Kalki 2898 AD: ರಿಲೀಸ್‌ಗೂ ಮುನ್ನವೇ ಕಲ್ಕಿ ಟೀಸರ್ ವಿಡಿಯೋ ಲೀಕ್.. ಚಿತ್ರದಲ್ಲಿ ಪ್ರಭಾಸ್‌ ಪಾತ್ರ ಇದೇ!

Kalki 2898 AD Teaser Leak: ಇತ್ತೀಚೆಗಷ್ಟೇ ಪ್ರಭಾಸ್‌ ಅಭಿನಯದ ಸಲಾರ್‌ ರಿಲೀಸ್‌ ಆಗಿ ಭರ್ಜರಿ ಸೌಂಡ್‌ ಮಾಡಿತ್ತು.. ನಂತರ ಡಾರ್ಲಿಂಗ್‌ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಅದೇ ಕಲ್ಕಿ ಸಿನಿಮಾ.. ಇದೀಗ ಈ ಚಿತ್ರದ ಟೀಸರ್ ವಿಡಿಯೋ ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.. 

Written by - Savita M B | Last Updated : Jan 13, 2024, 07:21 AM IST
  • 'ಕಲ್ಕಿ 2898AD' ಚಿತ್ರವು ಹಿಂದೂ ಪುರಾಣವನ್ನು ಆಧರಿಸಿದ ವೈಜ್ಞಾನಿಕ ಥ್ರಿಲ್ಲರ್ ಆಗಿದೆ
  • ಪ್ರಭಾಸ್ ನಟಿಸಿರುವ ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ.
  • ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
Kalki 2898 AD: ರಿಲೀಸ್‌ಗೂ ಮುನ್ನವೇ ಕಲ್ಕಿ ಟೀಸರ್ ವಿಡಿಯೋ ಲೀಕ್.. ಚಿತ್ರದಲ್ಲಿ ಪ್ರಭಾಸ್‌ ಪಾತ್ರ ಇದೇ!  title=

Kalki 2898 AD Teaser: 'ಕಲ್ಕಿ 2898AD' ಚಿತ್ರವು ಹಿಂದೂ ಪುರಾಣವನ್ನು ಆಧರಿಸಿದ ವೈಜ್ಞಾನಿಕ ಥ್ರಿಲ್ಲರ್ ಆಗಿದೆ.. ಪ್ರಭಾಸ್ ನಟಿಸಿರುವ ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ಸಂಕ್ರಾಂತಿ ಹಬ್ಬಕ್ಕೆ ಬರಬೇಕಿತ್ತು. ಆದರೆ ಶೂಟಿಂಗ್ ಮತ್ತು ಗ್ರಾಫಿಕ್ಸ್ ಕೆಲಸ ವಿಳಂಬವಾದ ಕಾರಣ ತಡವಾಯಿತು. ಸದ್ಯ ಚಿತ್ರೀಕರಣ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ... 

ಇನ್ನು ಇತ್ತೀಚೆಗೆಷ್ಟೇ ಈ ಸಿನಿಮಾದ ಟೀಸರ್‌ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿತ್ತು.. ಅದರ ಪ್ರಕಾರ ಜನವರಿ 13 ರಂದು ಅಂದರೆ ಇಂದು ಈ ಚಿತ್ರದ ಟೀಸರ್‌ ರಿಲೀಸ್‌ಗೆ ಸಮಯ ನಿಗದಿ ಪಡಿಸಲಾಗಿತ್ತು.. ಇದೀಗ ಆ ಟೀಸರ್ ಗೆ ಸಂಬಂಧಿಸಿದ ವಿಡಿಯೋವೊಂದು ಲೀಕ್ ಆಗಿದ್ದು.. ಅದರಲ್ಲಿ ಸಿನಿಮಾ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. 

ಇದನ್ನೂ ಓದಿ-Bigg Boss ಫಿನಾಲೆಗೆ ನೇರ ಪ್ರವೇಶ ಪಡೆದ ಮೊದಲ ಸ್ಪರ್ಧಿ ಇವರೇ.. ಘಟಾನುಘಟಿಗಳನ್ನೇ ಹಿಂದಿಕ್ಕಿದ ಈ ಗಟ್ಟಿಗಿತ್ತಿ ಯಾರು ಗೊತ್ತಾ?

ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಮೇ 9ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಮಹಾನಟಿ ಮತ್ತು ಮಹರ್ಷಿ ಚಿತ್ರಗಳು ಮೇ 9 ರಂದೇ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿವೆ.. ಸದ್ಯ 50 ಪ್ರಶಸ್ತಿಗಳನ್ನು ಪೂರೈಸುತ್ತಿರುವ ಈ ವೈಜಯಂತಿ ಮೂವೀಸ್ ತನ್ನ ಮುಂಬರುವ ಕಲ್ಕಿ ಚಿತ್ರವನ್ನು ಮೇ 9ಕ್ಕೆ ರಿಲೀಸ್‌ ಮಾಡುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.. 

ಸದ್ಯ ಬಿಡುಗಡೆಯಾಗಲಿರುವ ಟೀಸರ್‌ ಸುಮಾರು 1 ನಿಮಿಷ 23 ಸೆಕೆಂಡ್‌ಗಳಷ್ಟು ಇರಲಿದೆ ಎನ್ನಲಾಗಿದೆ.. ಸೂಪರ್ ಹೀರೋ ಪರಿಕಲ್ಪನೆಯೊಂದಿಗೆ ಫ್ಯೂಚರಿಸ್ಟಿಕ್ ಸಿನಿಮಾವಾಗಿ ತಯಾರಾಗಿರುವ ಈ ಸಿನಿಮಾದಲ್ಲಿ ಬಳಸಿದ ತಂತ್ರಜ್ಞಾನ, ಆಯುಧಗಳು, ಟ್ರೋಪ್ ಗಳು, ವೇಷಭೂಷಣಗಳು... ಹೀಗೆ ಭವಿಷ್ಯದಲ್ಲಿ ಎಲ್ಲವೂ ಹೇಗೆ ಬದಲಾಗಬಹುದು ಎಂಬುದನ್ನು ಭಾರತೀಯ ಮೂಲದಿಂದಲೇ ರೂಪಿಸಲಾಗಿದ್ದು.. ಒಟ್ಟಾರೆಯಾಗಿ ಟೀಸರ್ ಮೂಲಕ ಎಲ್ಲರಿಗೂ ಆ ಕಾಲ್ಪನಿಕ ಲೋಕದ ಪರಿಚಯವಾಗಲಿದೆ.

ಇದನ್ನೂ ಓದಿ-Bigg Boss: ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸ್ತಾರಂತೆ ತುಕಾಲಿ! ಕಳಪೆ ಪಟ್ಟ ಪಡೆದ ಸಂತುಗೆ ಪಂತು ಆಶೀರ್ವಾದ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News