ಸಿನಿಮೀಯ ಶ್ರೇಷ್ಠತೆಯ ಹೊಸ ಯುಗಕ್ಕೆ ನಾಂದಿ ಹಾಡುವ ಐಫಾ..! ಸೆ.27 ರಿಂದ ಅದ್ದೂರಿ ಚಾಲನೆ

ಈ ಬಾರಿಯ ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಕಾರ್ಯಕ್ರಮಕ್ಕೆ ನಿರೂಪಕರಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾರಂಭಕ್ಕೆ ಕಳೆಯನ್ನು ತರಲಿದ್ದಾರೆ. ಜೊತೆಗೆ ಸ್ಟಾರ್ ಪ್ರದರ್ಶಕರಾಗಿ ಶಾಹಿದ್ ಕಪೂರ್ ತಮ್ಮ ಕಾರ್ಯಕ್ರಮದ ಮೂಲಕ ವೇದಿಕೆಗೆ ಮತ್ತಷ್ಟು ಮೆರಗನ್ನು ತರಲಿದ್ದಾರೆ.

Written by - Manjunath N | Last Updated : Aug 24, 2024, 12:05 AM IST
  • ಐಫಾ ಭಾರತೀಯ ಚಿತ್ರರಂಗದ ಆಚರಣೆಯಾಗಿದ್ದು ಅದು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತದೆ
  • ಮತ್ತು ಇದುವರೆಗೂ ಈ ಪ್ರಯಾಣದ ಭಾಗವಾಗಿರುವುದು ನಿಜಕ್ಕೂ ಸಂತಸ ತಂದಿದೆ,
  • ಆದ್ದರಿಂದ ಸೆಪ್ಟಂಬರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಶಕ್ತಿ, ಉತ್ಸಾಹ ಮತ್ತು ಭವ್ಯತೆ ಎಲ್ಲವೂ ಮೇಳೈಸಲಿದೆ ಎಂದರು.
ಸಿನಿಮೀಯ ಶ್ರೇಷ್ಠತೆಯ ಹೊಸ ಯುಗಕ್ಕೆ ನಾಂದಿ ಹಾಡುವ ಐಫಾ..! ಸೆ.27 ರಿಂದ ಅದ್ದೂರಿ ಚಾಲನೆ title=

ಅಬುದಾಭಿ: ಭಾರತೀಯ ಚಿತ್ರರಂಗದ ಅತಿದೊಡ್ಡ ಆಚರಣೆಯಾಗಿರುವ ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (ಐಐಎಫ್‌ಎ) ಅವಾರ್ಡ್ಸ್ ಕಾರ್ಯಕ್ರಮವು ಇದೆ ಸೆಪ್ಟೆಂಬರ್ 27 ರಿಂದ 29 ರವರೆಗೆ ಅಭುದಾಬಿಯಲ್ಲಿನ ಯಾಸ್ ಐಲ್ಯಾಂಡ್ ನಲ್ಲಿ ನಡೆಯಲಿದೆ.

ಎರಡು ದಿನಗಳ ಕಾಲ ನಡೆಯುವ ಈ ಸಮಾರಂಭದಲ್ಲಿ ಹಿಂದಿ ಮತ್ತು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸಿನಿ ಜಗತ್ತಿನ ತಾರೆಗಳ ಸಮಾಗಮವಾಗಲಿದೆ.ಈ ವರ್ಷ ಅಬುದಾಬಿ ಸಚಿವರಾದ ಗೌರವಾನ್ವಿತ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಪ್ರೋತ್ಸಾಹದೊಂದಿಗೆ ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಮಿರಾಲ್ ಸಹಭಾಗಿತ್ವದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಬಾರಿ ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಕಾರ್ಯಕ್ರಮಕ್ಕೆ ನಿರೂಪಕರಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾರಂಭಕ್ಕೆ ಕಳೆಯನ್ನು ತರಲಿದ್ದಾರೆ. ಜೊತೆಗೆ ಸ್ಟಾರ್ ಪ್ರದರ್ಶಕರಾಗಿ ಶಾಹಿದ್ ಕಪೂರ್ ತಮ್ಮ ಕಾರ್ಯಕ್ರಮದ ಮೂಲಕ ವೇದಿಕೆಗೆ ಮತ್ತಷ್ಟು ಮೆರಗನ್ನು ತರಲಿದ್ದಾರೆ.

