ರೆಟ್ರೋ ಸ್ಟೈಲ್'ನಲ್ಲಿ ಮೂಡಿ ಬಂದ "ಹೇಳು ಗೆಳತಿ":ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ

ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ.

Written by - Ranjitha R K | Last Updated : Jul 31, 2024, 01:48 PM IST
  • ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ
  • ಈ ಹಿಂದೆ ಹರಿಬಿಟ್ಟಿದ್ದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
  • ಇದೀಗ ‘ಹೇಳು ಗೆಳತಿ’ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರೆಟ್ರೋ ಸ್ಟೈಲ್'ನಲ್ಲಿ ಮೂಡಿ ಬಂದ "ಹೇಳು ಗೆಳತಿ":ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ  title=

ಬೆಂಗಳೂರು : ವಿಹಾನ್,ಅಂಕಿತಾ ಅಮರ್ ಪ್ರಮುಖ ಭೂಮಿಕೆಯಲ್ಲಿರುವ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ.ಚಂದ್ರಜಿತ್ ಬೆಳಿಯಪ್ಪ ನಿರ್ದೇಶನವಿರುವ ಈ ಸಿನಿಮಾದ ‘ಹೇಳು ಗೆಳತಿ’ಎಂಬ ಮೆಲೋಡಿ ಹಾಡನ್ನು  ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ ಚಿತ್ರತಂಡ.ಈ ಹಿಂದೆ ಹರಿಬಿಟ್ಟಿದ್ದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.ಇದೀಗ ‘ಹೇಳು ಗೆಳತಿ’ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ.

ನಾಗಾರ್ಜುನ ಶರ್ಮಾ ಸಾಹಿತ್ಯವಿರುವ ಈ ಹಾಡಿಗೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ.ಸದ್ಯ ಟ್ರೆಂಡ್ ಹುಟ್ಟು ಹಾಕಿರುವ ಈ ಗೀತೆಗೆ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನವಿದೆ.ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ : ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆ

ಕಿರಿಕ್ ಪಾರ್ಟಿ ಹಾಗೂ ಅವನ್ನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳಿಯಪ್ಪ,ರಕ್ಷಿತ್‌ರ ‘ಸೆವೆನ್ ಆಡ್ಸ್’ ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗೂ ಕಥಾಸಂಗಮ ಚಿತ್ರದ ನಿರ್ದೇಶಕರಲ್ಲೊಬ್ಬರಾಗಿದ್ದರು. ಇದೀಗ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ.ಪರವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್.ಗುಪ್ತ, ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
 
ತೆಲುಗಿನ ಸೂಪರ್‌ಹಿಟ್ ‘ಗೀತಾಂಜಲಿ’ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ನಟನೆಗೆ ಮರಳಿ ಬಂದಿದ್ದಾರೆ ಮಯೂರಿ ನಟರಾಜ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ : ಚಿನ್ನದ ಗೊಂಬೆಯಂತೆ ಕಣ್ಸೆಳೆದ ನಟಿ ಶ್ರೀಲೀಲಾ..ಪಡ್ಡೆ ಹುಡುಗರ ಹೃದಯ ಕದ್ದೇಬಿಟ್ಟಳು ಬಂಗಾರದ ಬೆಡಗಿ..!
 
ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ಮಗ್ನವಾಗಿದ್ದು, ವಿಎಫ್‌ಎಕ್ಸ್ ಕೆಲಸ ಪಿನಾಕ ಸ್ಟುಡಿಯೋದಲ್ಲಿ ನಡೆಯುತ್ತಿದೆ.ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ ಈ ಚಿತ್ರಕ್ಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News