ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ NTR ಗೈರು.! ಸಿಎಂ ಅಳಿಯನಿಗೇ ಆಹ್ವಾನ ನೀಡಿಲ್ಲವೇ..?

JR Ntr not attended Chandrababu swearing ceremony : ಎಪಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ತೆಲುಗು ದೇಶಂ ಮತ್ತು ಜನೇಸೇನಾ ಒಕ್ಕೂಟ ಗೆಲುವು ಸಾಧಿಸಿವೆ. ಈ ಸಂದರ್ಭದಲ್ಲಿ ನಟ ಜೂ.ಎನ್‌ಟಿಆರ್‌ ಮಾವ ಚಂದ್ರಬಾಬು ನಾಯ್ಡು ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದಾರೆ. ಆದರೆ ನಾಯ್ಡು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜೂ.ಎನ್‌ಟಿಆರ್‌ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ..

Written by - Krishna N K | Last Updated : Jun 12, 2024, 04:42 PM IST
    • ಎಪಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ತೆಲುಗು ದೇಶಂ ಮತ್ತು ಜನೇಸೇನಾ ಒಕ್ಕೂಟ ಗೆಲುವು ಸಾಧಿಸಿವೆ.
    • ಚಂದ್ರಬಾಬು ನಾಯ್ಡು ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದಾರೆ.
    • ನಾಯ್ಡು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜೂ.ಎನ್‌ಟಿಆರ್‌ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ..
ನಾಯ್ಡು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ NTR ಗೈರು.! ಸಿಎಂ ಅಳಿಯನಿಗೇ ಆಹ್ವಾನ ನೀಡಿಲ್ಲವೇ..?  title=

JR Ntr : ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಟ ಜೂನಿಯರ್ ಎನ್‌ಟಿಆರ್‌ಗೆ ಚಂದ್ರಬಾಬು ನಾಯ್ಡು ಆಹ್ವಾನ ನೀಡಿಲ್ಲ..? ಎಂಬ ವಿಚಾರ ಟಾಲಿವುಡ್‌ ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ವರದಿ ಇಲ್ಲಿದೆ ನೋಡಿ.

ಇತ್ತೀಚೆಗೆ ನಡೆದ ಎಪಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ತೆಲುಗು ದೇಶಂ ಮತ್ತು ಜನೇಸೇನಾ ಒಕ್ಕೂಟ ಗೆಲುವು ಸಾಧಿಸಿವೆ. ಈ ಸಂದರ್ಭದಲ್ಲಿ ನಟ ಜೂ.ಎನ್‌ಟಿಆರ್‌ ಮಾವ ಚಂದ್ರಬಾಬು ನಾಯ್ಡು  ಭರ್ಜರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದಾರೆ. ಆದರೆ ನಾಯ್ಡು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಜೂ.ಎನ್‌ಟಿಆರ್‌ ಕಾಣಿಸಿಕೊಳ್ಳದಿರುವುದು ಚರ್ಚೆಗೆ ಕಾರಣವಾಗಿದೆ..

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಬಳಿಕ ಸರೆಂಡರ್ ಆಗಲು 30 ಲಕ್ಷ ರೂ. ಡೀಲ್‌..! ಸ್ಪೋಟಕ ಮಾಹಿತಿ ಬಹಿರಂಗ

ಹೌದು.. ತೆಲುಗು ಚಿತ್ರರಂಗದ ಎಲ್ಲರಿಗೂ ಅದರಲ್ಲೂ ನಂದಮೂರಿ ಕುಟುಂಬದವರಿಗೆ ಚಂದ್ರಬಾಬು ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಅಲ್ಲದೆ, ಪವನ್ ಕಲ್ಯಾಣ್, ಮೆಗಾ ಕುಟುಂಬಕ್ಕೆ ಸೇರಿದವರಾಗಿರುವುದರಿಂದ ಚಿರು ಸೇರಿ ಅವರ ಕುಟುಂಬಸ್ಥರಿಗೂ ಆಹ್ವಾನಗಳು ಬಂದಿವೆ. ಆದರೆ ನಂದಮೂರಿ ಮೂರನೇ ತಲೆಮಾರಿನ ಟಾಪ್ ನಾಯಕನಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿರುವ ತಾರಕ್ (JR. NTR) ಗೆ ಆಹ್ವಾನ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.. 

ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಂಪುಟ ಸಚಿವರು ಹಾಗೂ ಎನ್‌ಡಿಎ ನಾಯಕರು ಪಾಲ್ಗೊಂಡಿದ್ದರು. ಇನ್ನೊಂದೆಡೆ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ವಿಶೇಷ ಆಹ್ವಾನ ಬಂದಿದೆ. ಈ ಹಿನ್ನಲೆಯಲ್ಲಿ ಜೂನಿಯರ್ ಎನ್‌ಟಿಆರ್ ಅವರನ್ನು ಈ ಸಮಾರಂಭಕ್ಕೆ ಆಹ್ವಾನಿಸದೆ ಚಂದ್ರಬಾಬು ಅಂಡ್ ಟೀಂ ಪಕ್ಕಕ್ಕೆ ಇಟ್ಟಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆ

ಇನ್ನು ಚಂದ್ರಬಾಬು ಪತ್ನಿ ಹಾಗೂ ಚಿಕ್ಕಮ್ಮ ಭುವನೇಶ್ವರಿ ವಿರುದ್ಧ ವೈಸಿಪಿ ಮುಖಂಡರು ವಾಗ್ದಾಳಿ ನಡೆಸಿದರೂ ಜೂನಿಯರ್ ಎನ್‌ಟಿಆರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮತ್ತೊಂದೆಡೆ, ಎನ್‌ಟಿಆರ್ ಆರೋಗ್ಯ ವಿಶ್ವವಿದ್ಯಾಲಯದ ಹೆಸರನ್ನು ವೈಎಸ್‌ಆರ್ ಆರೋಗ್ಯ ವಿಶ್ವವಿದ್ಯಾಲಯ ಎಂದು ಬದಲಾಯಿಸಿದ್ದಕ್ಕೆ ತೆಲುಗು ದೇಶಂ ಪಾರ್ಟಿ ನಾಯಕರು ತೀವ್ರವಾಗಿ ಖಂಡಿಸಿದ್ದರು. ಆದರೆ ಎನ್‌ಟಿಆರ್ ಮತ್ತು ವೈಎಸ್‌ಆರ್ ಇಬ್ಬರು ಶ್ರೇಷ್ಠರು ಎಂದು ಹೇಳಿಕೆ ನೀಡಿದ್ದ ತಾರಕ್‌ಗೆ ಟಿಡಿಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗೆ ಹಲವಾರು ಕಾರಣಕ್ಕಾಗಿ ಜೂನಿಯರ್ ಎನ್‌ಟಿಆರ್‌ ಅವರನ್ನು ಪಕ್ಕಕ್ಕೆ ಇಟ್ಟಂತೆ ಕಾಣುತ್ತಿದೆ ಎನ್ನಲಾಗುತ್ತಿದೆ.

ಇಷ್ಟೇ ಅಲ್ಲದೆ, ಎನ್‌ಟಿಆರ್ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ಸಹ ತಾರಕ್‌ಗೆ ಆಹ್ವಾನ ನೀಡಿರಲಿಲ್ಲ. ಒಟ್ಟಾರೆಯಾಗಿ, ಚಂದ್ರಬಾಬು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಜೂನಿಯರ್ ಎನ್‌ಟಿಆರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಇದು ನಂದಮೂರಿ ಕುಟುಂಬದ ಅಭಿಮಾನಿಗಳಿಗೂ ಬೇಸರ ತಂದಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News