Hamsalekha Birthday: ಸ್ಯಾಂಡಲ್ವುಡ್‌ ಗೆ ʼನಾದ ಬ್ರಹ್ಮʼ ಹಂಸಲೇಖರವರ ಕೊಡುಗೆ ಅಪಾರ; ಇಲ್ಲಿದೆ ನೋಡಿ ವಿವರ..!

Hamsalekha Birthday: ತಮ್ಮ ಸಾಹಿತ್ಯದ ಮೂಲಕ ಮನ ಗೆದ್ದಿರುವ ನಾದ ಬ್ರಹ್ಮ ಎಂದೇ ಖ್ಯಾತಿ ಪಡೆದಿರುವ ಹಂಸಲೇಖರವರಿಗೆ ಇಂದು 72 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಸ್ಯಾಂಡಲ್ವುಡ್‌ ಇವರ ಕೊಡುಗೆ ಅಪಾರ. 

Written by - Zee Kannada News Desk | Last Updated : Jun 23, 2023, 01:13 PM IST
  • ನಾದ ಬ್ರಹ್ಮ ಹಂಸಲೇಖರವರಿಗೆ ಹುಟ್ಟು ಹಬ್ಬದ ಸಂಭ್ರಮ
  • ತಮ್ಮ ಸಾಹಿತ್ಯದ ಮೂಲಕ ಮನ ಗೆದ್ದಿರುವ ನಾದ ಬ್ರಹ್ಮ
  • ಚಿತ್ರರಸಿಕರ ಮನಗೆದ್ದ ಅಪ್ರತಿಮ ಸಂಗೀತ ಮಾಂತ್ರಿಕ ಹಂಸಲೇಖ
Hamsalekha Birthday: ಸ್ಯಾಂಡಲ್ವುಡ್‌ ಗೆ ʼನಾದ ಬ್ರಹ್ಮʼ ಹಂಸಲೇಖರವರ ಕೊಡುಗೆ ಅಪಾರ; ಇಲ್ಲಿದೆ ನೋಡಿ ವಿವರ..! title=

ಬೆಂಗಳೂರು: ತಮ್ಮ ಸಾಹಿತ್ಯದ ಮೂಲಕ ಮನ ಗೆದ್ದಿರುವ ನಾದ ಬ್ರಹ್ಮ ಎಂದೇ ಖ್ಯಾತಿ ಪಡೆದಿರುವ ಹಂಸಲೇಖರವರಿಗೆ ಇಂದು 72 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 1951 ರಂದು ಮೈಸೂರಿನಲ್ಲಿ ಜನಿಸಿದರ ಇವರು, ಬಾಲ್ಯವೆಲ್ಲಾ ಮೈಸೂರಿನಲ್ಲಿ ಕಳೆದು, ರಂಗ ಭೂಮಿ ಕಡೆ ಒಲವು ತೋರಿದರು.

1973 ರಲ್ಲಿ "ತ್ರಿವೇಣಿ" ಚಿತ್ರದ "ನೀನಾ ಭಗವಂತ" ಹಾಡಿನ ಮೂಲಕ ಗೀತ ರಚನೆಕಾರರಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ಕನ್ನಡಿಗರಿಗೆ ಈ ಸಂಗೀತ ಮಾಂತ್ರಿಕ ಎಂದರೆ ಅಚ್ಚು ಮೆಚ್ಚು . ಕಾರಣ ಕನ್ನಡ ಸಿನಿಲೋಕ ಇವರು ನೀಡಿರುವ ಕೊಡುಗೆ ಅಪಾರ.  

ಇಂದಿಗೂ ಅದೆಷ್ಟೂ ಜನ ಹಂಸಲೇಖರವರ ಸಂಗೀತ ಸಾಹಿತ್ಯವನ್ನು ಆರಾಧಿಸುವ ವರ್ಗವೆ ಇದೆ. ಬರೀ ಕನ್ನಡಿಗರು ಮಾತ್ರವಲ್ಲದೇ ವಿದೇಶದಲ್ಲಿ ಕೂಡ ನಾದ ಬ್ರಹ್ಮ ಹಂಸಲೇಕರವರಿಗೆ ಅಭಿಮಾನಿ ಬಳಗವಿದೆ.

ಇದನ್ನೂ ಓದಿ: ಟಿಆರ್​ಪಿ ಗಳಿಕೆಯಲ್ಲಿ ಮೊದಲ ಸ್ಥಾನ ಯಾರಿಗೆ ‘ಅಮೃತಧಾರೆ’ ಗಾ.. ಪುಟ್ಟಕ್ಕನ ಮಕ್ಕಳಿಗಾ..ಇಲ್ಲಿದೆ ನೋಡಿ ವಿವರ..!

ಇವರ ಸಂಗೀತ ಸಾಹಿತ್ಯ ಎಂದರೆ...ಎಲ್ಲೂ ಅಶ್ಲೀಲದ ಸೋಂಕಿಲ್ಲ.. ಶೃಂಗಾರಕ್ಕೆ ಕೊರತೆಯಿಲ್ಲ... ಅರ್ಥ ಮಾಡಿಕೊಂಡರೆ ರೋಮಾಂಚನ.. ಉಳಿದವರಿಗೆ ಮೋಹಕ ಪದಸಿಂಚನ.. ಖುಷಿಯಲ್ಲಿ, ಅಳುವಿನಲ್ಲಿ, ಕೋಪದಲ್ಲಿ ಮನ ಕರಗಿಸುವ ಜಾದುಗಾರ..  

