ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ನೋಡಿ ಶಾಕ್‌ ಆಯ್ತು : ನಟಿ ಜಾನ್ವಿ ಬೇಸರ

Janhvi Kapoor morphing photo : ಅನೇಕ ಸೆಲೆಬ್ರಿಟಿಗಳು ತಮ್ಮ ಮಾರ್ಫಿಂಗ್ ಫೋಟೋಗಳಿಗೆ ಬೇಸರ ವ್ಯಕ್ತಪಡಿಸಿರುವ ಅನೇಕ ಉದಾರಹಣೆಗಳು ನಮ್ಮ ಮುಂದಿವೆ. ಇದೀಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ ನೋಡಿ..

Written by - Krishna N K | Last Updated : Sep 30, 2023, 12:54 PM IST
  • ನಟಿ ಜಾನ್ವಿ ಕಪೂರ್ ಹಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
  • ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ತಮ್ಮ ಮಾರ್ಫಿಂಗ್ ಫೋಟೋಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.
  • ಇಂತಹ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಶ್ಲೀಲ ವೆಬ್‌ಸೈಟ್‌ನಲ್ಲಿ ನನ್ನ ಫೋಟೋ ನೋಡಿ ಶಾಕ್‌ ಆಯ್ತು : ನಟಿ ಜಾನ್ವಿ ಬೇಸರ title=

Janhvi kapoor : ಸಿನಿಮಾ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರು ಅನುಚಿತ ಕಾಮೆಂಟ್‌, ವೀಡಿಯೊಗಳು ಮತ್ತು ಫೋಟೋಗಳನ್ನು ಮಾರ್ಫಿಂಗ್ ಮಾಡಿ ಅಶ್ಲೀಲ ಸೈಟ್‌ಗಳಲ್ಲಿ ಪೋಸ್ಟ್ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ನಟಿ ಜಾನ್ವಿ ಕಪೂರ್‌ ಸಹ ಹೊರತಾಗಿಲ್ಲ.

ಹೌದು.. ಅನೇಕ ಸೆಲೆಬ್ರಿಟಿಗಳು ತಮ್ಮ ಮಾರ್ಫಿಂಗ್ ಫೋಟೋಗಳಿಗೆ ಬೇಸರ ವ್ಯಕ್ತಪಡಿಸಿರುವ ಅನೇಕ ಉದಾರಹಣೆಗಳು ನಮ್ಮ ಮುಂದಿವೆ. ಇದೀಗ ಬಾಲಿವುಡ್ ನಟಿ ಜಾನ್ವಿ ಕಪೂರ್ ಕೂಡ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ತಮ್ಮ ಮಾರ್ಫಿಂಗ್ ಫೋಟೋಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾಗಿ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ:ʼಕನ್ನಡಕ್ಕಾಗಿ ಒಂದನ್ನು ಒತ್ತಿʼ ಖ್ಯಾತಿಯ ಕೃಷಿ ತಾಪಂಡ : ಫೋಟೋಸ್‌ ವೈರಲ್‌

ಬಿಟೌನ್‌ ಸ್ಟಾರ್‌ ಅತಿಲೋಕ ಸುಂದರಿ ನಟಿ ಶ್ರಿದೇವಿ ಪುತ್ರಿ ಜಾನ್ವಿ ಕಪೂರ್ 2018 ರಲ್ಲಿ ಧಡಕ್‌ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇತ್ತೀಚೆಗೆ ‘ಮಿಲ್ಲಿ’ ಸಿನಿಮಾದಲ್ಲಿ ಕಾಣಿಸಿಕೊಂಡು ವಿಮರ್ಶಕರ ಮನ ಗೆದ್ದರು. ಕೊನೆಯದಾಗಿ ವರುಣ್ ಧವನ್ ಜೊತೆ 'ಬವಾಲ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಟಾಲಿವುಡ್ ಸ್ಟಾರ್ ಹೀರೋ ಜೂನಿಯರ್ ಎನ್‌ಟಿಆರ್ ಜೊತೆ 'ದೇವರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಜಾನ್ವಿ ಕಪೂರ್ ಹಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಕ್ಯಾಮೆರಾಗಳು ನನ್ನ ಜೀವನದ ಒಂದು ಭಾಗ. ನನ್ನ ಸಹೋದರಿ ಖುಷಿ ಕಪೂರ್ ನಾನು ಬಾಲ್ಯದಿಂದಲೂ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದೆವು. ಕೆಲವರು ನಮ್ಮ ಅನುಮತಿ ಇಲ್ಲದೇ ಫೋಟೋ ತೆಗೆಯುತ್ತಿದ್ದರು. ಆ ಫೋಟೋಗಳನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. 

ಇದನ್ನೂ ಓದಿ: ಡ್ಯಾನ್ಸರ್ ಕಿಶನ್ ಜತೆ ಸಂಯುಕ್ತಾ ಬೋಲ್ಡ್​ ಡಾನ್ಸ್​​; ಸಂಸ್ಕೃತಿ ಹಾಳುಮಾಡಬೇಡ ಎಂದ ನೆಟಿಜನ್ಸ್‌!!

ಒಮ್ಮೆ ನಮ್ಮ ಫೋಟೋಗಳನ್ನು ಮಾರ್ಫ್ ಮಾಡಿ ಕೆಲವು ಪೋರ್ನ್ ಸೈಟ್‌ಗಳಲ್ಲಿ ಹಾಕಲಾಗಿತ್ತು. ಅವುಗಳನ್ನು ನೋಡಿ ನಾವು ಬೆಚ್ಚಿಬಿದ್ದೆವು. ಈಗ ಡಿಜಿಟಲ್ ಯುಗದಲ್ಲಿ ಫೋಟೋಗಳನ್ನು ಮಾರ್ಫಿಂಗ್ ಮಾಡುವ ಹಾವಳಿ  ಸಾಮಾನ್ಯವಾಗಿಬಿಟ್ಟಿದೆ. ಈ ಫೋಟೋಗಳು ನಿಜವಾದವು ಎಂದು ಜನರು ನಂಬುತ್ತಾರೆ. ಇಂತಹ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಅಲ್ಲದೆ ಇತ್ತೀಚಿಗೆ AI ನಿಂದ ಫೋಟೋಗಳನ್ನು ಬಹಳ ಸುಲಭವಾಗಿ ಮಾರ್ಫಿಂಗ್ ಮಾಡಬಹುದು. ಇದರಿಂದಾಗಿ ಬೆದರಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸದ್ಯ ನಟಿ ಜಾನ್ವಿ ರಾಜ್‌ಕುಮಾರ್ ರಾವ್ ಅವರೊಂದಿಗೆ 'ಮಿಸ್ಟರ್ & ಮಿಸಸ್ ಮಹಿ', ಜೂನಿಯರ್ ಎನ್‌ಟಿಆರ್ ಜೊತೆ 'ದೇವರ', ರೋಷನ್ ಮ್ಯಾಥ್ಯೂ ಮತ್ತು ಗುಲ್ಶನ್ ದೇವಯ್ಯ ಅವರೊಂದಿಗೆ 'ಉಲಾಜ್' ​​ಚಿತ್ರದಲ್ಲಿ ನಟಿಸುತ್ತಿದ್ದಾರೆ.     

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News