೂ ಗೀತಕ್ಕ ಸಾಥ್ ಕೊಟ್ಟಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಕನ್ನಡ ಭಾಷೆಯ ಕುರಿತು ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆಗೆ ಶಿವರಾಜ್ ಕುಮಾರ್ ಅವರ ಮೊದಲ ಪ್ರತಿಕ್ರಿಯೆ. ಜೀ ಕನ್ನಡ ನ್ಯೂಸ್ ಆಯೋಜಿಸಿದ್ದ ರಿಯಲ್ ಸ್ಟಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಕನ್ನಡ ಭಾಷೆಗಾಗಿ ಸಾಯಲು ಸಿದ್ಧ ಎಂದು ಹೇಳಿದರು.
ಜೀ ಕನ್ನಡ ನ್ಯೂಸ್ ವಾಹಿನಿಯ ರಿಯಲ್ ಸ್ಟಾರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಸಮಕ್ಷಮದಲ್ಲಿ ಸಚಿವರು ಕಮಲ್ ಹಾಸನ್ ವರ್ತನೆಯನ್ನು ಖಂಡಿಸಿದ್ದಾರೆ. ಕನ್ನಡ ಭಾಷೆ, ನೆಲ, ಜಲದ ಬಗ್ಗೆ ತಪ್ಪಾಗಿ ಮಾತನಾಡಿದರೆ ಸಹಿಸದು ಎಂದು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರೂ ಖಂಡಿಸಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಆಗ್ರಹಿಸಿದ್ದಾರೆ. ನಟ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ನಟ ಶಿವರಾಜಕುಮಾರ್ (ಶಿವಣ್ಣ) ಖಂಡಿಸಬೇಕು ಎಂದು ತಂಗಡಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒತ್ತಾಯಿಸಿದ್ದಾರೆ. “ನಾಡು, ಜಲ, ಭಾಷೆಯ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರೂ ಸುಮ್ಮನಿರದೆ ಖಂಡಿಸಬೇಕು. ಕನ್ನಡದ ಗೌರವವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ” ಎಂದು ಅವರು ಹೇಳಿದ್ದಾರೆ.
ಕನ್ನಡ ಅಂತೀರಾ... ಸ್ಟಾರ್ ನಟರಿಗೆ ಮಾತ್ರ ಬೆಂಬಲಿಸೋದು. ಹೊಸಬರನ್ನೂ ಕೂಡ ಬೆಳೆಸಬೇಕು. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತದೆ. ಅವರೇ ಅದನ್ನು ಸರಿ ಮಾಡಿಕೊಳ್ಳುತ್ತಾರೆ ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ.
A For Anand movie : ಸ್ಯಾಂಡಲ್‌ವುಡ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಪಾಠ ಹೇಳಿ ಕೊಡುವ ಗುರುವಾಗಿ ಕಾಣಿಸಿಕೊಳ್ಳುತ್ತಿರುವ 'A for ಆನಂದ್' ಚಿತ್ರದ ಮುಹೂರ್ತ ಇಂದು ಅದ್ಧೂರಿಯಾಗಿ ನೆರವೇರಿದೆ.. ಈ ಕುರಿತ ಇಂಟ್ರಸ್ಟಿಂಗ್ ಡಿಟೈಲ್ಸ್ ಇಲ್ಲಿದೆ ನೋಡಿ..
ಸೂತ್ರಧಾರಿ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಚಂದನ್ ಶೆಟ್ಟಿ ನಟನೆಯವ ಸೂತ್ರಧಾರಿ ಚಿತ್ರ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ʼಮಗಳು ಸಿನಿಮಾ ಮಾಡಿರುವುದು ಬಹಳ ಖುಷಿಯಾಗಿದೆ. ನಾನು ಕಥೆ ಕೇಳಿದೆ, ವಿಭಿನ್ನವಾಗಿತ್ತು. ಕೇಳಿದ ತಕ್ಷಣ ಹೃದಯಕ್ಕೆ ಸೇರಿತು. ಸಾಕಷ್ಟು ವಿಷಯಗಳು ಚಿತ್ರದಲ್ಲಿವೆ. ಬರೀ ಫೈಟ್, ಡ್ಯುಯೇಟ್ ಸಾಂಗ್ ಮಾಡಬಹುದು. ಆದರೆ ʼಫೈರ್ ಫ್ಲೈʼ ವ್ಯಾಲ್ಯೂ ಸಬ್ಜೆಕ್ಟ್ ಇರುವ ಚಿತ್ರʼವೆಂದು ನಟ ಶಿವರಾಜಕುಮಾರ್ ಹೇಳಿದರು.
