Dont worry 2 : ʻಡೋಂಟ್‌ ವರಿ ಚಿನ್ನ.. ನಿನ್ನ ಟೈಂ ಬಂದೇ ಬರ್ತದೆʼ ಸಖತ್‌ ಇನ್‌ಸ್ಪೈರಿಂಗ್‌ ಆಗಿದೆ All Ok ಹೊಸ ಹಾಡು

Dont worry 2 Song : ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್‌ನಲ್ಲಿ ರಾಕ್‌ ಮಾಡುವ ಸಿಂಗರ್, ಕಂಪೋಸರ್ ALL OK ಇಂದು ಡೋಂಟ್‌ ವರಿ 2 ಸಾಂಗ್‌ನ್ನು ರಿಲೀಸ್‌ ಮಾಡಿದ್ದಾರೆ. ಇದೀಗ ಸದ್ದಿಲ್ಲದೆ ಈ ವಿಡಿಯೋ ಸಾಂಗ್ ಹೊರತಂದಿದ್ದಾರೆ.   

Written by - Chetana Devarmani | Last Updated : Mar 23, 2023, 04:32 PM IST
  • ʻಡೋಂಟ್‌ ವರಿ ಚಿನ್ನ.. ನಿನ್ನ ಟೈ ಬಂದೇ ಬರ್ತದೆʼ
  • ಸಖತ್‌ ಇನ್‌ಸ್ಪೈರಿಂಗ್‌ ಆಗಿದೆ All Ok ಹೊಸ ಹಾಡು
  • Dont worry 2 ಮೂಲಕ ಮತ್ತೆ ರಾಕ್‌ ಮಾಡಿದ ರ‍್ಯಾಪರ್ ಆಲ್‌ ಓಕೆ
Dont worry 2 : ʻಡೋಂಟ್‌ ವರಿ ಚಿನ್ನ.. ನಿನ್ನ ಟೈಂ ಬಂದೇ ಬರ್ತದೆʼ ಸಖತ್‌ ಇನ್‌ಸ್ಪೈರಿಂಗ್‌ ಆಗಿದೆ All Ok ಹೊಸ ಹಾಡು   title=
Kannada Rapper All Ok

Dont worry 2 : ಕನ್ನಡ ರ‍್ಯಾಪರ್ ಆಲ್‌ ಓಕೆ ಯಾರಿಗೆ ಗೊತ್ತಿಲ್ಲ ಹೇಳಿ. ಅವರ ಸಾಂಗ್‌ಗಳಿಗೆ ಜನ ಕಾದು ಕುಳಿತಿರುತ್ತಾರೆ. ಅದರಲ್ಲೂ ಅವರ ರ‍್ಯಾಪ್‌ಗಳಲ್ಲಿರುವ ಆ ಸ್ಫೂರ್ತಿ ಕೊಡೊ ಚಿಲ್ಲಿಂಗ್‌ ಫೀಲ್‌ ಬೇರೆಲ್ಲೂ ಸಿಗಲ್ಲ ಅಂದ್ರೆ ತಪ್ಪಾಗಲ್ಲ. ಜೀವನದಲ್ಲಿ ಏನೇ ಕಷ್ಟ ಬಂದರೂ ಚೀಂತಿಸದೆ ಮುಂದೆ ಸಾಗುತ್ತಿರಬೇಕು. ಅದನ್ನೇ ತಮ್ಮ ರ‍್ಯಾಪ್‌ ಮೂಲಕ ಅಚ್ಚುಕಟ್ಟಾಗಿ ಮನದಟ್ಟಾಗುವಂತೆ ಹೇಳೋದ್ರಲ್ಲಿ ಆಲ್‌ ಓಕೆ ಎತ್ತಿದ ಕೈ. ಇದೀಗ ಅಲೋಕ್‌ ಅವರ ಹೊಸ ಹಾಡು ರಿಲೀಸ್‌ ಆಗಿದೆ. 

ಇದನ್ನೂ ಓದಿ : Yash : ಜನ ಪ್ರತಿ ಹಂತದಲ್ಲೂ ಗೇಲಿ ಮಾಡ್ತಾರೆ.. ಮಾತಲ್ಲೇ ಜಡ್ಜ್​ ಮಾಡ್ತಾರೆ..!

ಡೋಂಟ್‌ ವರಿ.. ಡೋಂಟ್‌ ವರಿ ಚಿನ್ನ ಎನ್ನುತ್ತ ಅದ್ಭುತ ಸ್ಫೂರ್ತಿಯನ್ನು ಆಲ್‌ ಓಕೆ ನೀಡಿದ್ದಾರೆ. ಸೂಪರ್‌ ಲಿರಿಕ್ಸ್‌, ಆಲ್‌ ಓಕೆ ರ‍್ಯಾಪ್‌ ಸ್ಟೆಪ್‌ ಸಂಗೀತ ಪ್ರಿಯರ ಮನಗೆಲ್ಲುತ್ತಿದೆ. ಆಲ್ ಓಕೆ ಅಲಿಯಾಸ್‌ ಅಲೋಕ್ ಗಾಯನವಂತೂ ಕೇಳುಗನನ್ನು ಕುಣಿಸುತ್ತದೆ. ಆಲ್ ಓಕೆ ಸದಾ ಕನ್ನಡದಲ್ಲಿ ಹೊಸ ಮಾದರಿಯ ಆಲ್ಬಂ ಸಾಂಗ್ ಮಾಡುತ್ತಿರುತ್ತಾರೆ.  

ಹೊಸ ಪ್ರಯೋಗಗಳ ಮೂಲಕ ಯೂಟ್ಯೂಬ್‌ನಲ್ಲಿ ರಾಕ್‌ ಮಾಡುವ ಸಿಂಗರ್, ಕಂಪೋಸರ್ ALL OK ಇಂದು ಡೋಂಟ್‌ ವರಿ 2 ಸಾಂಗ್‌ನ್ನು ರಿಲೀಸ್‌ ಮಾಡಿದ್ದಾರೆ. ಇದೀಗ ಸದ್ದಿಲ್ಲದೆ ಈ ವಿಡಿಯೋ ಸಾಂಗ್ ಹೊರತಂದಿದ್ದಾರೆ. ಅದರ ಹೆಸರು 'ಡೋಂಟ್‌ ವರಿ 2'.  ಈ ಹಾಡಿಗೆ ಸಂಗೀತ ನೀಡಿ, ಸಾಹಿತ್ಯ, ಪರಿಕಲ್ಪನೆ, ನಿರ್ದೇಶನ, ನಿರ್ಮಾಣವನ್ನೂ ಅಲೋಕ್ ಮಾಡಿದ್ದಾರೆ. 

ಇದನ್ನೂ ಓದಿ : ರಕ್ತದಲ್ಲಿ ಐ ಲವ್‌ ಯು ಎಂದು ಪತ್ರ ಬರೆದ ಕಾವ್ಯ ಶಾಸ್ತ್ರಿ ಅಭಿಮಾನಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News