ಕಾಂತಾರ ಸೀಕ್ವೇಲ್ ಅಲ್ಲ ಪ್ರೀಕ್ವೇಲ್ ಮಾಡ್ತಿವಿ- ರಿಷಬ್ ಶೆಟ್ಟಿ

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ನಂತರ ಹೊಂಬಾಳೆ ಫಿಲಂಸ್ ಮುಟ್ಟಿದ್ದೆಲ್ಲ ಚಿನ್ನ ಆಗ್ತಿದೆ‌.. ಸಾವಿರ ಕೋಟಿಯ ಕೆಜಿಎಫ್ ನಂತ್ರ ನಾನೂರು  ಕೋಟಿಯ ಕಾಂತಾರ ಮಾಡಿ ಗೆದ್ದು ಬೀಗಿರುವ ಹೊಂಬಾಳೆ ಬಳಗ ಈಗ ಶೆಟ್ರು ಜೊತೆ ಕಾಂತಾರ ಪ್ರೀಕ್ವೇಲ್ ಗೆ ಫಿಕ್ಸ್ ಆಗಿದ್ದಾರೆ. 

Written by - YASHODHA POOJARI | Edited by - Yashaswini V | Last Updated : Mar 10, 2023, 11:24 AM IST
  • ರಿಷಬ್ ಶೆಟ್ಟಿ ಯಾವಾಗ ಕಾಂತಾರ ಪ್ರೀಕ್ವೆಲ್ ಅನೌನ್ಸ್ ಮಾಡಿದ್ರೋ ಆ ಗಳಿಗೆಯಿಂದಲೇ ಚಿತ್ರದ ಟೈಟಲ್ ಬಗ್ಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಕುತೂಹಲದ ಜೊತೆ ಗೊಂದಲವೂ ಕ್ರಿಯೇಟ್ ಆಗಿದೆ.
  • ಪ್ರೀಕ್ವೇಲ್ ಆದ ಕಾರಣ ಈ ಚಿತ್ರಕ್ಕೆ ಕಾಂತಾರ 2 ಅಂತ ಶೀರ್ಷೀಕೆ ಇಡ್ತಾರ ಅನ್ನೋದು ಈಗ ಎಲ್ಲರನ್ನೂ ಕಾಡ್ತಿದೆ‌‌..
  • ಜೊತೆಗೆ ಚಿತ್ರಕ್ಕೆ ಬೇರೆ ಟೈಟಲ್ ಫೈನಲ್ ಮಾಡ್ಕೊಂಡು ರಿಷಬ್ ಶೂಟಿಂಗ್ ಶುರು ಮಾಡಬಹುದಾ...
ಕಾಂತಾರ ಸೀಕ್ವೇಲ್ ಅಲ್ಲ ಪ್ರೀಕ್ವೇಲ್ ಮಾಡ್ತಿವಿ- ರಿಷಬ್ ಶೆಟ್ಟಿ  title=
Kantara 2

ಬೆಂಗಳೂರು: ಕಲಾತ್ಮಕ ಚಿತ್ರವಾಗಿ ಅರಳಿದ್ದ ಕಾಂತಾರ.. ಎಲ್ಲರ ಲೆಕ್ಕಾಚಾರ ಊಲ್ಟಾ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ.. ಕಾಂತಾರ ಗೆಲುವಿನ ಬೆನ್ನಲ್ಲೇ ರಿಷಬ್ ಶೆಟ್ರು  ಕಾಂತಾರ ಸೀಕ್ವೇಲ್ ಬದಲಿಗೆ ಪ್ರೀಕ್ವೆಲ್ ಅನೌನ್ಸ್ ಮಾಡಿ ಎಲ್ಲರ ಹುಬ್ಬೇರಿಸಿದ್ರು.. ಇದರ. ಬೆನ್ನಲ್ಲೇ  ಈ ಚಿತ್ರಕ್ಕೆ ರಿಷಬ್ ಯಾವ ಟೈಟಲ್ ಫೈನಲ್ ಮಾಡ್ತಾರೆ ಅನ್ನೋ ಯಕ್ಷಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.. ಆದ್ರೆ ಶೆಟ್ರು ಬಳಗ ಟೈಟಲ್ ಗುಟ್ಟನ್ನು ಎಲ್ಲು ಬಿಟ್ಟು ಕೊಟ್ಟಿರ್ಲಿಲ್ಲ.. ಆದರೆ ಕಾಂತಾರ ಪ್ರೀಕ್ವೇಲ್ ಟೈಟಲ್ ಬಗ್ಗೆ ಸಣ್ಣ ಸುಳಿವು ಸಿಕ್ಕಿದ್ದು, ಆ ಟೈಟಲ್ ಏನು ಅಂತ ತಿಳ್ಕೋ ಬೇಕಾದ್ರೆ ಮುಂದೆ ಓದಿ....

