ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ತೇಜಸ್ವಿನಿ : ಬೇಬಿ ಬಂಪ್ಸ್ ಫೋಟೋಸ್‌ ಇಲ್ಲಿವೆ

ನಟಿ ತೇಜಸ್ವನಿ ಪ್ರಕಾಶ್‌ ಸಿನಿಮಾ ಹಾಗು ಸೀರಿಯಲ್‌ ಮೂಲಕ ಜನಪ್ರಿಯವಾದ ನಟಿ. ಈಕೆ ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್‌, ಆಕ್ಟಿಂಗ್‌ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಬಿಸಿಯಾಗಿರುವ ನಟಿಯರಲ್ಲಿ ಒಬ್ಬರು. ತೇಜಸ್ವಿನಿ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 

Written by - Krishna N K | Last Updated : Sep 30, 2023, 04:25 PM IST
  • ನಟಿ ತೇಜಸ್ವಿನಿ ಪ್ರಕಾಶ್‌ ಸಧ್ಯ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ.
  • ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಬೇಬಿ ಬಂಪ್ಸ್‌ ಫೋಟೋಸ್‌ ಹಂಚಿಕೊಂಡಿದ್ದಾರೆ.
  • ತೇಜಸ್ವಿನಿಗೆ ಅವರ ಅಭಿಮಾನಿಗಳು, ಸಿನಿಮಾ ತಾರೆಯರು ಶುಭ ಕೋರುತ್ತಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ತೇಜಸ್ವಿನಿ : ಬೇಬಿ ಬಂಪ್ಸ್ ಫೋಟೋಸ್‌ ಇಲ್ಲಿವೆ title=

Tejaswini Prakash : ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಮೊಡಿ ಮಾಡಿದ ನಟಿ ತೇಜಸ್ವಿನಿ ಪ್ರಕಾಶ್‌ ಸಧ್ಯ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಬೇಬಿ ಬಂಪ್ಸ್‌ ಫೋಟೋಸ್‌ ಹಂಚಿಕೊಂಡಿದ್ದಾರೆ. ತೇಜಸ್ವಿನಿಗೆ ಅವರ ಅಭಿಮಾನಿಗಳು, ಸಿನಿಮಾ ತಾರೆಯರು ಶುಭ ಕೋರುತ್ತಿದ್ದಾರೆ.

ಹೌದು.. ನಟಿ ತೇಜಸ್ವನಿ ಪ್ರಕಾಶ್‌ ಸಿನಿಮಾ ಹಾಗು ಸೀರಿಯಲ್‌ ಮೂಲಕ ಜನಪ್ರಿಯವಾದ ನಟಿ. ಈಕೆ ಚಿಕ್ಕ ವಯಸ್ಸಿನಿಂದಲೇ ಮಾಡೆಲಿಂಗ್‌, ಆಕ್ಟಿಂಗ್‌ನಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಬಿಸಿಯಾಗಿರುವ ನಟಿಯರಲ್ಲಿ ಒಬ್ಬರು. ತೇಜಸ್ವಿನಿ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಬಿಗ್‌ ಬಾಸ್‌ ಸೀಸನ್‌ 5ನಲ್ಲೂ ಸಹ ಭಾಗವಹಿಸಿದ್ದರು. 

 
 
 
 

 
 
 
 
 
 
 
 
 
 
 

A post shared by Tejaswini Prakash Nadimpally (@tejaswi_niprakash)

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 10 ಕ್ಕೆ ಇಂಡಿಯನ್‌ ಸ್ಟಾರ್‌ ಕ್ರಿಕೆಟರ್‌ ಎಂಟ್ರಿ!?

ತೇಜಸ್ವಿನಿ 2022ರ ಮಾರ್ಚ್‌ ತಿಂಗಳಲ್ಲಿ ಫಣಿ ವರ್ಮಾ ಅವರು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಗಾಗ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಹಾಗು ಕುಟುಂಬದ ಫೋಟೋಸ್ ಶೇರ್‌ ಮಾಡುವುದರ ಮೂಲಕ ಆಕ್ಟಿವ್‌ ಆಗಿ ಇದ್ದಾರೆ. ಕೆಳೆದ ಐದು ವರ್ಷಗಳಿಂದ ತೇಜಸ್ವಿನಿ ‌ʼರಾರ್ಬಟ್ʼ ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿರುವುದು ಬಿಟ್ಟು, ಬೇರೆ ಯಾವುದೇ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿಲ್ಲ. ಆದರೆ ಸೀರಿಯಲ್‌ ಹಾಗು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. 

ಸಧ್ಯ ನಟಿ ತೇಜಸ್ವಿನಿ ಪ್ರಕಾಶ್‌ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ತೇಜಸ್ವಿನಿ ಪ್ರಕಾಶ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ ಒಂದುವರೆ ವರ್ಷದ ನಂತರ ತೇಜಸ್ವಿನಿ - ಫಣಿ ದಂಪತಿ ಮೊದಲನೆಯ ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ಗುಡ್‌ನ್ಯೂಸ್‌ನ್ನು ತೇಜಸ್ವಿನಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್‌ ಮಾಡುವುದರ ಮೂಲಕ ಫ್ಯಾನ್ಸ್‌ ಜೊತೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಕನ್ನಡಕ್ಕೆ ಮತ್ತೋರ್ವ ಮಾಸ್ ಹೀರೋ ಎಂಟ್ರಿ

ನಟಿ ತೇಜಸ್ವಿನಿ ಖ್ಯಾತ ನಟರಾದ ಸಾಹಸ ಸಿಂಹ ವಿಷ್ಣುವರ್ಧನ್‌, ದರ್ಶನ್‌, ಪ್ರೇಮ್‌, ಗಣೇಶ, ಉಪೇಂದ್ರ ಅವರ ಸಿನಿಮಾಗಳಲ್ಲಿ ನಟಿಸಿದ್ದರು. ʼನನ್ನರಸಿ ರಾಧೆʼ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿ ನಿಹಾರಿಕಾ ಪಾತ್ರದ ಮೂಲಕ ಜನಮನ ಸೆಳೆದಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News