ಇದುವರೆಗೆ ನಡೆದಿರುವ ಐಫಾ ಕಾರ್ಯಕ್ರಮದಲ್ಲಿಯೇ ಇದು ಅದ್ದೂರಿ ಸಮಾರಂಭವಾಗಲಿದ್ದು, ಬಾಲಿವುಡ್ ಜಗತ್ತಿನ ತಾರೆಯರಿಂದ ಹಿಡಿದು, ದಕ್ಷಿಣ ಭಾರತೀಯ ಸಿನಿಮಾ ದಿಗ್ಗಜರು, ಓಟಿಟಿ ವೇದಿಕೆಗಳು,ಜಾಗತಿಕ ತಾರೆಗಳು, ಅಂತರರಾಷ್ಟ್ರೀಯ ಗಣ್ಯರ ಸಮಾಗಮದ ಮೂಲಕ ಈ ವೇದಿಕೆಯು ಭಾರತೀಯ ಸಿನಿ ಜಗತ್ತಿನ ಶ್ರೇಷ್ಠ ಪರಂಪರೆಯನ್ನು ಸಾರುತ್ತದೆ.

ಇದೆ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರು ಐಫಾ ಫೆಸ್ಟಿವಲ್‌ನ 24 ನೇ ಆವೃತ್ತಿಯನ್ನು ಆಯೋಜಿಸುವ ಕುರಿತು ಮಾತನಾಡಿ 'ಐಫಾ ಭಾರತೀಯ ಚಿತ್ರರಂಗದ ಆಚರಣೆಯಾಗಿದ್ದು ಅದು ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತದೆ ಮತ್ತು ಇದುವರೆಗೂ ಈ ಪ್ರಯಾಣದ ಭಾಗವಾಗಿರುವುದು ನಿಜಕ್ಕೂ ಸಂತಸ ತಂದಿದೆ, ಆದ್ದರಿಂದ ಸೆಪ್ಟಂಬರ್ ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಮತ್ತೊಮ್ಮೆ ಶಕ್ತಿ, ಉತ್ಸಾಹ ಮತ್ತು ಭವ್ಯತೆ ಎಲ್ಲವೂ ಮೇಳೈಸಲಿದೆ ಎಂದರು.

ಇನ್ನೊಂದೆಡೆ ಕರಣ್ ಜೋಹರ್ ಮಾತನಾಡುತ್ತಾ'"ಎರಡು ದಶಕಗಳಿಗೂ ಹೆಚ್ಚು ಕಾಲ, ಐಫಾ ನನ್ನ ಪ್ರಯಾಣದ ನಿರ್ಣಾಯಕ ಭಾಗವಾಗಿದೆ. ನಮ್ಮ ತಂದೆ ಅವರು ಆರಂಭಿಕ ವರ್ಷಗಳಲ್ಲಿ ಐಫಾದ ಸಲಹಾ ಮಂಡಳಿಯ ಸದಸ್ಯರಾಗಿದ್ದರು, ಐಫಾ ಜೊತೆಗಿನ ಅವರ ಒಡನಾಟವು ನಿಜಕ್ಕೂ ಪ್ರೇರಣಾದಾಯಕವಾಗಿದೆ. ಈಗ ಐಫಾ ಮೂಲಕ ಭಾರತೀಯ ಚಲನಚಿತ್ರೋದ್ಯಮದೊಂದಿಗೆ ನಮ್ಮ ಕುಟುಂಬದ ಆಳವಾದ ಸಂಪರ್ಕವನ್ನು ಮತ್ತು ಅದರ ಅಂತರಾಷ್ಟ್ರೀಯ ಪ್ರಭಾವವನ್ನು ಮತ್ತಷ್ಟು ಭದ್ರಪಡಿಸುತ್ತದೆ, ಈ ಸೆಪ್ಟೆಂಬರ್ 27-29 ರಂದು ಅಭೂತಪೂರ್ವ ಮೂರನೇ ಪ್ರದರ್ಶನಕ್ಕಾಗಿ ಐಐಎಫ್‌ಎ ವೇದಿಕೆಯಲ್ಲಿ ಮ್ಯಾಜಿಕ್ ಅನ್ನು ಪುನರುಜ್ಜೀವನಗೊಳಿಸುವುದು ನಿಜಕ್ಕೂ ಗೌರವದ ಸಂಗತಿಯಾಗಿದೆ.ಈಗ ನನ್ನ ಆತ್ಮೀಯ ಸ್ನೇಹಿತ ಶಾರುಖ್ ಖಾನ್ ಜೊತೆಯಲ್ಲಿ ಮರೆಯಲಾಗದ ಅನುಭವಕ್ಕಾಗಿ ಹಿಂದೆಂದೂ ನೋಡಿರದ ಅದ್ದೂರಿ ಅಬುಧಾಬಿಗೆ ಸಿದ್ದರಾಗಿ' ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News