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ನಂತರ ಹೊಂಬಾಳೆ ಫಿಲಂಸ್ ಮುಟ್ಟಿದ್ದೆಲ್ಲ ಚಿನ್ನ ಆಗ್ತಿದೆ‌.. ಸಾವಿರ ಕೋಟಿಯ ಕೆಜಿಎಫ್ ನಂತ್ರ ನಾನೂರು  ಕೋಟಿಯ ಕಾಂತಾರ ಮಾಡಿ ಗೆದ್ದು ಬೀಗಿರುವ ಹೊಂಬಾಳೆ ಬಳಗ ಈಗ ಶೆಟ್ರು ಜೊತೆ ಕಾಂತಾರ ಪ್ರೀಕ್ವೇಲ್ ಗೆ ಫಿಕ್ಸ್ ಆಗಿದ್ದಾರೆ. ಕಾಂತಾರ ನಂತ್ರ ಹೊಂಬಾಳೆ ಜೊತೆ ರಿಷಬ್ ಸಿನಿಮಾ ಮಾಡೊದು ಪಕ್ಕಾ ಆದ್ಮೇಲೆ ಬಹುತೇಕ ಮಂದಿ ಕೆಜಿಎಫ್ ನಂತೆ ಕಾಂತಾರ ಸಿಕ್ವೇಲ್ ಮಾಡಿ ಅದಕ್ಕೆ ಕಾಂತಾರ 2 ಅಂತ ಟೈಟಲ್ ಫಿಕ್ಸ್ ಮಾಡ್ತಾರೆ ಅಂದು ಕೊಂಡವರೆ ಹೆಚ್ಚು. ಆದರೆ ಕಾಂತಾರ ಸೀಕ್ವೇಲ್ ಮಾಡಲ್ಲ, ನಾವು ಕಾಂತಾರ ಪ್ರೀಕ್ವೇಲ್ ಮಾಡ್ತಿವಿ ಅಂತ ಎಲ್ಲರ ಲೆಕ್ಕವನ್ನು ಉಲ್ಟಾ ಮಾಡಿದ್ರು ರಿಷಬ್ ಶೆಟ್ಟಿ..

ಇದನ್ನೂ ಓದಿ- ಸಾಕ್ಷ್ಯಚಿತ್ರವಾಗಿ ಬರುತ್ತಿದೆ ಕ್ರಿಕೆಟ್‌ ಮ್ಯಾಚ್‌ ಫಿಕ್ಸಿಂಗ್‌ ಕಹಾನಿ.. ಈ OTT ಯಲ್ಲಿ ವೀಕ್ಷಿಸಿ.!

ರಿಷಬ್ ಶೆಟ್ಟಿ ಯಾವಾಗ ಕಾಂತಾರ ಪ್ರೀಕ್ವೆಲ್ ಅನೌನ್ಸ್ ಮಾಡಿದ್ರೋ ಆ ಗಳಿಗೆಯಿಂದಲೇ ಚಿತ್ರದ ಟೈಟಲ್ ಬಗ್ಗೆ ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಕುತೂಹಲದ ಜೊತೆ ಗೊಂದಲವೂ ಕ್ರಿಯೇಟ್ ಆಗಿದೆ. ಪ್ರೀಕ್ವೇಲ್ ಆದ ಕಾರಣ ಈ ಚಿತ್ರಕ್ಕೆ ಕಾಂತಾರ 2 ಅಂತ ಶೀರ್ಷೀಕೆ ಇಡ್ತಾರ ಅನ್ನೋದು ಈಗ ಎಲ್ಲರನ್ನೂ ಕಾಡ್ತಿದೆ‌‌.. ಜೊತೆಗೆ ಚಿತ್ರಕ್ಕೆ ಬೇರೆ ಟೈಟಲ್ ಫೈನಲ್ ಮಾಡ್ಕೊಂಡು ರಿಷಬ್ ಶೂಟಿಂಗ್ ಶುರು ಮಾಡಬಹುದ ಅಂತ ಗಾಂಧಿನಗರ ಮಂದಿ ಮಾತನಾಡ್ತಿದ್ದಾರೆ.. ಆದ್ರೆ ಟೈಟಲ್ ವಿಚಾರವಾಗಿ
ಇನ್ನು ಎಲ್ಲೂ ತುಟಿಬಿಚ್ಚದ ರಿಷಬ್ ಕತೆ ಫೈನಲ್ ಆದ ನಂತ್ರ ಟೈಟಲ್ ರಿವೀಲ್ ಮಾಡಿ ಶೂಟಿಂಗ್ ಶುರು ಮಾಡ್ತಿವೀ ಅನ್ನೋ ರೆಡಿಮೇಡ್ ಆನ್ಸರ್ ರೆಡಿ ಮಾಡ್ಕೊಂಡ್ ಇದ್ದಾರೆ.

