Viral Video : ತಾಂಜೇನಿಯಾದ ಹುಡುಗನ ಮೈ ಮೇಲೆ KGF 2 ಭೂತ : ನಟನೆ ನೋಡಿ ಬೆಚ್ಚಿಬಿದ್ದ ನೆಟ್ಟಿಗರು

ಈ ವಿಡಿಯೋಗಳ ಮೂಲಕ ತಾಂಜಾನಿಯಾದ ಕಿಲಿ ಪೌಲ್ ಇಂದು ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.

Written by - Channabasava A Kashinakunti | Last Updated : Apr 15, 2022, 01:32 PM IST
  • ತಾಂಜಾನಿಯಾದ ಕಿಲಿ ಪೌಲ್
  • ಕಿಲಿ ಪೌಲ್ KGF-2 ಸಿನಿಮಾದ ಡೈಲಾಗ್‌ ವಿಡಿಯೋ ರೀಲ್‌
  • ಕಿಲಿ ಪೌಲ್ ಅದ್ಭುತ ಸ್ಟೈಲ್
Viral Video : ತಾಂಜೇನಿಯಾದ ಹುಡುಗನ ಮೈ ಮೇಲೆ KGF 2 ಭೂತ : ನಟನೆ ನೋಡಿ ಬೆಚ್ಚಿಬಿದ್ದ ನೆಟ್ಟಿಗರು title=

Kili Paul Performance on KGF Chapter 2 : ತಾಂಜಾನಿಯಾದ ಕಿಲಿ ಪೌಲ್ ಇತ್ತೀಚಿನ ದಿನಗಳಲ್ಲಿ ಇಂಡಿಯಾದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾರತೀಯ ಸಿನಿಮಾ ಹಾಡುಗಳಿಗೆ ಡಾನ್ಸ್ ಮತ್ತು ಲಿಪ್-ಸಿಂಕ್‌ ವೀಡಿಯೊಗಳನ್ನು ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಇವರು ಮಾಡು ಶಾರ್ಟ್ ವಿಡಿಯೋಗಳನ್ನ ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಈ ವಿಡಿಯೋಗಳ ಮೂಲಕ ತಾಂಜಾನಿಯಾದ ಕಿಲಿ ಪೌಲ್ ಇಂದು ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.

ಕಿಲಿ ಪೌಲ್ KGF-2 ಸಿನಿಮಾದ ಡೈಲಾಗ್‌ ವಿಡಿಯೋ ರೀಲ್‌

ಕಿಲಿ ಪೌಲ್ ಗೆ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳು ಅಂದ್ರೆ ಇಷ್ಟ. ಅದಕ್ಕಾಗಿಯೇ ಕಿಲಿ ಪ್ರತಿದಿನ ಟಾಲಿವುಡ್‌ನ ಸೂಪರ್‌ಹಿಟ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಮ್ಮ ಕನ್ನಡದ ಬಹುನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ 'ಭೂತ' ಕಿಲಿ ಪಾಲ್‌ಗೆ ಅಂಟಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ ಚಾಪ್ಟರ್ 2' ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಿದೆ. ಕಿಲಿ ಪೌಲ್ ವಿಭಿನ್ನ ಶೈಲಿಯಲ್ಲಿ ಚಿತ್ರದ ಡೈಲಾಗ್‌ಗೆ ಲಿಪ್ ಸಿಂಕ್ ಮಾಡಿದ್ದಾರೆ.

ಇದನ್ನೂ ಓದಿ : Alia-Ranbir Marriage: ʼಕಪೂರ್‌ʼ ಮನೆ ಸೊಸೆಯಾದ ಆಲಿಯಾ ಭಟ್‌

ಕಿಲಿ ಪೌಲ್ ಸಿನಿಮಾ ಡೈಲಾಗ್ ಗೆ ಲಿಪ್ ಸಿಂಕ್ ಜೊತೆಗೆ ಆಕ್ಟಿಂಗ್ ಕೂಡ ಮಾಡಿದ್ದಾರೆ. ಈ ಮೂಲಕ ಇಂಟರ್ನೆಟ್ ಬಳಕೆದಾರರ ಮನ ಗೆದ್ದಿದ್ದಾರೆ. ಸಾಮಾನ್ಯವಾಗಿ ಸಾಂಪ್ರದಾಯಿಕ ಮಸಾಯಿ ಬಟ್ಟೆಯಲ್ಲಿ ವಿಡಿಯೋ ಶೇರ್ ಮಾಡುವ ಕಿಲಿ ಈ ವಿಡಿಯೋದಲ್ಲಿ ವಿಭಿನ್ನವಾದ ಉಡುಗೆಯಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಕಿಲಿ 'ಕೆಜಿಎಫ್ ಚಾಪ್ಟರ್ 2' ನ ಸೂಪರ್ ಹಿಟ್  ಡೈಲಾಗ್‌ಗೆ ಲಿಪ್ ಸಿಂಕ್‌ಗಾಗಿ ಸೂಟ್ ಧರಿಸಿದ್ದಾರೆ. ಕಿಲಿ ಸೂಟ್‌ಬೂಟ್‌ನಲ್ಲಿ ಸಖತ್ ಹ್ಯಾಂಡ್ ಸಮ್ ಆಗಿ ಕಂಡಿದ್ದಾರೆ. ವಿಡಿಯೋ ನೋಡಿ.. 

 
 
 
 

 
 
 
 
 
 
 
 
 
 
 

Shared post on

ಕಿಲಿ ಪೌಲ್ ಅದ್ಭುತ ಸ್ಟೈಲ್

ಕಿಲಿ ಪೌಲ್ ಈ ವೀಡಿಯೊ ಅವರ ಉಳಿದ ವೀಡಿಯೊಗಳಿಗಿಂತ ನಿಜವಾಗಿಯೂ ವಿಭಿನ್ನವಾಗಿದೆ. ಚಿತ್ರದ ಡೈಲಾಗ್‌ಗೆ ಅವರ ಲಿಪ್ ಸಿಂಕ್ ಮಾಡುವಾಗ, ಅವರ ಸ್ಟೈಲ್ ಅದ್ಭುತವಾಗಿ ಮೂಡಿಬಂದಿದೆ. ವಿಡಿಯೋ ನೋಡಿದ್ರೆ ನೀವು ಕೂಡ ನಿಮ್ಮ ಮೂಗಿನ ಮೇಲೆ ಬೆರಳಿಡುವುದು ಖಂಡಿತ. ಯಾಕಂದ್ರೆ, ಅವರ ನಟನೆ ಅಷ್ಟು ಸಖತ್ ಆಗಿದೆ. ಈ ವೀಡಿಯೊವನ್ನು ಕಿಲಿ ಪೌಲ್  ತಮ್ಮ ಇನ್‌ಸ್ಟಾಗ್ರಾಮ್ ಖಾತೆ kili_paul ನಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ : Yash Boss:ದೇಶಾದ್ಯಂತ ಟ್ರೆಂಡ್​ ಆಗ್ತಿದೆ ‘ಯಶ್‌ ಬಾಸ್’ ಹೆಸರು!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News