'ಸನ್ನಿ'ಯ ಹೊಸ ಸೇಸಮ್ಮನಿಗೆ 'ನೋ' ಎಂದ ಕನ್ನಡ ಸಂಘಟನೆಗಳು

    

Updated: Dec 15, 2017 , 04:01 PM IST
'ಸನ್ನಿ'ಯ ಹೊಸ ಸೇಸಮ್ಮನಿಗೆ 'ನೋ' ಎಂದ ಕನ್ನಡ ಸಂಘಟನೆಗಳು

ಬೆಂಗಳೂರು: ಸೇಸಮ್ಮಾ ಸೇಸಮ್ಮಾ ಬಾಗಿಲು ತೆಗೆಯಮ್ಮಾ ಎನ್ನುವ  ಹಾಡಿಗೆ ಹೆಜ್ಜೆ ಹಾಕಿ ಕನ್ನಡದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಸನ್ನಿ ಲಿಯೋನ್ ಗೆ ಈ ಸಾರಿ ಯಾಕೋ ಅದೃಷ್ಟ ಮತ್ತು ಟೈಮು ಎರಡು ಸರಿಯಿಲ್ಲ ಅಂತಾ ಕಾಣಿಸುತ್ತೆ, ಕಾರಣವಿಷ್ಟೇ ಹೊಸ ವರ್ಷದ ಪಾರ್ಟಿಗೆ ಆಗಮಿಸುತ್ತಿರುವ ಸನ್ನಿ ಲಿಯೋನ್ ಗೆ ಈ ಬಾರಿ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 

ಸನ್ನಿ ಲಿಯೋನಳ 'ಸನ್ನಿ ನೈಟ್ ಇನ್ ಬೆಂಗಳೂರು 2018' ಎನ್ನುವ ಕಾರ್ಯಕ್ರಮವನ್ನು ವಿರೋಧಿಸಿ ಕಳೆದ ಎರಡು ವಾರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೇನೆ ಎರಡನೆಯ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸಂಘದ  ಕಾರ್ಯದರ್ಶಿ ಸೈಯದ್ ಮಿನಾಜ್ ಪ್ರತಿಭಟನೆಯಲ್ಲಿ ಮಾತನಾಡುತ್ತಾ ಸನ್ನಿ ಲಿಯೋನ್ ಯಾರೆಂದು ನಮಗೆಲ್ಲರಿಗೂ ಗೊತ್ತಿದೆ,ಅವಳು ಭಾರತೀಯಳು ಅಲ್ಲ, ಕನ್ನಡಿಗಳು ಅಲ್ಲ, ನಮಗೆ ಅವಳ ಇತಿಹಾಸ ಗೊತ್ತಿದೆ. ಆದ್ದರಿಂದ ಇಲ್ಲಿಗೆ ಬಂದು ನಮ್ಮ ಸಂಸ್ಕೃತಿಗೆ ಧಕ್ಕೆ ತರಲು ನಾವು ಬಿಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.