ಒಂದು ಕಡೆ ರಿಷಬ್ ಟೀಮ್ ಕತೆ ಪೊಣಿಸೋದ್ರಲ್ಲಿ ಬ್ಯುಸಿಯಾಗಿದ್ರೆ, ಮತ್ತೊಂದು ಕಡೆ ಹೊಂಬಾಳೆ ಫಿಲಂಸ್ ಚಿತ್ರಕ್ಕೆ ಯಾವ ಟೈಟಲ್ ವರ್ಕ್ ಆಗುತ್ತೆ.. ಈಗಾಗಲೇ ಗೆದ್ದು ಜನರ ಅಂಗಳದಲ್ಲಿ ಮಲ್ಲಿಗೆ ಹೂ ನಂತೆ ಅರಳಿ ಸುವಾಸನೆ ಬೀರ್ತಿರುವ ಕಾಂತಾರ ಟೈಟಲ್ ಅನ್ನು ಮತ್ತೆ ಬಳಸಿಕೊಂಡು.. ಕಾಂತಾರ 2 ಅಂತ ಫಿಕ್ಸ್ ಮಾಡಿದ್ರೆ ಬ್ಯುಸಿನೆಸ್ ದೃಷ್ಟಿಯಿಂದ ಸಖತ್ ವರ್ಕ್ ಆಗುತ್ತೆ ಅಂತ ಅಂದಾಜು ಮಾಡ್ತಿದ್ದಾರೆ. 

ಇದನ್ನೂ ಓದಿ- Kabzaa : ಬಾಲಿವುಡ್‌ನಲ್ಲೂ ಅರ್ಕೇಶ್ವರನದ್ದೇ ಆರ್ಭಟ ... ಬಿ-ಟೌನ್‌ನಲ್ಲೂ 'ಕಬ್ಜ' ಹವಾ!

ಯಾಕಂದ್ರೆ ಕೆಜಿಎಫ್ ನಂತ್ರ KGF 2. ಮಾಡಿ ಸಾವಿರ ಕೋಟಿಯನ್ನು ಜೋಳಿಗೆಗೆ‌ ಇಳಿಸಿರುವ ಹೊಂಬಾಳೆ ಫಿಲಂಸ್ ಕೆಜಿಎಫ್ ಸ್ಟಾಟರ್ಜಿಯಲ್ಲೇ ಕಾಂತಾರ ಪ್ರೀಕ್ವೇಲ್ ಗೂ ಕಾಂತಾರ 2 ಅಂತ ಟೈಟಲ್ ಇಡಲು ಬಹುತೇಕ ಫಿಕ್ಸ್ ಆಗಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.. ಆದ್ರೆ ಇದರ ಬಗ್ಗೆ ಇದುವರೆಗೂ ಹೊಂಬಾಳೆ ಫಿಲಂಸ್ ಆಗ್ಲಿ ,ರಿಷಬ್ ಶೆಟ್ಟಿಯಾಗಲಿ ಏನನ್ನೂ ರಿವೀಲ್ ಮಾಡಿಲ್ಲ. ವಿಶೇಷ ಅಂದ್ರೆ ಹೊಂಬಾಳೆ ಫಿಲಂಸ್ ಕಾಂತಾರ 2 ಟೈಟಲ್ ಅನ್ನು ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ ಅನ್ನೋ ಸುದ್ದಿ ಕೇಳಿಬರ್ತಿದೆ.

ಇದರ ಬೆನ್ನಲ್ಲೆ ಹೊಂಬಾಳೆ ಟೀಮ್ ಮತ್ತು ರಿಷಬ್ ಜೋಡಿಯ ಮುಂದಿನ ಚಿತ್ರ ಕಾಂತಾರ 2 ಅಂತ ಸಿನಿಮಾ ಪಂಡಿತರು ಅಂದಾಜು ಮಾಡ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News