Ram Charan's Birthday: ರಾಮ್ ಚರಣ್ ಆಸ್ಕರ್ ಪ್ರಶಸ್ತಿ ಬಳಿಕ ಹೈದರಾಬಾದ್ಗೆ ವಾಪಸ್ ಆಗುತ್ತಿದ್ದಂತೆ RC 15 ಸಿನಿಮಾ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಸೆಟ್ನಲ್ಲಿ ರಾಮ್ ಚರಣ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
Niharika conidela-Chaitanya: ಚಿರಂಜೀವಿ ಅವರ ತಮ್ಮನ ಮಗಳು ನಿಹಾರಿಕಾ ಕೊನಿಡೇಲಾ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯು ಹರಿದಾಡುತ್ತಿದೆ. ಈ ಜೋಡಿಗಳು 2020 ಡಿಸೆಂಬರ್ ರಲ್ಲಿ ಅದ್ದೂರಿ ಮದುವೆಯಾಗಿದ್ದರು.
Ram Charan About Virat Kohli Biopic: ರಾಮ್ ಚರಣ್ ಅವರ ಇತ್ತೀಚಿನ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕ್ರೀಡಾ ಸಿನಿಮಾದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ರಾಮ್‌ಚರಣ್ ಇರಲಿದ್ದಾರಾ ಎಂಬ ಅನುಮಾನಗಳಿಗೆ ಇದು ಕಾರಣವಾಗಿದೆ.
RRR Team in Oscars 2023 : ಆರ್‌ಆರ್‌ಆರ್ ಚಿತ್ರದಲ್ಲಿನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಬಂದಿರುವುದು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಆದರೆ ಇದೀಗ ಒಂದು ವಿಚಾರ ಹೊರಬಿದ್ದಿದೆ. ರಾಜಮೌಳಿ ಮತ್ತು ಅವರ ತಂಡಕ್ಕೆ ಉಚಿತ ಟಿಕೆಟ್ ನೀಡಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.
Ram Charan On Oscars 2023 : ಭಾರತದಲ್ಲಿ ಸೂಪರ್ ಹಿಟ್ ಆದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡು ಈ ಬಾರಿ ಆಸ್ಕರ್ ಅವಾರ್ಡ್ ಗೆದ್ದಿದೆ. ಇದರಿಂದಾಗಿ ಅದರ ಖ್ಯಾತಿ ವಿಶ್ವದೆಲ್ಲೆಡೆ ಹರಡಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಆಸ್ಕರ್‌ನ ಅನುಭವವನ್ನು ರಾಮ್ ಚರಣ್ ಹಂಚಿಕೊಂಡಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಸ್ಟೆಪ್ ಹಾಕದಿರಲು ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.
Jr NTR : ಆಸ್ಕರ್‌ನಲ್ಲಿ ಆರ್‌ಆರ್‌ಆರ್‌ನ ಗೆಲುವು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಭಾರತದ ಇತಿಹಾಸದಲ್ಲಿ ನಾವು ಅತ್ಯಂತ ಹೆಮ್ಮೆಪಡುವ ಪ್ರಮುಖ ಕ್ಷಣಕ್ಕೆ ಸಾಕ್ಷಿಯಾಗಿದ್ದು ಗೊತ್ತೆ ಇದೆ. ಅದರ ನಡುವೆಯೂ ಜೂನಿಯರ್ ಎನ್‌ಟಿಆರ್ ಧರಿಸಿದ್ದ ಬಟ್ಟೆಯ ಮೇಲೆ ಹುಲಿ ಚಿಹ್ನೆಯೊಂದು ಛಾಯಾಗ್ರಾಹಕರ ಹಾಗೂ ಅಭಿಮಾನಿಗಳಲ್ಲಿ ಬಾರಿ ಕೂತುಹಲ ಮೂಡಿಸಿದೆ.
