Ramesh Arvind: ಚಂದನವನದ ಖ್ಯಾತ ನಟ ರಮೇಶ್‌ ಅರವಿಂದ್‌ಗೆ ಮಂತ್ರಾಲಯದ ಪರಿಮಳ ಪ್ರಶಸ್ತಿ!!

Ramesh Arvind Got Award: ಕನ್ನಡ ಚಿತ್ರರಂಗದ ಖ್ಯಾತ ನಟ ನಟ ರಮೇಶ್‌ ಅರವಿಂದ್‌ಗೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದಲ್ಲಿ ಮಂತ್ರಾಲಯ ಪರಿಮಳ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  

Written by - Zee Kannada News Desk | Last Updated : Mar 19, 2024, 10:48 AM IST
  • ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ ನಡೆದಿದ್ದು, ಆ ಸಮಾರಂಭದಲ್ಲಿ ರಮೇಶ್‌ ಅರವಿಂದ್‌ಗೆ ಮಂತ್ರಾಲಯ ಪರಿಮಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  • ರಾಯರ ಭಕ್ತರಾದ ಡಾ. ರಾಜಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಪುನೀತ್ ರಾಜಕುಮಾರ್, ಡಾ. ಶಿವರಾಜ್ ಕುಮಾರ್, ದರ್ಶನ್ ತೂಗುದೀಪ ಅವರೆಲ್ಲರಿಗೂ ಸಿಕ್ಕಿತ್ತು.
  • ನಟ ರಮೇಶ್‌ ಅರವಿಂದ್‌ ಆಯ್ಕೆ ಮಾಡುವ ಕಥೆಗಳು ತುಂಬಾ ಚೆನ್ನಾಗಿಯೇ ಮೋಟಿವೇಷನ್ ಆಗುವಂತೆ ಇರುತ್ತಿದ್ದು, ಈ ಚಿತ್ರಕಥೆಗಳು ಪ್ರೇಕ್ಷಕರಿಗೆ ಸ್ಪೂರ್ತಿಯನ್ನು ಕೊಡುತ್ತವೆ.
Ramesh Arvind: ಚಂದನವನದ ಖ್ಯಾತ ನಟ ರಮೇಶ್‌ ಅರವಿಂದ್‌ಗೆ ಮಂತ್ರಾಲಯದ ಪರಿಮಳ ಪ್ರಶಸ್ತಿ!! title=

Ramesh Aravind Got Mantralaya Parimala Award: ಸ್ಯಾಂಡಲ್‌ವುಡ್‌ನ ಹೆಸರಾಂತ ನಟ ರಮೇಶ್‌ ಅರವಿಂದ್‌ಗೆ ಮಂತ್ರಾಲಯ ಪರಿಮಳ ಪ್ರಶಸ್ತಿ ದೊರಕಿದೆ. ಮೊನ್ನೆ ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವ ನಡೆದಿದ್ದು, ಆ ಸಮಾರಂಭದಲ್ಲಿ ರಮೇಶ್‌ ಅರವಿಂದ್‌ಗೆ ಮಂತ್ರಾಲಯ ಪರಿಮಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದಕ್ಕೂ ಮುಂಚೆ ಕನ್ನಡದ ಹಲವಾರು ಹೆಸರಾಂತ ಕಲಾವಿದರಿಗೂ ಈ ಮಂತ್ರಾಲಯದ ಪರಿಮಳ ಪ್ರಶಸ್ತಿ ದಕ್ಕಿತ್ತು. ಶ್ರೀ ಗುರುರಾಘವೇಂದ್ರ ರಾಯರ ಭಕ್ತರಾದ ಡಾ. ರಾಜಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್, ಪುನೀತ್ ರಾಜಕುಮಾರ್, ಡಾ. ಶಿವರಾಜ್ ಕುಮಾರ್, ದರ್ಶನ್ ತೂಗುದೀಪ ಅವರೆಲ್ಲರಿಗೂ ಸಿಕ್ಕಿತ್ತು. ಮತ್ತೆ ಈ ಒಂದು ಪ್ರಶಸ್ತಿಯನ್ನು ಸುಧಾಮೂರ್ತಿಗೂ ಕೊಟ್ಟು ಗೌರವಿಸಲಾಗಿದೆ.

 
 
 
 

 
 
 
 
 
 
 
 
 
 
 

A post shared by Ramesh Aravind (@ramesh.aravind.official)

ಇದನ್ನೂ ಓದಿ: Shilpa Shetty : ವಿಭಿನ್ನ ಬ್ಲ್ಯಾಕ್ ಡ್ರೆಸ್ ನಲ್ಲಿ "ಪ್ರೀತ್ಸೊದ್ ತಪ್ಪಾ" ಚಂದು : ಫೋಟೋಸ್ ಇಲ್ಲಿವೆ

ಮಂತ್ರಾಲಯ ಪರಿಮಳ ಪ್ರಶಸ್ತಿ ಪಡೆದ ಕನ್ನಡದ ಹೆಸರಾಂತ ಕಲಾವಿದರೆಲ್ಲರಿಗೂ ರಾಯರ ಕೃಪೆ ಕೂಡ ಇದ್ದು, ಇದೀಗ ನಟ-ನಿರ್ದೇಶಕ ರಮೇಶ್‌ ಅರವಿಂದ ಈ ಒಂದು ಪ್ರಶಸ್ತಿ ಪಡೆದುಕೊಂಡು ರಾಯರ ಕೃಪೆಗೆ ಪಾತ್ರರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟ ರಮೇಶ್ ಅರವಿಂದ್ ತಮ್ಮದೇ ವಿಶೇಷ ಛಾಪು ಮೂಡಿಸಿದವರು, ವಿಭಿನ್ನ ಕಥೆಗಳ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ನಟ ರಮೇಶ್‌ ಅರವಿಂದ್‌ ಆಯ್ಕೆ ಮಾಡುವ ಕಥೆಗಳು ತುಂಬಾ ಚೆನ್ನಾಗಿಯೇ ಮೋಟಿವೇಷನ್ ಆಗುವಂತೆ ಇರುತ್ತಿದ್ದು, ಈ ಚಿತ್ರಕಥೆಗಳು ಪ್ರೇಕ್ಷಕರಿಗೆ ಸ್ಪೂರ್ತಿಯನ್ನು ಕೊಡುತ್ತವೆ. ಇಂತಹ ಮೋಟಿವೇಷನಲ್ ಜೊತೆಗೆ ಶಿವರಾಜಿ ಸುರತ್ಕಲ್ ದಂತಹ ಸಿನಿಮಾ ಮಾಡಿದ್ದು, ಮೊದಲ ಸರಣಿಯ ಚಿತ್ರ ಒಂದು ಹಂತಕ್ಕೆ ಸಿನಿಪ್ರಿಯರನ್ನು ಸೆಳೆದಿದೆ. ಅದೇ ರೀತಿ ಈ ಸಿನಿಮಾದ ಎರಡನೇ ಸರಣಿಯು ಮತ್ತೊಂದು ರೀತಿಯಲ್ಲಿಯೇ ವೀಕ್ಷಕರನ್ನು ಗೆದ್ದಿದೆ. ಇದೀಗ ದೈಜಿ ಅನ್ನುವ ಮತ್ತೊಂದು ಸ್ಪೆಷಲ್‌ ಸಿನಿಮಾವನ್ನು ಮಾಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News