45 movie teaser: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ “ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ಅದ್ದೂರಿಯಾಗಿ ಅಪಾರವೆಚ್ಚದಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.
45 Kannada Movie: ಕಾಂತಾರ ಮತ್ತು KGF ಸಿನಿಮಾಗಳಂತೆ ಫಿಲಂ ಇಂಡಸ್ಟ್ರಿಯನ್ನೇ ಆಳಲು ಸಿದ್ದವಾಗಿದೆ ಕನ್ನಡದ ಬಹುನಿರೀಕ್ಷೆಯ ಬಿಗ್ ಬಜೆಟ್ ಸಿನಿಮಾ “45”..ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇತಿಹಾಸ ಸೃಷ್ಟಿಸೋ ಸಿನಿಮಾ “45”..!
Shivarajkumar: ಕ್ಯಾನ್ಸರ್ ಮುಕ್ತರಾಗಿರುವ ದೊಡ್ಮನೆ ದೊರೆ ಡಾ.ಶಿವರಾಜ್ ಕುಮಾರ್ ರೆಸ್ಟ್ ಮೂಡ್ ನಿಂದ ಈಗ ವರ್ಕ್ ಮೂಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದಿದ್ದ ಶಿವಣ್ಣ ಇಷ್ಟು ದಿನ ವಿಶ್ರಾಂತಿಯಲ್ಲಿದ್ದರು. ವಿಶ್ರಾಂತಿಗೆ ವಿರಾಮ ಹಾಕಿ ಈಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ನಾಳೆಯಿಂದ ಶಿವಣ್ಣ ನಟಿಸುತ್ತಿರುವ 131 ಚಿತ್ರೀಕರಣ ಮತ್ತೆ ಪ್ರಾರಂಭವಾಗುತ್ತಿದೆ.
Nimbia Banada Myaga: ಭಾರತೀಯ ಚಿತ್ರರಂಗದ ಮೇರು ನಟ ಡಾ||ರಾಜಕುಮಾರ್ ಅವರ ಕುಟುಂಬದ ಮತ್ತೊಂದು ಕುಡಿ ಷಣ್ಮುಖ ಗೋವಿಂದರಾಜ್ "ನಿಂಬಿಯಾ ಬನಾದ ಮ್ಯಾಗ" ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಷಣ್ಮುಖ, ಡಾ||ರಾಜಕುಮಾರ್ ಪುತ್ರಿ ಲಕ್ಷ್ಮೀ ಹಾಗೂ ಗೋವಿಂದರಾಜು ಅವರ ಪುತ್ರ.
Shivarajkumar return : ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಡಿಸೆಂಬರ್ ಅಂತ್ಯದಲ್ಲಿ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುಮಾರು ಒಂದು ತಿಂಗಳಿನಿಂದ ಅಲ್ಲೇ ಉಳಿದುಕೊಂಡಿದ್ದ ಶಿವಣ್ಣ ಭಾನುವಾರ (ಜನವರಿ 26) ಮನೆಗೆ ಮರಳಿದ್ದಾರೆ. ಅವರು ಪ್ರಸ್ತುತ ರಾಮ್ ಚರಣ್ ಅವರ ಚಿತ್ರ ಪೇಡಿ (ವರ್ಕಿಂಗ್ ಶೀರ್ಷಿಕೆ) ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
45 Kannada Movie: ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಹಾಗೂ 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ "45" ಚಿತ್ರ ಆಗಸ್ಟ್ 15, ಸ್ವಾತಂತ್ರ್ಯ ದಿನೋತ್ಸವದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತಾರೆ. ಆದರೆ "45" ಚಿತ್ರತಂಡ ವಿಭಿನ್ನವಾಗಿ ದಿನಾಂಕ ಘೋಷಣೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.