Ram Charan-Upasana Kamineni: ಇನ್ನು ಈ ಸಮಾರಂಭಕ್ಕೆ ರಾಮ್ ಚರಣ್, ಅವರ ಪತ್ನಿ ಉಪಾಸನಾ ಕಾಮಿನೇನಿ, ಜೂನಿಯರ್ ಎನ್ ಟಿ ಆರ್, ಎಸ್‌ಎಸ್ ರಾಜಮೌಳಿ, ರಾಹುಲ್ ಸಿಪ್ಲಿಗುಂಜ್, ಕಾಲ ಭೈರವ ಮತ್ತು ಎಂಎಂ ಕೀರವಾಣಿ ಆಗಮಿಸಿದ್ದರು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಉಪಾಸನಾ ಕಾಮಿನೇನಿ ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದರು.
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮುಂಬರುವ ಸಿನಿಮಾ ಆರ್‌ಸಿ 15ಗೆ ಕೊನೆಗೂ ಟೈಟಲ್ ಫಿಕ್ಸ್ ಆಗಿದೆ. ಆರ್‌ಆರ್‌ಆರ್ ಬಳಿಕ ರಾಮ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾಗೆ ಸಿಇಓ ಅಂತ ಹೆಸರಿಡಲಾಗಿದೆ ಎನ್ನುವ ಅಪ್‌ಡೆಟ್ ಲಭ್ಯವಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಎಸ್. ಶಂಕರ್ ಅವರು ನಿರ್ದೇಶಿಸಲಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೀಗ ರಾಜಮೌಳಿ ದೃಶ್ಯಕಾವ್ಯ ಲಾಸ್ ಏಂಜಲೀಸ್‌ನ ಪ್ರಸಿದ್ಧ 'ದಿ ಥಿಯೇಟರ್ ಅಟ್ ಏಸ್ ಹೋಟೆಲ್'ನಲ್ಲಿ ಪ್ರದರ್ಶಿಸಲಾಗುತ್ತಿದೆ. 1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಪ್ರದರ್ಶನದ ನಂತರ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ.
RRR: ರಾಜಮೌಳಿಯವರ RRR ನಿಂದ ಆಸ್ಕರ್ ನಾಮನಿರ್ದೇಶನಗೊಂಡ ಹಾಡು `ನಾಟು ನಾಟು' 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರ ಆಸ್ಕರ್ ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿದೆ.
ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ದೃಶ್ಯಕಾವ್ಯ ಆರ್‌ಆರ್‌ಆರ್ ಸಿನಿಮಾ ಗಡಿ ದಾಟಿ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈಗಾಗಲೇ ಸಾಲು ಸಾಲು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡು ಆಸ್ಕರ್ ಅಂಗಳಕ್ಕೆ ಕಾಲಿಟ್ಟಿರುವ ಆರ್‌ಆರ್‌ಆರ್ ಇತಿಹಾಸ ಸೃಷ್ಟಿಸುತ್ತಿದೆ. ಇದೀಗ ಪಾಕಿಸ್ತಾನ್ ನಟಿಯೊಬ್ಬರು ಆರ್‌ಆರ್‌ಆರ್ ಹಿಟ್ ಸಾಂಗ್ ನಾಟು ನಾಟು ಹಾಡಿಗೆ ಸಖತ್ ಸ್ಟೇಪ್ ಹಾಕಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆರ್‌ಆರ್‌ಆರ್ ಚಿತ್ರತಂಡಕ್ಕೆ ಈಗ ಸುಗ್ಗಿ ಕಾಲ. ಸಾಲು ಸಾಲು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರ್ತಿವೆ. ಇತ್ತೀಚಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಪಾತ್ರವಾಗಿದ್ದ ರಾಜಮೌಳಿ ಚಿತ್ರತಂಡ ಇದೀಗ ಆಸ್ಕರ್ ಅಂಗಳದಲ್ಲಿದೆ. ಇನ್ನು ಇದೇ ವೇಳೆ ಈ ʼನಾಟು ನಾಟುʼ ಹಾಡಿನ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ನಿರ್ದೇಶಕ ರಾಜಮೌಳಿ, ಸುದೀರ್ಘ ಬರಹದ ಮೂಲಕ ಕೀರವಾಣಿಯವರನ್ನು ಹಾಡಿ ಹೊಗಳಿದ್ದಾರೆ.
