ರೇಣುಕಸ್ವಾಮಿ ಏನ್‌ ಸತ್ಯ ಹರಿಶ್ಚದ್ರನಾ..? ಬುದ್ದಿ ಕಲಿಸಲು ಹೊಡೆದಿರಬೇಕು, ಅವನು ಸತ್ತ : ನಟಿ ಕಸ್ತೂರಿ

Renukaswamy murder case : ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಡಿ ಗ್ಯಾಂಗ್‌ ಬಂಧನವಾಗಿದೆ. ಸಧ್ಯ ಘಟನೆ ಕುರಿತು ಬಹುಭಾಷಾ ನಟಿ ಕಸ್ತೂರಿ ಪ್ರತಿಕ್ರಿಯೆ ನೀಡುವ ಮೂಲಕ ಡೆವಿಲ್‌ ಪರ ಬ್ಯಾಟ್‌ ಬೀಸಿದ್ದಾರೆ..

Written by - Krishna N K | Last Updated : Jun 15, 2024, 02:00 PM IST
    • ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ 17 ಜನರ ಬಂಧನ
    • ಈ ಕುರಿತು ಸಿನಿರಂಗದ ತಾರೆಯರು ಪ್ರತಿಕ್ರಿಯೆ ಸಹ ನೀಡುತ್ತಿದ್ದಾರೆ.
    • ದರ್ಶನ್‌ ಕೇಸ್‌ ಕುರಿತು ನಟಿ ಕಸ್ತೂರಿ ಶಂಕರ್‌ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಸ್ವಾಮಿ ಏನ್‌ ಸತ್ಯ ಹರಿಶ್ಚದ್ರನಾ..? ಬುದ್ದಿ ಕಲಿಸಲು ಹೊಡೆದಿರಬೇಕು, ಅವನು ಸತ್ತ : ನಟಿ ಕಸ್ತೂರಿ title=

Kasthuri Shankar on Darshan case : ರೇಣುಕಾಸ್ವಾಮಿ ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಈ ಕುರಿತು ಭಾರತೀಯ ಸಿನಿರಂಗದ ತಾರೆಯರು ಪ್ರತಿಕ್ರಿಯೆ ಸಹ ನೀಡುತ್ತಿದ್ದಾರೆ. ಇತ್ತೀಚಿಗೆ ನಟಿ ರಮ್ಯಾ ಈ ಪ್ರಕರಣದ ಕುರಿತು ಕಿಡಿಕಾರಿದ್ದರು. ಇದೀಗ ಬಹುಭಾಷಾ ನಟಿ ಕಸ್ತೂರಿ ಈ ಕುರಿತು ಧ್ವನಿ ಎತ್ತಿದ್ದಾರೆ..

ಹೌದು.. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿ ಹತ್ಯೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಡಿ ಗ್ಯಾಂಗ್‌ ಬಂಧನವಾಗಿದೆ. ಸಧ್ಯ ಘಟನೆ ಕುರಿತು ನಟಿ ಕಸ್ತೂರಿ ಪ್ರತಿಕ್ರಿಯೆ ನೀಡುವ ಮೂಲಕ ಡೆವಿಲ್‌ ಪರ ಬ್ಯಾಟ್‌ ಬೀಸಿದ್ದಾರೆ..

ಇದನ್ನೂ ಓದಿ :ರೇಣುಕಾ ಕೊಲೆ ಕೇಸ್‌ಗೆ ಪ್ರಬಲ ಸಾಕ್ಷ್ಯ: ದರ್ಶನ್‌ ಗ್ಯಾಂಗ್‌ ವಿರುದ್ಧ 21 ಮಹತ್ವದ ಎವಿಡೆನ್ಸ್‌!

ನಟಿ ಕಸ್ತೂರಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜಾಣ, ಇಬ್ಬರ ನಡುವೆ ಮುದ್ದಿನ ಆಟ, ತುತ್ತಾ ಮುತ್ತಾ, ಹಬ್ಬ ಸೇರಿದಂತೆ ಹಲವಾರು ಕನ್ನಡದ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಆರ್‌ಸಿಬಿ ಕುರಿತು ಟ್ಟೀಟ್‌ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ಇದೀಗ ದರ್ಶನ್‌ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಕಸ್ತೂರಿಯವರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಹೇಳಿದ್ದಾದ್ರೂ ಏನು..? 