ಸ್ಯಾಂಡಲ್ವುಡ್‌ ನ್ನು ಬೇರೆ ಭಾಷೆಯವರು ತಿರುಗಿ ನೋಡುವಂತೆ ಮಾಡಲು ಇವರಿಂದ ನಿರ್ಮಾಣವಾದ ಸಂಗೀತ ಸಾಹಿತ್ಯವೇ ಕಾರಣ.. ಇವರ ಹಾಡೆಂದರೆ ಅಲ್ಲೊಂದು ಪ್ರೇಮ ಸಂದೇಶ ವಿದ್ದೆ ಇರುತ್ತದೆ. ಅದರಲ್ಲೂ ಇವರ ಹಲವು ಹಾಡುಗಳು ರವಿಚಂದ್ರನ್ ನಟನೆಯ ಸಿನಿಮಾಗಳೇ ಹೆಚ್ಚಿವೆ.

ಇದನ್ನೂ ಓದಿ:  Thalapathy Vijay: ದಳಪತಿ' ವಿಜಯ್ ಹುಟ್ಟುಹಬ್ಬಕ್ಕೆ ಡಬಲ್ ಧಮಾಕ ಉಡುಗೊರೆ..!

 ಸಿನಿಮಾದಲ್ಲಿ ರವಿಚಂದ್ರನ್‌ ಅಭಿನಯಿಸಿ ಪ್ರೀತಿ ಪಾತ್ರದಾದರೇ ಹಂಸಲೇಖರವರು ಸಂಗೀತ ನೀಡಿ ಕಿವಿ ತಂಪು ಮಾಡುತ್ತಿದ್ದರು. ನಾದ ಭ್ರಮನಿಗೆ ಇವರ ಮಡದಿ ಲತಾ ಅವರು ಸಾಹಿತ್ಯ ರಚಿಸಲು ಸಾಥ್‌ ನೀಡುತ್ತಿದ್ದರು.

ಅದೆನೋ ಗೊತ್ತಿಲ್ಲ ರವಿಚಂದ್ರನ್​ ಹಾಗೂ ಹಂಸಲೇಖ ಅವರ ಜೋಡಿ ಕನ್ನಡ ಸಾಂಡಲ್ವುಡ್‌ನಲ್ಲಿ ಹಲವು ವರ್ಷಗಳ ರಾಜ್ಯಭಾರ ಮಾಡಿತ್ತು. ರಾಮಚಾರಿ, ರಣಧೀರ, ಹಳಿಮೇಷ್ಟ್ರು ಹೀಗೆ ಹಲವಾರು ಸಿನಿಮಾಗಳಲ್ಲಿ ಈ ಜೋಡಿ ರಂಜಿಸಿತ್ತು.ಹಂಸಲೇಖ ಸಾಹಿತ್ಯ ಮತ್ತು ಸಂಗೀತವನ್ನು ಮೆಚ್ಚಿಕೊಂಡಾಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಇದನ್ನೂ ಓದಿ: Bharjari Bachelors: ʼಭರ್ಜರಿ ಬ್ಯಾಚುಲರ್ಸ್ʼ ಗಳಿಗೆ ʼಪ್ರೀತಿ ಪಾಠ ಹೇಳಲುʼ ರೆಡಿಯಾದ ಕರುನಾಡ ಕ್ರೇಜಿ ಸ್ಟಾರ್..!

ಪ್ರೇಮಲೋಕ, ರಣಧೀರ, ಯುಗಪುರುಷ ಮತ್ತು ಆಕಸ್ಮಿಕ ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಹಾಗೂ ಚಿತ್ರ ಸಾಹಿತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷಾ ಚಿತ್ರಗಳಿಗೆ ಸಂಗೀತ, ಸಾಹಿತ್ಯ ನೀಡಿದ್ದಾರೆ. ಸಂಗೀತ ಸಾಹಿತ್ಯ ಮಾತ್ರವಲ್ಲದೇ ಇವರ ಚಿತ್ರ ಕಥೆಗಳಾ ಅವನೇ ನನ್ನ ಗಂಡ,ಗಂಧರ್ವ,ನನ್ನ ತಂಗಿ, ಶಾಪ ಈ ಚಿತ್ರಗಳಿಗೆ ಚಿತ್ರ ಕಥೆ ನೀಡಿದ್ದಾರೆ.  ಹಾಗೆಯೇ ಇವರ  ಸಂಗೀತ ಸಾಹಿತ್ಯಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕ ರಾಜ್ಯಪ್ರಶಸ್ತಿ, ಹಾಗೂ ರಾಮಾಚಾರಿ, ಓಂ,ನೆನಪಿರಲಿ ಚಿತ್ರದ ಹಾಡುಗಳಿಗೆ ಫಿಲ್ಮ್‍ಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಲಭಿಸಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News