ಆರ್‌ಆರ್‌ಆರ್ ಸಿನಿಮಾ ಅಶ್ವಮೇಧದ ಕುದುರೆಯಂತೆ ಒಂದರ ಮೇಲೊಂದು ದಾಖಲೆ ಬರೆಯುತ್ತ ಸಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ರಾಜಮೌಳಿ ನಿರ್ದೇಶನದ ಚಿತ್ರ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು. ಅತ್ಯುತ್ತಮ ಒರಿಜಿನಲ್ ಹಾಡಿಗಾಗಿ ಈ ಪ್ರಶಸ್ತಿ ಬಂದಿತ್ತು. ನಾಟು ನಾಟು ಹಾಡಿಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ತಂಡದ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.
ಸ್ಟಾರ್ ಡೈರೆಕ್ಟರ್ ಎಸ್. ಎಸ್. ರಾಜಮೌಳಿ ಚಿತ್ರ ಆರ್‌ಆರ್‌ಆರ್ ಭಾರತ ಮತ್ತು ವಿದೇಶಗಳಲ್ಲಿಯೂ ಅದ್ಬುತ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಕಳೆದ ವಾರವಷ್ಟೇ, ಈ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ 2023 ಅತ್ಯುತ್ತಮ ಒರಿಜಿನಲ್ ಸಾಂಗ್ ಎಂಬ ಪ್ರಶಸ್ತಿ ಬಂದಿತ್ತು. ಈ ಮೂಲಕ ರಾಜಮೌಳಿ ಸಿನಿಮಾ ಇತಿಹಾಸವನ್ನು ನಿರ್ಮಿಸಿತು. ಅಲ್ಲದೆ, ಆಸ್ಕರ್ ಅಂಗಳದಲ್ಲಿಯೂ ಈ ಸಿನಿಮಾದ ಹೆಸರು ಕೇಳಿ ಬರುತ್ತಿದೆ.
ಎಮ್‌ಎಮ್ ಕೀರವಾಣಿ ಸಂಯೋಜನೆಯ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡಿಗೆ ಜನವರಿ 10 ರಂದು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಶಾರುಖ್ ಖಾನ್, ಚಿರಂಜೀವಿ, ಆಲಿಯಾ ಭಟ್ ಮತ್ತು ಎಆರ್ ರೆಹಮಾನ್ ರಾಜಮೌಳಿ ತಂಡವನ್ನು ಅಭಿನಂದಿಸಿದ್ದರು. ಇದೀಗ ಟೈಗರ್ ಶ್ರಾಫ್ ಅವರು ಈ ಅದ್ಭುತ ಸಾಧನೆಗೆ ಪರಿಪೂರ್ಣ ನೃತ್ಯ ಗೌರವ ಸೂಚಿಸಿದ್ದಾರೆ.
Golden Globe Awards: RRR ಚಿತ್ರದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿಯವರು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ ಎಸ್.ಎಸ್.ರಾಜಮೌಳಿ, ಜೂನಿಯರ್ NTR ಮತ್ತು ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಕಾಮಿನೇನಿ ಭಾಗಿಯಾಗಿದ್ದರು.
ಟಾಲಿವುಡ್ ಸ್ಟಾರ್ ರಾಮ್ ಚರಣ್ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಮ್ ಚರಣ್ ತಂದೆಯಾಗಲಿದ್ದಾರೆ. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಈ ಸಂತೋಷದ ಸುದ್ದಿಯನ್ನು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ ಉತ್ತರಾಧಿಕಾರಿ ಅಗಮನ ಇಬ್ಬರ ಸ್ಟಾರ್‌ಗಳ ಫಾಲೋವರ್ಸ್ ಖುಷಿಗೆ ಕಾರಣವಾಗಿದೆ.
Janhvi Kapoor : ಬಾಲಿವುಡ್‌ನ ಬಹುಬೇಡಿಕೆಯ ನಟಿ ಜಾನ್ವಿ ಕಪೂರ್. 2018 ರಲ್ಲಿ ಶಶಾಂಕ್ ಖೈತಾನ್ ಅವರ ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಇದೀಗ ಜಾನ್ವಿ ಸೌತ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.