ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಗುಡ್ ನ್ಯೂಸ್', ಎರಡನೇ ದಿನ ಗಳಿಸಿದ್ದೇಷ್ಟು?

'ಗುಡ್ ನ್ಯೂಸ್' ಚಿತ್ರದ ಎರಡನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಹಿರಂಗಗೊಂಡಿದ್ದು, ಪ್ರೇಕ್ಷಕರಿಗೆ ಭಾರೀ ಮೆಚ್ಚುಗೆಗೆ ಈ ಚಿತ್ರ ಪಾತ್ರವಾಗಿದೆ ಎಂಬುದು ಇದರಿಂದ ಸಿದ್ಧವಾಗಿದೆ.

Written by - Nitin Tabib | Last Updated : Dec 29, 2019, 01:59 PM IST
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಗುಡ್ ನ್ಯೂಸ್', ಎರಡನೇ ದಿನ ಗಳಿಸಿದ್ದೇಷ್ಟು? title=

ನವದೆಹಲಿ: ಸೂಪರ್ ಸ್ಟಾರ್ ಅಕ್ಷಯ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರಕ್ಕೆ ಪ್ರೇಕ್ಷಕರ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂಬುದು ಇದೀಗ ಸ್ಪಷ್ಟವಾಗಿದೆ. ಡಿಸೆಂಬರ್ 27ಕ್ಕೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರವನ್ನು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು.  ರಾಜ್ ಮೆಹ್ತಾ ಅವರ ನಿರ್ದೇಶನದ ಅಡಿ ಮೂಡಿ ಬಂದ ಈ ಚಿತ್ರದಲ್ಲಿ ಅಕ್ಷಯ್ ಜೊತೆಗೆ ಕರೀನಾ ಕಪೂರ್, ದಿಲ್ಜೀತ್ ದೊಸಾಂಜ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸದ್ಯ ಈ ಚಿತ್ರ ಎರಡನೇ ದಿನ ಗಲ್ಲಾ ಪೆಟ್ಟಿಗೆಯಲ್ಲಿ ಯಾವ ರೀತಿ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಬಹಿರಂಗವಾಗಿವೆ. ಇದನ್ನು ಗಮನಿಸಿದರೆ ಈ ಚಿತ್ರಕ್ಕೆ ಪ್ರೇಕ್ಷಕರ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂಬುದು ಸಾಬೀತಾಗಿದೆ.

ಬಾಕ್ಸ್ ಆಫೀಸ್ ಇಂಡಿಯಾ ವರದಿಗಳ ಪ್ರಕಾರ ಬಿಡುಗಡೆಯಾದ ಮೊದಲನೇ ದಿನ 'ಗುಡ್ ನ್ಯೂಸ್' ಚಿತ್ರ 18ಕೋಟಿ ರೂ.ಗಳನ್ನು ಕಲೆಹಾಕಲು ಯಶಸ್ವಿಯಾಗಿದೆ. ಎರಡನೇ ದಿನವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ ತನ್ನ ನಾಗಾಲೋಟ ಮುಂದುವರೆಸಿದ್ದು, ಎರಡನೆಯ ದಿನ ಈ ಚಿತ್ರ ಸುಮಾರು 22ಕೋಟಿ ರೂ. ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಇದರರ್ಥ ಬಿಡುಗಡೆಯಾದ ಕೇವಲ ಎರಡು ದಿನಗಳ ಬಳಿಕ ಈ ಚಿತ್ರ ಸುಮಾರು 40 ಕೋಟಿ.ರೂ . ಸಂಪಾದಿಸಿದಂತಾಗಿದೆ. ಆರಂಭದಿಂದ ಚಿತ್ರ ಮುಗಿಯುವವರೆಗೆ ಪ್ರೇಕ್ಷಕರನ್ನು ಕುರ್ಚಿಯಲ್ಲಿ ಕಟ್ಟಿಹಾಕಲು ಈ ಚಿತ್ರ ಯಶಸ್ವಿಯಾಗಿದೆ ಎಂದೇ ಹೇಳಲಾಗುತ್ತಿದೆ. 'ಕೇಸರಿ' ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಿದ ಅಕ್ಷಯ ಕುಮಾರ್, 'ಹೌಸ್ ಫುಲ್-4' ಈ ಚಿತ್ರದಲ್ಲಿ ತಮ್ಮ ಸಾಮಾನ್ಯ ಪಾತ್ರದಲ್ಲಿ ಕಂಡುಬಂದಿದ್ದರು.

'ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್ ಅವರ ನೈಸರ್ಗಿಕ ನಟನೆ ಪ್ರೇಕ್ಷಕರ ಮನ ಗೆದ್ದಿದ್ದು, ಮದುವೆಯ 7 ವರ್ಷಗಳ ಬಳಿಕವೂ ಕೂಡ ತಾಯಿ ಭಾಗ್ಯ ಕಾಣದ ಮಹಿಳೆಯ ಪಾತ್ರಕ್ಕೆ ಕರೀನಾ ಕೂಡ ಜೀವ ತುಂಬಿದ್ದಾರೆ. ಅಕ್ಷಯ್-ಕರೀನಾಗೆ ಹೋಲಿಸಿದರೆ ದಿಲ್ಜೀತ್-ಕಿಯಾರಾಗೆ ಪರದೆಯ ಮೇಲೆ ಕಾಣಿಸಿಕೊಳ್ಳಲು ಸ್ವಲ್ಪ ಕಡಿಮೆ ಅವಕಾಶ ಸಿಕ್ಕಿದ್ದರೂ ಕೂಡ ಚಿತ್ರದ ಹಲವು ದೃಶ್ಯಗಳಲ್ಲಿ ಇವರು ಪ್ರೇಕ್ಷಕರು ಹೊಟ್ಟೆ ಹಿಡಿದು ನಗುವಂತೆ ಮಾಡಿದ್ದಾರೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅವರ ಕುರಿತು ಹೇಳುವುದಾದರೆ, ಅಕ್ಷಯ್ ಪರದೆಗೆ ಎಂಟ್ರಿ ಹೊಡೆದರೆ, ಅವರ ಪಕ್ಕದ ಕಲಾವಿದರ ಮೇಲೆ ಪ್ರೇಕ್ಷರ ಗಮನ ಹರಿಯುವುದೇ ಇಲ್ಲ. ಆದರೆ, ಈ ಚಿತ್ರದಲ್ಲಿ ಅಕ್ಷಯ್ ಉಪಸ್ಥಿತಿಯಲ್ಲಿಯೂ ಕೂಡ ದಿಲ್ಜೀತ್ ದೊಸಾಂಜ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಿಯಾರಾ ಅಡ್ವಾಣಿ, ದಿಲ್ಜೀತ್ ಅವರ ಪಂಜಾಬಿ ಪತ್ನಿಯ ಭೂಮಿಕೆಯಲ್ಲಿ ಕಂಡುಬಂದಿದ್ದಾರೆ. ಪಂಜಾಬಿ ಪತ್ನಿಯರ ನಡೆ-ನುಡಿ ಬಾಡಿ ಲ್ಯಾಂಗ್ವೇಜ್ ಅನ್ನು ಉತ್ತಮ ರೀತಿಯಲ್ಲಿ ಪರದೆಯ ಮೇಲೆ ಇಳಿಸುವಲ್ಲಿ ಕಿಯಾರಾ ಬಹುತೇಕ ಯಶಸ್ವಿಯಾಗಿದ್ದಾರೆ.

Trending News