ಇದನ್ನೂ ಓದಿ: ಈ ರೀತಿ ಕೊಲೆ ಮಾಡ್ತಾರೆ ಅಂತ ಗೊತ್ತಾಗಿದ್ದಿದ್ರೆ ನಾನೇ ಕಂಪ್ಲೆಂಟ್‌ ಕೊಡ್ತಿದ್ದೆ..! ಖಾಕಿ ಮುಂದೆ ಪವಿತ್ರಾ ಅಳಲು

ಪವಿತ್ರಾ ಗೌಡ ಅವರಿಗೆ ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ, ಪವಿತ್ರ ಗೌಡ - ದರ್ಶನ್‌ ಇಬ್ಬರು ಸಂಬಂಧದಲ್ಲಿದ್ದಾರೆ.. ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಸತ್ಯ ಹರಿಶ್ಚದ್ರನ ರೀತಿ ಆಡ್ತಾರೆ, ಅವರ ಜೀವನದಲ್ಲಿ ಏನಾಗುತ್ತಿದೆ ಅಂತ ನೋಡಿಕೊಳ್ಳಲ್ಲ.. ಹಾಗಂತ ನಾನು ಕ್ರೂರತೆಯನ್ನು ಬೆಂಬಲಿಸಲ್ಲ.

 

ರೇಣುಕಾಸ್ವಾಮಿ ಏನು ಒಳ್ಳೆಯವನಲ್ಲ, ಅವರಿಗೆ ದರ್ಶನ್‌ ಸಂಸಾರದಲ್ಲಿ ಮೂಗು ತೂರಿಸುವ ಅವಶ್ಯಕತೆ ಏನಿತ್ತು. ಓಕೆ ದರ್ಶನ್‌ ಕಳುಹಿಸಿದ್ದು ತಪ್ಪು, ಹಾಗಾದ್ರೆ ಇವನಿಗ್ಯಾಗೆ ಅವರ ಸಂಬಂಧದ ಕುರಿತು ಚಿಂತೆ, ಒಬ್ಬ ಸೆಲೆಬ್ರೆಇಟಿ ಲೈಫ್‌ನಲ್ಲಿ ಕಾಮೆಂಟ್‌ ಮಾಡಿ ಕಿರುಕುಳ ನೀಡುವ ಹಕ್ಕು ಇವನಿಗೆ ಯಾರು ಕೊಟ್ಟರು. 

ಇದನ್ನೂ ಓದಿ :ಬ್ಯಾರಿಕೇಡ್‌ ತೆರವಾಯ್ತು, ಶಾಮಿಯಾನ ಹಾಗೇ ಉಳಿತು..! ದರ್ಶನ್‌ ಕೇಸ್‌ನಲ್ಲಿ ಇದು ಪೊಲೀಸರ ನಡೆ

ಆದ್ರೆ ದರ್ಶನ್‌ ವಿಚಾರದಲ್ಲಿ ಇದು ತುಂಬಾ ದೂರ ಹೋಗಿದೆ, ದರ್ಶನ್‌ ಸ್ವಲ್ಪ ಮುಂಗೋಪಿ ಅವನಿಗೆ ಬುದ್ದಿ ಹೇಳಲು ಹೊಡೆದರು, ಹೀಗಾಗಿದೆ. ಮೊದಲು ಜನರು ಸೆಲೆಬ್ರಿಟಿಗಳ ಜೀವನದಲ್ಲಾಗುವ ಘಟನೆಗಳ ಬಗ್ಗೆ ಜಡ್ಜ್‌ ರೀರಿ ವರ್ತನೆ ಮಾಡುವುದನ್ನ ನಿಲ್ಲಿಸಬೇಕು ಎಂದು ಕಸ್ತೂರಿ ಹೇಳಿಕೊಂಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News